ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ಘಾನಿಸ್ತಾನದಲ್ಲಿ ಕೇರಳ ಮೂಲದ ಮತ್ತೊಬ್ಬ ಉಗ್ರನ ಸಾವು!

ಅಮೆರಿಕ ನಡೆಸಿದ ದಾಳಿಯಲ್ಲಿ ಐಎಸ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆತನ ಪೋಷಕರಿಗೆ ಸಾಮಾಜಿಕ ಜಾಲತಾಣದ ಅಪ್ಲಿಕೇಷನ್ ಟೆಲಿಗ್ರಾಮ್ ಮೂಲಕ ಅಸ್ಫಾಕ್ ಎಂಬಾತ ಮಾಹಿತಿ ನೀಡಿದ್ದಾರೆ

|
Google Oneindia Kannada News

ಕಾಸರಗೋಡು, ಏಪ್ರಿಲ್ 30: ಕೇರಳ ಮೂಲದ, ಕಳೆದ ವರ್ಷ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಆಫ್ಘಾನಿಸ್ತಾನದಲ್ಲಿ ಅಮೆರಿಕದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ. ಟೆಲಿಗ್ರಾಮ್ ಮೂಲಕ ಯಾಹ್ಯಾನ ಸಂಬಂಧಿಕರಿಗೆ ಈ ಬಗ್ಗೆ ಕಳೆದ ರಾತ್ರಿ ಮಾಹಿತಿ ಸಿಕ್ಕಿದೆ.

ಟೆಲಿಗ್ರಾಮ್ ಅಂದರೆ ಸಾಮಾಜಿಕ ಜಾಲತಾಣದ ಅಪ್ಲಿಕೇಷನ್ ಎಂದು ಬಿಸಿಎ ರಹಿಮಾನ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಅಮೆರಿಕದ ದಾಳಿಯಲ್ಲಿ ಯಾಹ್ಯಾ ಹುತಾತ್ಮನಾಗಿದ್ದಾನೆ ಎಂದು ಅಸ್ಫಾಕ್ ಎಂಬಾತ ಸಂದೇಶವನ್ನು ಕಳುಹಿಸಿದ್ದಾನೆ. ಅಮೆರಿಕ ಸೇನೆಯೊಡನೆ ಕಾಳಗದಲ್ಲಿ ಆತ ಮೃತ ಪಟ್ಟಿದ್ದಾನೆ ಎಂದು ಸಂದೇಶದಲ್ಲಿದೆ. ಆದರೆ ಅತ ಯಾವಾಗ ಸತ್ತ ಎಂಬ ಬಗ್ಗೆ ಮಾಹಿತಿ ಇಲ್ಲ.[ISIS ಅಡಗುದಾಣಗಳ ಮೇಲೆ ಬಾಂಬ್: ಕೇರಳದ ಯುವಕರ ಸಾವು?]

Kerala man who ‘joined’ IS killed in US attack in Afghanistan

ಆದರೆ, ಪಾಲಕ್ಕಾಡ್ ನ ವಿಶೇಷ ವಿಭಾಗದ ಪೊಲೀಸರು ಸುದ್ದಿಯನ್ನು ಖಾತ್ರಿ ಪಡಿಸಿಲ್ಲ. ಆದರೆ ಸಂದೇಶದ ಉಲ್ಲೇಖ ಮಾಡಿದ್ದಾರೆ. ಯಾಹ್ಯಾ ಇಸ್ಲಾಂಗೆ ಮತಾಂತರಗೊಂಡಿದ್ದ. ಕೇರಳದಿಂದ ನಾಪತ್ತೆಯಾಗಿ, ಕಳೆದ ವರ್ಷ ಮಧ್ಯಪ್ರಾಚ್ಯಕ್ಕೆ ತೆರಳಿ ಸಿರಿಯಾದಲ್ಲಿ ಉಗ್ರ ಸಂಘಟನೆ ಸೇರಿದ್ದ ಇಪ್ಪತ್ತೊಂದು ಮಂದಿಯಲ್ಲಿ ಈತನೂ ಒಬ್ಬನಾಗಿದ್ದ.

ಹದಿನೈದು ದಿನಗಳ ಹಿಂದೆ ಪದ್ನಾ ಜಿಲ್ಲೆಯ ಮುರ್ಷಿದ್ ಮುಹಮ್ಮದ್ ಎಂಬಾತ ಆಫ್ಘಾನಿಸ್ತಾನದಲ್ಲಿ ನಡೆದ ಡ್ರೋಣ್ ದಾಳಿಯಲ್ಲಿ ಮೃತಪಟ್ಟಿದ್ದ.

English summary
A Kerala resident, who had allegedly joined the Islamic State last year, is believed to have been killed in a US air strike in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X