ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಟನಾಕಾರರಿಗೆ ಗನ್ ತೋರಿಸಿದ ಕೇರಳ ಶಾಸಕ

|
Google Oneindia Kannada News

ಕೋಟ್ಟಯಂ: ಕೇರಳದ ಪಕ್ಷೇತರ ಶಾಸಕರೊಬ್ಬರ ಕಾರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ ಆಕ್ರೋಶಗೊಂಡ ಶಾಸಕ ಗನ್ ತೋರಿಸಿ ದರ್ಪ ಮೆರೆದಿದ್ದಾರೆ.

ಶಾಸಕ ಪಿ,ಸಿ. ಜಾರ್ಜ್ ಅವರು ಮುಂಡಕ್ಕಯಂ ಬಳಿ ಎಸ್ಟೇಟ್‍ ವೊಂದಕ್ಕೆ ಭೇಟಿ ನೀಡಲು ಬಂದಾಗ ಪ್ರತಿಭಟನಾಕಾರರು ಘೋಷಣೆ ಕೂಗಿ ಶಾಸಕರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ಜಾರ್ಜ್ ಅವರು ಗನ್ ತೋರಿಸಿದ ಘಟನೆ ಗುರುವಾರ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.

Kerala MLA P C George waves gun at group of people

ಮುಂಡಕ್ಕಯಂ ಎಸ್ಟೇಟ್ ಬಳಿ ವಾಸಿಸುತ್ತಿರುವ 52 ಬಡ ಕುಟುಂಬಗಳನ್ನು ಭೇಟಿ ಮಾಡುವುದಕ್ಕಾಗಿ ಪೂಂಜಾರ್ ಕ್ಷೇತ್ರದ ಶಾಸಕ ಪಿ,ಸಿ ಜಾರ್ಜ್ ಬಂದಿದ್ದರು. ಎಸ್ಟೇಟ್ ಬಳಿ ವಾಸಿಸುತ್ತಿರುವ ಬಡವರ ಕುಟುಂಬಗಳಿಗೆ ಕೆಲವು ಪುಂಡರು ತೊಂದರೆ ಕೊಡುತ್ತಿರುವುದಾಗಿ ಅಲ್ಲಿನ ನಿವಾಸಿಗಳು ದೂರಿದ್ದರು.

ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ ಸಂಸದನಿಗೆ ಛೀಮಾರಿಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಿದ ಸಂಸದನಿಗೆ ಛೀಮಾರಿ

ಎಸ್ಟೇಟ್ ಬಳಿ ವಾಸಿಸುತ್ತಿರುವ ನಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಲು ರಾತ್ರಿ ಹೊತ್ತು ತೊಂದರೆ ನೀಡಲಾಗುತ್ತಿದೆ ಎಂದು ಅಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಳಲು ತೋಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಾರ್ಜ್ ಆ ಪ್ರದೇಶಕ್ಕೆ ಭೇಟಿ ನೀಡಿದ್ದರು.

ಜಾರ್ಜ್ ಅವರು ಅಲ್ಲಿಗೆ ಕಾಲಿಡುತ್ತಿದ್ದಂತೆ ಕೆಲವು ಪ್ರತಿಭಟನಾಕಾರರು ಜಾರ್ಜ್ ಅವರ ವಿರುದ್ಧ ಘೋಷಣೆ ಕೂಗಿ ಸುತ್ತುವರಿದಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ಜಾರ್ಜ್ ಗನ್ ತೋರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್, "ನಾನು ಗನ್ ಹೊರ ತೆಗೆಯುವಂತೆ ಮಾಡಿದ್ದೇ ಆ ಪುಂಡರು. ನನ್ನ ಕೈಯಲ್ಲಿರುವುದು ಪರವಾನಗಿ ಇರುವ ಗನ್. ನನ್ನಲ್ಲಿಯೂ ಗನ್ ಇದೆ ಎಂದು ತೋರಿಸುವುದಕ್ಕಾಗಿಯೇ ಪಿಸ್ತೂಲ್ ಹೊರತೆಗೆದೆ ಎಂದು ಸಮರ್ಥಸಿಕೊಂಡರು.

English summary
A senior Kerala MLA today waved a pistol at a group of people, said to be estate workers, who allegedly shouted slogans at him and "challenged" him during his visit at a site near an estate in the district to take stock of a land dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X