ಕೇರಳದಲ್ಲಿ ರೈಲ್ವೇ ಸೇತುವೆ ಕೆಳಗೆ ಸಜೀವ ಬಾಂಬ್ ಪತ್ತೆ

Subscribe to Oneindia Kannada

ತಿರುವನಂತಪುರಂ, ಜನವರಿ 5: ಕೇರಳ ಪೊಲೀಸರು ಪ್ರಮುಖ ಭಯೋತ್ಪಾದಕ ದುರಂತವೊಂದನ್ನು ತಪ್ಪಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಇಲ್ಲಿನ ಮಲಪ್ಪುರಂ ಜಿಲ್ಲೆಯ ರೈಲ್ವೇ ಸೇತುವೆ ಸಮೀಪ ಮಿಲಿಟರಿ ದರ್ಜೆಯ ಸ್ಪೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು ಪ್ರಮುಖ ದಾಳಿಯನ್ನು ತಪ್ಪಿಸಿದ್ದಾಗಿ ಮಾಹಿತಿ ನೀಡಿದ್ದಾರೆ.

ಭಾರತಪುಝದಲ್ಲಿರುವ ಕುಟ್ಟಿಪುರಂ ರೈಲ್ವೇ ಸೇತುವೆ ಕೆಳಗೆ 5 ಕಂಟೈನರ್ ಗಳಲ್ಲಿ ಸ್ಪೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾಗಿ ಎಎನ್ಐ ವರದಿ ಮಾಡಿದೆ. ಇವುಗಳು ಮಿಲಿಟರಿ ದರ್ಜೆಯ ಸ್ಪೋಟಕಗಳು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

Kerala: Police found 5 metal containers containing explosives under Railway bridge

ಈ ಸ್ಫೋಟಕಗಳನ್ನು ಸ್ಫೋಟಿಸಲೆಂದೇ ಉಗ್ರರು ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಫೋಟಕಗಳನ್ನು ಪತ್ತೆ ಹಚ್ಚಿರುವುದರಿಂದ ಪ್ರಮುಖ ಭಯೋತ್ಪಾದಕ ದಾಳಿಯೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kerala: Police found 5 metal containers containing explosives, under Kuttippuram Railway bridge in Bharathappuzha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ