ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಪಾಠಿಯನ್ನು ತಬ್ಬಿಕೊಂಡ ವಿದ್ಯಾರ್ಥಿ ಶಾಲೆಯಿಂದ ಉಚ್ಚಾಟನೆ!

By Mahesh
|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 17: ಇಲ್ಲಿನ ಮುಕ್ಕೋಲಾ ಎಂಬ ಶಾಲೆಯೊಂದರಲ್ಲಿ ಸಹಪಾಠಿಯನ್ನು ತಬ್ಬಿಕೊಂಡ ವಿದ್ಯಾರ್ಥಿಯನ್ನು
ಶಾಲೆಯಿಂದಲೇ ಉಚ್ಚಾಟನೆ ಮಾಡಲಾಗಿದೆ. ಜತೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಕೂಡಾ ಶಾಲೆ ಕ್ರಮವನ್ನು ಎತ್ತಿಹಿಡಿದಿರುವ ಘಟನೆ ನಡೆದಿದೆ.

ಮುಕ್ಕೋಲಾ ಸೇಂಟ್ ಥಾಮಸ್ ಸೆಂಟ್ರಲ್ ಸ್ಕೂಲ್ ನಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ, 11ನೇ ತರಗತಿಯಲ್ಲಿ ಓದುತ್ತಿರುವ ತನ್ನ ಗೆಳತಿ ಸ್ನೇಹಿತೆ ಚಿತ್ರಕಲೆ ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ಅಭಿನಂದಿಸಿದ, ಸಂತೋಷದ ಭರದಲ್ಲಿ ಆಕೆಯನ್ನು ತಬ್ಬಿಕೊಂಡಿದ್ದ. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಮ್ಮೆಯಿಂದ ಹಾಕಿಕೊಂಡಿದ್ದ.

Kerala HC upholds order Mukkola Student expelled for hugging female friend

ಸ್ನೇಹಿತೆಯನ್ನು ತಬ್ಬಿಕೊಂಡಿದ್ದು, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಾಲೆ ನಿಯಮ ಉಲ್ಲಂಘಿಸಿದ್ದಾನೆ ಎಂದು ನೋಟಿಸ್ ಜಾರಿ ಮಾಡಿ, ಟಿಸಿ ಕೊಟ್ಟು ಶಾಲೆಯಿಂದ ಕಳಿಸಲಾಗಿತ್ತು. ಈ ಘಟನೆ ಜುಲೈ ತಿಂಗಳಿನಲ್ಲಿ ನಡೆದಿತ್ತು.

ಆದರೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿದ್ಯಾರ್ಥಿಯ ಬೆಂಬಲಕ್ಕೆ ನಿಂತು, ಶಾಲೆಗೆ ಸೇರಿಸಿಕೊಂಡು ಶಿಕ್ಷಣ ಮುಂದುವರಿಸಲು ಅವಕಾಶ ಕೊಡುವಂತೆ ಅಕ್ಟೋಬರ್ 4ರಂದು ಆದೇಶಿಸಿತ್ತು.

ಆಯೋಗದ ಆದೇಶವನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಹೈಕೋರ್ಟ್ ಮೊರೆಹೋಗಿತ್ತು. ಹೈಕೋರ್ಟ್ ನ ಏಕಸದಸ್ಯ ಪೀಠ, ಆಯೋಗ ನೀಡಿದ್ದ ಆದೇಶವನ್ನು ರದ್ದು ಮಾಡಿ, ಶಾಲಾ ಆಡಳಿಯ ಮಂಡಳಿ ಕ್ರಮ ಸರಿ ಎಂದಿದೆ.

ಈಗ ವಿದ್ಯಾರ್ಥಿಯ ಪೋಷಕರು ಈಗ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಕಾನೂನು ಸಮರ ಮುಂದುವರೆದಿದೆ.

English summary
The Kerala High Court has upheld the decision of a Thiruvananthapuram school to expel a Class XII student for hugging a female friend. Court held that the principal was responsible for maintaining 'morality' inside the school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X