ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಮೊದಲ ರಾಜ್ಯ ಕೇರಳ

By Manjunatha
|
Google Oneindia Kannada News

ತಿರುವನಂತಪುರಂ, ಮೇ 30: ಪೆಟ್ರೋಲ್ ಬೆಲೆ ಏರಿಕೆ ಮೇಲೆ ನಿಯಂತ್ರಣ ಹೇರಲು ಕೇಂದ್ರ ವಿಫಲವಾಗಿರುವ ಬೆನ್ನಲ್ಲೆ ಕೇರಳ ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಲೀಟರ್‌ಗೆ 1 ರೂಪಾಯಿ ಇಳಿಸಿ ಅಲ್ಪ ಹೊರೆಯನ್ನಾದರೂ ತಪ್ಪಿಸುವ ಕಾರ್ಯ ಮಾಡಿದೆ.

ರಾಜ್ಯ ಸರ್ಕಾರವೊಂದು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಕೆ ಮಾಡಿರುವುದು ಇದೇ ಮೊದಲಾಗಿದ್ದು, ಇಂಧನ ಬೆಲೆ ದಾಖಲೆಯ ಏರಿಕೆ ಕಂಡಿರುವ ಈ ಸಮಯದಲ್ಲಿ ದರ ಇಳಿಸುವ ಮೂಲಕ ಕೇರಳ ರಾಜ್ಯವು ಇತರ ರಾಜ್ಯಗಳಿಗೆ ಮಾದರಿಯಾಗಿದೆ.

ಮೋದಿ ಸರಕಾರದಲ್ಲಿ ತೈಲ ಬೆಲೆ ಮಾತ್ರ ಐತಿಹಾಸಿಕ: ಮಾಯಾವತಿ ವ್ಯಂಗ್ಯ ಮೋದಿ ಸರಕಾರದಲ್ಲಿ ತೈಲ ಬೆಲೆ ಮಾತ್ರ ಐತಿಹಾಸಿಕ: ಮಾಯಾವತಿ ವ್ಯಂಗ್ಯ

ಇಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಘೊಷಣೆ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ರೂ.509 ಕೋಟಿ ನಷ್ಟವಾಗಲಿದೆ. ದೇಶವೆಲ್ಲಾ ಇಂಧನ ಬೆಲೆ ನಿಯಂತ್ರಿಸಿ ಎಂದು ಕೇಳುತ್ತಿರುವಾಗ ಕೇಂದ್ರ ಕೈಕಟ್ಟಿ ಕೂತಿಗೆ ಇದರಿಂದ ರಾಜ್ಯಗಳು ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

Kerala government cut off rs 1 on fuel

ಕೇರಳ ರಾಜ್ಯವು ಪೆಟ್ರೋಲ್, ಡೀಸೆಲ್‌ ಮೇಲೆ ತಾನು ವಿಧಿಸುತ್ತಿದ್ದ ತೆರಿಗೆಯನ್ನು ಕಡಿಮೆ ಮಾಡಿ ಲೀಟರ್‌ಗೆ ಒಂದು ರೂಪಾಯಿ ಬೆಲೆ ಇಳಿಕೆ ಮಾಡಿ ಮಾದರಿಯಾಗಿದೆ. ದೆಹಲಿಯಲ್ಲಿ ದೇಶದಲ್ಲೇ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ದೊರೆಯುತ್ತದೆ.

English summary
Kerala Government cut off rs.1 on fuel price. CM Pinarayi Vijayan announced it. He said it will loss of Rs. 509 crore for the state government. Kerala is the first state government to cut off fuel price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X