ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡು ಮೂಲದ ಐಸಿಸ್ ಉಗ್ರ ಅಫ್ಘಾನಿಸ್ತಾನದಲ್ಲಿ ಹತ್ಯೆ

|
Google Oneindia Kannada News

ನವದೆಹಲಿ, ಜೂನ್ 3: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕೇರಳ ಘಟಕದ ಮುಖಂಡ ರಶೀದ್ ಅಬ್ದುಲ್ಲಾ ಒಂದು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾಗಿದ್ದಾನೆ ಎನ್ನಲಾಗಿದೆ.

ಅಫ್ಘಾನಿಸ್ತಾನದ ಖೋರಾಸನ್ ಪ್ರಾಂತ್ಯದಿಂದ ಅಪರಿಚಿತ ಐಎಸ್ ಉಗ್ರ ಮುಖಂಡನೊಬ್ಬ ಟೆಲಿಗ್ರಾಂ ಆಪ್‌ನಲ್ಲಿ ಕಳುಹಿಸಿರುವ ಸಂದೇಶದಲ್ಲಿ ಅಮೆರಿಕ ಪಡೆಗಳು ಮನಬಂದಂತೆ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನುವುದು ತಿಳಿದುಬಂದಿದೆ.

'ಒಟ್ಟು ಮೂರು ಮಂದಿ ಭಾರತೀಯ ಸಹೋದರರು, ಇಬ್ಬರು ಭಾರತೀಯ ಮಹಿಳೆಯರು ಮತ್ತು ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ' ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇರಳದ ಐಎಸ್ ಘಟಕದ ಕುರಿತು ತನಿಖೆ ನಡೆಸುತ್ತಿದೆ. ಕೇರಳದಿಂದ ಅಫ್ಘಾನಿಸ್ತಾಕ್ಕೆ ತೆರಳಿದ್ದ ಗುಂಪು ಐಎಸ್ ಸಂಘಟನೆ ಸೇರಿದೆ ಎಂದು ಅದು ತಿಳಿಸಿತ್ತು. ಅಫ್ಘಾನಿಸ್ತಾನದಲ್ಲಿ ಅವರಿಗೆ ತರಬೇತಿ ನೀಡಿ ಭಾರತಕ್ಕೆ ಮರಳಿ ಬಂದು ಇಲ್ಲಿ ದಾಳಿಗಳನ್ನು ನಡೆಸುವುದು ಅವರ ಉದ್ದೇಶ ಎಂದು ಎನ್‌ಐಎ ಹೇಳಿತ್ತು.

ಕೇರಳದಿಂದ 21 ಮಂದಿ ಅಫ್ಘಾನಿಸ್ತಾನಕ್ಕೆ

ಕೇರಳದಿಂದ 21 ಮಂದಿ ಅಫ್ಘಾನಿಸ್ತಾನಕ್ಕೆ

ರಶೀದ್ ಅಬ್ದುಲ್ಲಾ 2016ರ ಮೇ-ಜೂನ್ ಅವಧಿಯಲ್ಲಿ ತನ್ನ ನಾಯಕತ್ವದಲ್ಲಿ ಕೇರಳದಿಂದ 21 ಮಂದಿಯನ್ನು ಅಫ್ಘಾನಿಸ್ತಾನದ ಐಎಸ್ ಪ್ರಬಲ ಪ್ರದೇಶಕ್ಕೆ ಕರೆದೊಯ್ದಿದ್ದ. ಯುಎಇಗೆ ತೆರಳಿದ್ದ ಅವರು ಅಲ್ಲಿಂದ ಟೆಹರಾನ್ ಸೇರಿದ್ದರು. ಬಳಿಕ ಅಫ್ಘಾನಿಸ್ತಾನಕ್ಕೆ ತಲುಪಿದ್ದರು. ಆತನ ಹೆಂಡತಿ ಆಯೇಷಾ ಅಲಿಯಾಸ್ ಸೋನಿಯಾ ಕೂಡ ಈ ಗುಂಪಿನಲ್ಲಿದ್ದಳು. ಶಾಜೀರ್ ಮಂಗಲಸ್ಸೇರಿ ಅಬ್ದುಲ್ಲಾನ ಹತ್ಯೆಯ ಬಳಿಕ ಆತ ಕೇರಳ ಘಟಕದ ನಾಯಕತ್ವ ವಹಿಸಿಕೊಂಡಿದ್ದ. ಎಂಜಿನಿಯರಿಂಗ್ ಪದವೀಧರ ಶಾಜೀರ್ ಕೇರಳದ ಕೋಯಿಕ್ಕೋಡ್‌ನವನಾಗಿದ್ದು, ಆತನೂ ಅಫ್ಘಾನಿಸ್ತಾನದಲ್ಲಿ ಮೃತಪಟ್ಟಿದ್ದ.

ವಿಷ ಹಾಕಿ, ಲಾರಿ ಹರಿಸಿ ಸಾಯಿಸುವ ಐಸಿಸ್ ನ ವಿಕೃತ ಯೋಜನೆ ಬಯಲು!ವಿಷ ಹಾಕಿ, ಲಾರಿ ಹರಿಸಿ ಸಾಯಿಸುವ ಐಸಿಸ್ ನ ವಿಕೃತ ಯೋಜನೆ ಬಯಲು!

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ

ಕಾಸರಗೋಡಿನ ಮೂಲದವನಾದ ಅಬ್ದುಲ್ಲಾನ ಟೆಲಿಗ್ರಾಂ ಖಾತೆಯ ಎರಡು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ಆತ ಐಎಸ್ ಸಿದ್ಧಾಂತವನ್ನು ಹರಡುತ್ತಿದ್ದ. ಅಬ್ದುಲ್ಲಾನ ಖಾತೆ ನಿಷ್ಕ್ರಿಯಗೊಂಡಿದ್ದರಿಂದ ವಿಚಾರಿಸಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ.

ಆಮಿಷವೊಡ್ಡಲು ಆಡಿಯೋ ಕ್ಲಿಪ್

ಆಮಿಷವೊಡ್ಡಲು ಆಡಿಯೋ ಕ್ಲಿಪ್

ಅಫ್ಘಾನಿಸ್ತಾನ ತಲುಪಿದ ಬಳಿಕ ಅಬ್ದುಲ್ಲಾ, ಐಎಸ್ ಸೇರುವಂತೆ ಇನ್ನಷ್ಟು ಜನರಿಗೆ ಆಮಿಷ ಒಡ್ಡುವ ಆಡಿಯೋ ಕ್ಲಿಪ್‌ಗಳನ್ನು ಕಳುಹಿಸಿದ್ದ. ಟೆಲಿಗ್ರಾಂ ಆಪ್‌ನಲ್ಲಿ ವಿವಿಧ ಖಾತೆಗಳ ಮೂಲಕ 90ಕ್ಕೂ ಅಧಿಕ ಆಡಿಯೋ ಕ್ಲಿಪ್‌ಗಳನ್ನು ಕಳುಹಿಸಿದ್ದ. ಐಎಸ್‌ ಕಲಿಸುವುದು ನಿಜವಾದ ಇಸ್ಲಾಂ. 'ಖಲೀಫ್' ಅಡಿಯಲ್ಲಿನ ಬದುಕು ಚೆನ್ನಾಗಿರುತ್ತದೆ ಎಂದು ಆತ ಸಂದೇಶಗಳಲ್ಲಿ ಹೇಳುತ್ತಿದ್ದ.

ಅಂತರ್ಜಾಲದಲ್ಲಿ ಓದಿ ಬ್ರೈನ್‌ವಾಷ್ ಆಗಿದ್ದ

ಅಂತರ್ಜಾಲದಲ್ಲಿ ಓದಿ ಬ್ರೈನ್‌ವಾಷ್ ಆಗಿದ್ದ

ಎಂಜಿನಿಯರಿಂಗ್ ಪದವೀಧರನಾಗಿದ್ದ ಅಬ್ದುಲ್ಲಾ, ಸಲಾಫಿ ಪ್ರಚಾರ ಎಂಎಂ ಅಕ್ಬರ್ ಸ್ಥಾಪಿಸಿದ್ದ ಪೀಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಉದ್ಯೋಗಿಯಾಗಿದ್ದ. 2014ರಲ್ಲಿ ಐಎಸ್ ಸಿದ್ಧಾಂತದೆಡೆಗೆ ಆತ ಆಕರ್ಷಿತನಾಗಿದ್ದ. ಅಂತರ್ಜಾಲದಲ್ಲಿ ಸಿಗುತ್ತಿದ್ದ ಐಎಸ್ ಪ್ರಚಾರದ ವಿಷಯಗಳನ್ನು ಓದಿ ಆ ಜಾಲದೊಳಗೆ ಬಿದ್ದಿದ್ದ ಎಂದು ಪೀಸ್ ಸ್ಕೂಲ್‌ನ ಆತನ ಸಹೊದ್ಯೋಗಿಗಳು ತಿಳಿಸಿದ್ದರು.

English summary
Leader of Kerala module of Islamic State group Rashid Abdulla killed by US forces in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X