ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾದ್ರಿ ಬಂಧನ, ಮಳೆ, ಕ್ರಿಕೆಟ್‌:ದೇಶದ ಪ್ರಮುಖ ಘಟನೆಗಳು: ಚಿತ್ರದಲ್ಲಿ

By Nayana
|
Google Oneindia Kannada News

ಬೆಂಗಳೂರು, ಜು.13: ಚರ್ಚ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪಾದ್ರಿಗಳ ವಿರುದ್ಧ ಕೇರಳ ಪೊಲೀಸರು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಕುರಿತಾಗಿ ಮತ್ತೊಬ್ಬ ಪಾದ್ರಿಯೊಂದಿಗೆ ತನಗೆ ದೈಹಿಕ ಸಂಬಂಧವಿದೆ ಎಂದು ತಪ್ಪೊಪ್ಪಿಕೊಂಡ ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಸಿಕೊಂಡ ಪಾದ್ರಿಯನ್ನು ಗುರುವಾರ ಕೊಲ್ಲಂನಲ್ಲಿ ಬಂಧಿಸಲಾಗಿದೆ.

ಕೊಲ್ಲಂ ನಿವಾಸಿಯಾಗಿರುವ 40 ವರ್ಷದ ಫಾದರ್ ಜಾಬ್ ಮ್ಯಾಥ್ಯೂ, ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. 2009ರಲ್ಲಿ ಮಹಿಳೆ ತಪ್ಪೊಪ್ಪಿಕೊಂಡಿದ್ದನ್ನೇ ಬ್ಲಾಕ್ ಮೇಲ್ ಮಾಡಿ ಆಕೆಯನ್ನು ಬಳಕೆ ಮಾಡಿಕೊಂಡಿದ್ದ, ನನ್ನ ಹೆಂಡತಿ ಚರ್ಚ್ ನಲ್ಲಿ ಹೇಳಿಕೊಂಡ ತಪ್ಪೊಪ್ಪಿಗೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಬಳಸಿ, ಆ ನಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ" ಎಂದು ಮಲಂಕರ ಸಿರಿಯನ್ ಚರ್ಚ್ ನ ಐವರು ಪಾದ್ರಿಗಳ ವಿರುದ್ಧ ಪತ್ತನಮಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ಆರೋಪ ಮಾಡಿದ್ದರು.

ಎರಡು ದಿನಗಳ ಹಿಂದೆ ಮೂವರು ಪಾದ್ರಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕೇರಳ ಹೈ ಕೋರ್ಟ್ ಆ ಅರ್ಜಿಗಳನ್ನು ತಿರಸ್ಕರಿಸಿದೆ. ಕೂಡಲೆ ಕಾರ್ಯಪ್ರವೃತ್ತರಾದ ಕ್ರೈಂ ರೆಕಾರ್ಡ್ ಬ್ಯೂರೋ ಪೊಲೀಸರು ಒಬ್ಬ ಪಾದ್ರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇದಕ್ಕೆ ಸಂಬಂಧಿಸಿದ ಚಿತ್ರವನ್ನು ನೀವು ನೋಡಬಹುದು.

ಇನ್ನು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೋಮನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮುನ್ನ ದೇವರ ಪೂಜೆಗೆ ಬಳಸುವ ವಸ್ತುಗಳನ್ನು ತಲೆಯ ಮೇಲಿರಿಸಿಕೊಂಡು ದೇವಾಲಯದ ಪ್ರದಕ್ಷಿಣೆ ಮಾಡಿದರು ಈ ದೃಶ್ಯವನ್ನು ನೋಡಬಹುದು, ಸೂರತ್‌ನಲ್ಲಿ ಭಾರಿ ಮಳೆಗೆ ರಸ್ತೆಗಳೆಲ್ಲಾ ಸಂಪೂರ್ಣವಾಗಿ ಜಲಾವೃತವಾಗಿದ್ದು ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ತಂಡವನ್ನು ಭಾರತ ತಂಡ 268ರನ್ ಗಳಿಗೆ ಕಟ್ಟಿ ಹಾಕಿದೆ. ಭಾರತದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 250 ರನ್ ಗಳನ್ನು ಕಲೆ ಹಾಕಿದರು.

ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಚೋ ಇಂಗ್ಲೆಂಡ್ ತಂಡಕ್ಕೆ 73 ರನ್ ಗಳ ಉತ್ತಮ ಆರಂಭಿಕ ಜೊತೆಯಾಟ ನೀಡಿದರು ಇದೆಲ್ಲಾ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ನೀವು ವೀಕ್ಷಿಸಬಹುದು.

ಕೇರಳ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ

ಕೇರಳ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ

ಚರ್ಚ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪಾದ್ರಿಗಳ ವಿರುದ್ಧ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ 40 ವರ್ಷದ ಫಾದರ್‌ ಜಾಬ್‌ ಮ್ಯಾಥ್ಯೂವನ್ನು ಪೊಲೀಸರು ಬಂಧಿಸಿದ್ದಾರೆ. ನನ್ನ ಹೆಂಡತಿ ಚರ್ಚ್ ನಲ್ಲಿ ಹೇಳಿಕೊಂಡ ತಪ್ಪೊಪ್ಪಿಗೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಬಳಸಿ, ಆ ನಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ" ಎಂದು ಮಲಂಕರ ಸಿರಿಯನ್ ಚರ್ಚ್ ನ ಐವರು ಪಾದ್ರಿಗಳ ವಿರುದ್ಧ ಪತ್ತನಮಿಟ್ಟ ಜಿಲ್ಲೆಯ ವ್ಯಕ್ತಿಯೊಬ್ಬರು ಆರೋಪ ಮಾಡಿದ್ದರು.

ಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನಕೇರಳ ಪಾದ್ರಿಗಳ ಲೈಂಗಿಕ ಪುರಾಣ : ಕಾಮುಕ ಪಾದ್ರಿ ಜಾಬ್ ಮ್ಯಾಥ್ಯೂ ಬಂಧನ

ಮೋಹನ್‌ ಭಾಗವತ್‌ ಸೋಮನಾಥ ದೇವಸ್ಥಾನಕ್ಕೆ ಭೇಟಿ

ಮೋಹನ್‌ ಭಾಗವತ್‌ ಸೋಮನಾಥ ದೇವಸ್ಥಾನಕ್ಕೆ ಭೇಟಿ

ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ ಹಾಗೂ ಮಾಜಿ ಬಿಜೆಪಿ ಮುಖಂಡ ಕೇಶುಭಾಯ್‌ ಪಟೇಲ್‌ ಸೋಮನಾಥ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು, ಪ್ರಾರ್ಥನೆಗೂ ಮುನ್ನ ಪೂಜೆಗೆ ಬೇಕಾದ ವಸ್ತುಗಳನ್ನು ಹಿಡಿದು ದೇವಸ್ಥಾನ ಪ್ರದಕ್ಷಿಣೆ ಹಾಕಿದರು.

ಸೂರತ್‌ನಲ್ಲಿ ಭಾರಿ ಮಳೆ, ಹೊಳೆಯಾದ ಅಂಡರ್‌ಪಾಸ್‌

ಸೂರತ್‌ನಲ್ಲಿ ಭಾರಿ ಮಳೆ, ಹೊಳೆಯಾದ ಅಂಡರ್‌ಪಾಸ್‌

ಸೂರತ್‌ನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ ಅಷ್ಟೇ ಅಲ್ಲದೆ ಅಂಡರ್‌ಪಾಸ್‌ಗಳನ್ನು ಸೊಂಟದವರೆಗೆ ನೀರು ನಿಂತಿದ್ದು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಚಿತ್ರಗಳು: ಮುಗಿಲಲ್ಲಿ ಕಟ್ಟಿದ ಕಾರ್ಮೋಡ, ಇಳೆಯಲ್ಲಿ ಬಿಡದ ಮಳೆಚಿತ್ರಗಳು: ಮುಗಿಲಲ್ಲಿ ಕಟ್ಟಿದ ಕಾರ್ಮೋಡ, ಇಳೆಯಲ್ಲಿ ಬಿಡದ ಮಳೆ

ಕುಲದೀಪ್ ಮಾರಕ ಬೌಲಿಂಗ್,ಇಂಗ್ಲೆಂಡ್ ಕಟ್ಟಿ ಹಾಕಿದ ಟೀಂ ಇಂಡಿಯಾ

ಕುಲದೀಪ್ ಮಾರಕ ಬೌಲಿಂಗ್,ಇಂಗ್ಲೆಂಡ್ ಕಟ್ಟಿ ಹಾಕಿದ ಟೀಂ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಆರಂಭವಾಗಿದ್ದು, ಇಂಗ್ಲೆಂಡ್ ತಂಡವನ್ನು ಭಾರತ ತಂಡ 268ರನ್ ಗಳಿಗೆ ಕಟ್ಟಿ ಹಾಕಿದೆ. ಭಾರತದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 250 ರನ್ ಗಳನ್ನು ಕಲೆ ಹಾಕಿದರು. ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜೇಸನ್ ರಾಯ್ ಮತ್ತು ಜಾನಿ ಬೇರ್ ಸ್ಚೋ ಇಂಗ್ಲೆಂಡ್ ತಂಡಕ್ಕೆ 73 ರನ್ ಗಳ ಉತ್ತಮ ಆರಂಭಿಕ ಜೊತೆಯಾಟ ನೀಡಿದರು.

ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಟ್ವಿಟ್ಟರಿಗರ ಗುಣಗಾನ

ಬಿಎಸ್‌ವೈ ಸಲಹೆ, ಸದನ ಕಲಾಪ ಒಂದು ದಿನ ವಿಸ್ತರಣೆ

ಬಿಎಸ್‌ವೈ ಸಲಹೆ, ಸದನ ಕಲಾಪ ಒಂದು ದಿನ ವಿಸ್ತರಣೆ

ಬಿಎಸ್‌ ಯಡಿಯೂರಪ್ಪ ಸಲಹೆ ಮತ್ತು ಬೇಡಿಕೆಯಂತೆ ವಿಧಾನ ಮಂಡಲದ ಕಲಾಪವನ್ನು ಒಂದು ದಿನ ವಿಸ್ತರಣೆ ಮಾಡಲಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ವಾಪಸ್‌ ಹಾಗೂ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ಬಸ್‌ ಪಾಸ್ ಯೋಜನೆಯ ಅನುಷ್ಠಾನದ ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವುದು ಒಂದು ದಿನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಕಲಾಪವನ್ನು ಶುಕ್ರವಾರದವರೆಗೆ ವಿಸ್ತರಿಸಲಾಗಿದೆ.

ಬಜೆಟ್‌ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರಬಜೆಟ್‌ ಬಗ್ಗೆ ವಿರೋಧ ಪಕ್ಷದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಖಡಕ್ ಉತ್ತರ

ಮುಂಬೈ: ಮಿಸ್‌ ಇಂಡಿಯಾ 2018 ಆಗಿ ಅನುಕೀರ್ತಿ ವಾಸ್‌

ಮುಂಬೈ: ಮಿಸ್‌ ಇಂಡಿಯಾ 2018 ಆಗಿ ಅನುಕೀರ್ತಿ ವಾಸ್‌

ಫೆಮಿನಾ ಮಿಸ್‌ ಇಂಡಿಯಾ 2018 ಕಿರೀಟವನ್ನು ತಮಿಳುನಾಡಿನ 19 ವರ್ಷದ ಅನುಕೀರ್ತಿ ವಾಸ್‌ ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಿರ್ಮಾಪಕ ಕರಣ್‌ ಜೋಹರ್‌ ಮತ್ತು ನಟ ಆಯುಶ್ಮಾನ್‌ ಖುರಾನಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಅನಿಕೀರ್ತಿ ಪ್ರಶಸ್ತಿ ಮುಡುಗೇರಿಸಿಕೊಂಡರು. ತೀರ್ಪುಗಾರರಲ್ಲಿ ಒಬ್ಬರಾಗಿದ್ದ 2017ರ ಮಿಸ್‌ ವರ್ಲ್ಡ್‌ ವಿನ್ನರ್‌ ಮಾನುಷಿ ಚಿಲ್ಲರ್‌ ಅನುಕೀರ್ತಿಗೆ ಮಿಸ್‌ ಇಂಡಿಯಾ-2018 ಕಿರೀಟ ತೊಡಿಸಿದರು.

English summary
One of the four priests from Kerala involved in the sexual abuse of a parishioner, Father Job Mathew, has been arrested from a place near Kollam, police said on Thursday. The accused priest, however, denied he was arrested and insisted he had surrendered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X