ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಲುಕಿರುವ ಜಲಂಧರ್‌ನ ಬಿಷಪ್ ಫ್ರಾಂಕೋ ಮುಲಕ್ಕಲ್ ತಮ್ಮ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ.

ಈ ಪ್ರಕರಣವು ವ್ಯಾಟಿಕನ್ ಗಮನಕ್ಕೆ ಬಂದಿರುವುದರಿಂದ ಅವರು ಬಿಷಪ್ ಸ್ಥಾನವನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ. ಭಾರತದಲ್ಲಿನ ಚರ್ಚ್ ಪ್ರತಿನಿಧಿ ವ್ಯಾಟಿಕನ್‌ನಲ್ಲಿದ್ದು, ಈ ವಿವಾದದ ಕುರಿತಂತೆ ಚರ್ಚಿಸುವ ನಿರೀಕ್ಷೆಯಿದೆ.

'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ

'ಈ ಸಂಕಷ್ಟದ ಸಮಯದಲ್ಲಿಯೂ ನನಗೆ ಬೆಂಬಲ ನೀಡುತ್ತಿರುವ ಮತ್ತು ನನಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿರುವುದು ಮಾಧ್ಯಮಗಳ ಮೂಲಕ ನಿಮಗೆ ತಿಳಿದಿರಬಹುದು.

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಿಡುಗಡೆ ಮಾಡಿದ ಮಿಷನರಿ ವಿರುದ್ಧ ದೂರುಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಿಡುಗಡೆ ಮಾಡಿದ ಮಿಷನರಿ ವಿರುದ್ಧ ದೂರು

Kerala nun rape case accuse Bishop Franco Mulakkal steps down

ಪೊಲೀಸರ ವರದಿ ಪ್ರಕಾರ ನನ್ನ ವಿರುದ್ಧ ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ವಿರೋಧಾಭಾಸಗಳಿವೆ. ಕೇರಳದಲ್ಲಿರುವ ತನಿಖಾಧಿಕಾರಿಗೆ ಉಳಿದ ಸ್ಪಷ್ಟನೆಗಳನ್ನು ನೀಡುವಂತೆ ನನಗೆ ಕರೆ ನೀಡಲಾಗುವುದು ಎಂದು ಮಾಧ್ಯಮ ವರದಿ ತಿಳಿಸಿದೆ.

ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರ

ನಾನು ಎಲ್ಲವನ್ನೂ ದೇವರ ಕೈಗೆ ಬಿಟ್ಟಿದ್ದೇನೆ. ಆರೋಪದ ತನಿಖೆ ನಡೆಸುತ್ತಿರುವ ತಂಡದ ಫಲಿತಾಂಶಕ್ಕೆ ಕಾಯುತ್ತೇನೆ. ನನ್ನ ಅನುಪಸ್ಥಿತಿಯಲ್ಲಿ ಹಿಂದಿನಂತೆಯೇ ಮ್ಯಾಥ್ಯೂ ಕೊಕ್ಕಂಡಮ್ ಅವರು ಡಿಯೊಸಿಸ್ ಆಡಳಿತ ನಿರ್ವಹಿಸಲಿದ್ದಾರೆ' ಎಂದು ಬಿಷಪ್ ಫ್ರಾಂಕೊ ಹೇಳಿದ್ದಾರೆ.

English summary
Accused of Kerala Nun rape case Jalandhar Bishop Franco Mulakkal has stepped down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X