ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಆರೋಪಿ ಫ್ರಾಂಕೋ ಮುಳಕ್ಕಲ್ ಪೊಲೀಸ್ ಕಸ್ಟಡಿಗೆ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 22 : ಕ್ರೈಸ್ತ ಸನ್ಯಾಸಿನಿಯ ಮೇಲೆ ಎರಡು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಹೊತ್ತಿರುವ ಕೇರಳ ಮೂಲದ, ಜಲಂಧರ್ ಡಯೋಸೀಸ್ ನ ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ ನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿದೆ.

ಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನ ಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನ

54 ವರ್ಷದ ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ ಪರವಾಗಿ ವಾದಿಸುತ್ತಿರುವ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆತನನ್ನು ಸೋಮವಾರ 2.30ಕ್ಕೆ ಮತ್ತೆ ಹಾಜರು ಪಡಿಸುವಂತೆ ಆದೇಶಿಸಲಾಗಿದೆ.

ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ

44 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿರುವ ಫ್ರಾಂಕೋ ಮುಳಕ್ಕಲ್ ಬಂಧನ ತಪ್ಪಿಸಿಕೊಳ್ಳಲು ಭಾರೀ ಪ್ರಯತ್ನ ನಡೆಸಿದ್ದ. ಶನಿವಾರ ಬೆಳಿಗ್ಗೆ ತನಗೆ ಎದೆ ನೋಯಿಸುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದ. ಆದರೆ, ತಪಾಸಣೆಯ ನಂತರ ಆತನಿಗೆ ಏನೂ ಆಗಿಲ್ಲವೆಂದು ವೈದ್ಯರು ಹೇಳಿದರು.

Kerala nun rape case : Franco Mulakkal sent to police custody

ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ವರದಿಯಲ್ಲಿ, ಆತ ಅತ್ಯಾಚಾರ ನಡೆಸುವ ಉದ್ದೇಶದಿಂದಲೇ ಕಾನ್ವೆಂಟ್ ನ ರೂಂ ನಂಬರ್ 20ರಲ್ಲಿ ತಂಗಿದ್ದ. 10.48ರ ಸುಮಾರಿಗೆ ಸಂತ್ರಸ್ತ ಕ್ರೈಸ್ತ ಸನ್ಯಾಸಿನಿಯನ್ನು ತನ್ನ ರೂಮಿಗೆ ಕರೆಯಿಸಿಕೊಂಡು ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಹೇಳಲಾಗಿದೆ.

ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ

ಆ ಘಟನೆಯ ಬಗ್ಗೆ ಯಾರಿಗಾದರೂ ಬಾಯಿಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಸನ್ಯಾಸಿನಿಗೆ ಬಿಷಪ್ ಫ್ರಾಂಕೋ ಬೆದರಿಕೆ ಒಡ್ಡಿದ್ದ. ಈ ಘಟನೆ ನಡೆದಿದ್ದು 2014ರ ಮೇಲ 5ರಂದು. ನಂತರ ಮೇ 6ರಂದೂ ಆತ ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇಷ್ಟು ಸಾಲದೆಂಬಂತೆ, 2014ರಿಂದ 2016ರೊಳಗೆ ಕ್ರೈಸ್ತ ಸನ್ಯಾಸಿನಿಯನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಲ್ಲದೆ 13 ಬಾರಿ ಅತ್ಯಾಚಾರವನ್ನೂ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಲ್ಲಿಸಿರುವ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯ, ಇದು ಗಂಭೀರ ಪ್ರಕರಣವಾಗಿದ್ದು, ಆರೋಪಿ ಫ್ರಾಂಕೋ ಸಾಕ್ಷಿ ನಾಶಮಾಡಬಹುದು ಎಂಬ ಕಾರಣದಿಂದ ಜಾಮೀನನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಮೂರು ತಿಂಗಳ ಹಿಂದೆ, ತಮ್ಮ ಮೇಲೆ ಅತ್ಯಾಚಾರವಾಗಿದೆ ಎಂದು ಕ್ರೈಸ್ತ ಸನ್ಯಾಸಿನಿ ದೂರು ನೀಡಿದ್ದರು. ರಾಜ್ಯಾದ್ಯಂತ ಫ್ರಾಂಕೋ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಬಂಧನವಾಗಿದ್ದು ಮತ್ತು ಜಾಮೀನು ನಿರಾಕರಿಸಿ ಜೈಲಿಗೆ ತಳ್ಳಿದ್ದು ಮೊದಲ ಜಯ ಸಿಕ್ಕಂತಾಗಿದೆ.

English summary
Kerala nun rape case: Former Bishop of Jalandhar, Franco Mulakkal, sent to police custody till 24 September. His bail application has been dismissed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X