ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ದೋಷಿಗೆ ಗಲ್ಲು

By ಮಾಧುರಿ ಅದ್ನಾಳ್
|
Google Oneindia Kannada News

ಎರ್ನಾಕುಲಂ, ಡಿಸೆಂಬರ್ 14: ಕೇರಳದ ಕಾನೂನು ವಿದ್ಯಾರ್ಥಿನಿ ಜಿಶಾ(29) ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಅಮೀರುಲ್ ಇಸ್ಲಾಂ ನನ್ನು ದೋಷಿ ಎಂದು ಘೋಷಿಸಿರುವ ಇಲ್ಲಿನ ಮುಖ್ಯ ಸೆಶನ್ ಕೋರ್ಟ್, ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!

2016 ರ ಏಪ್ರಿಲ್ 28 ರಂದು ಕೇರಳದ ಎರ್ಕಾಕುಲಂ ನಲ್ಲಿರುವ ಪೆರಂಬವೂರ್ ನ ಮನೆಯಲ್ಲಿ 29 ವರ್ಷ ವಯಸ್ಸಿನ ಕಾನೂನು ವಿದ್ಯಾರ್ಥಿನಿ ಜಿಶಾ ಶವ ಪತ್ತೆಯಾಗಿತ್ತು. ಘಟನೆ ನಡೆದ 50 ದಿನದ ನಂತರ ಅಮೀರುಲ್ ಇಸ್ಲಾಂ ಎಂಬ 23 ವರ್ಷ ವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

Kerala law student's rape and murder: Convict Ameerul Islam gets death sentence

ಅಸ್ಸಾಂ ನ ನಾಗೂನ್ ಜಿಲ್ಲೆಯಿಂದ ಕೆಲಸಕ್ಕೆಂದು ಕೇರಳಕ್ಕೆ ಬಂದಿದ್ದ ಈತ ಕೊಲೆ ಮಾಡಿದ ನಂತರ ಅಲ್ಲಿಂದ ಕಾಲ್ಕಿತ್ತು ತಮಿಳುನಾಡಿಗೆ ತೆರಳಿದ್ದ. ಆತನನ್ನು ತಮಿಳುನಾಡಿನ ಕಾಂಚಿಪುರಂ ನಲ್ಲಿ ಬಂಧಿಸಿದಾಗ ಆತನೇ ಕೊಲೆ ಮಾಡಿದ್ದು ಎಂಬ ವಿಷಯವಿಚಾರಣೆಯ ನಂತರ ಸಾಬೀತಾಯಿತು.

ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ

ಏಪ್ರಿಲ್ 28, 2016 ರಂದು ಕಾನೂನು ವಿದ್ಯಾರ್ಥಿಯನ್ನು ಆಕೆಯ ಮನೆಯಲ್ಲಿಯೇ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ದೇಹದ ಮೇಲೆ ಹರಿತವಾದ ಆಯುದ್ಧದಿಂದ ಹಲವೆಡೆ ಗಾಯಗಳನ್ನೂ ಮಾಡಿದ್ದ. ಈ ಬರ್ಬರ ಹತ್ಯೆ ಕೇರಳದಾದ್ಯಂತ ಆತಂಕ ಸೃಷ್ಟಿಸಿತ್ತು.

English summary
The Ernakulam Principal Sessions Court on Thursday pronounced the death sentence for Ameerul Islam, a migrant worker from Assam, who was found guilty in the Kerala law student's murder and rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X