• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಮಗ್ಲಿಂಗ್: ಸಿಬಿಐನಿಂದ ಮಲ್ಲು ಸುಂದರಿ ವಿಚಾರಣೆ

By Mahesh
|

ತಿರುವನಂತಪುರಂ, ಡಿ.10: ಕೇರಳದಲ್ಲಿ ನಡೆದಿರುವ ಚಿನ್ನದ ಕಳ್ಳಸಾಗಣೆ ಪ್ರಕರಣಗಳು ಮಾಲಿವುಡ್ ಬೆಚ್ಚಿಬೀಳುವಂತೆ ಮಾಡಿದೆ. ಮಲೆಯಾಳಂ ಚಿತ್ರರಂಗ, ಮಾಡೆಲ್ ಗಳು ಈ ಸ್ಮಗ್ಲಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಶಂಕೆಯ ಬೆನ್ನಲ್ಲೇ ಖ್ಯಾತ ರೂಪದರ್ಶಿ ಕಮ್ ನಟಿ ಶ್ರಾವ್ಯ ಸುಧಾಕರ್ ರನ್ನು ಸಿಬಿಐ ತಂಡ ವಿಚಾರಣೆಗೆ ಒಳಪಡಿಸಿದೆ.

ಭಾರತೀಯ ಕಸ್ಟಮ್ಸ್ ಉಚ್ಚ ಸಂಸ್ಥೆಯಾದ Directorate of Revenue Intelligence (DRI) ಮೂಲಗಳ ಪ್ರಕಾರ ಇತ್ತೀಚೆಗೆ ಕೇರಳದಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಂಧನಕ್ಕೀಡಾಗಿರುವ ವ್ಯಕ್ತಿಗಳಿಗೂ- ಮಲಯಾಳಂ ಚಿತ್ರೋದ್ಯಮಕ್ಕೂ ನಂಟು ಇದೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಸಿಬಿಐ ತಂಡ ತನಿಖೆ/ವಿಚಾರಣೆ ಆರಂಭಿಸಿತ್ತು. ಕೊಚ್ಚಿಯಲ್ಲಿರುವ ಒಂದು ದೊಡ್ಡ ಬಂಗಲೆ ಚಿನ್ನದ ಕಳ್ಳಸಾಗಣೆದಾರರ ಕಾರಸ್ಥಾನವಾಗಿದೆ ಎಂದು ಕಸ್ಟಮ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದರು.

ಸಿಬಿಐನ ಭ್ರಷ್ಟಾಚಾರ ವಿರೋಧಿ ಪಡೆ ಸೋಮವಾರ ರೂಪದರ್ಶಿ ಶ್ರಾವ್ಯರನ್ನು ಪ್ರಶ್ನಿಸಿದ್ದಾರೆ. ನೆಡಂಬಸರಿ ಚಿನ್ನ ಸ್ಮಗ್ಲಲಿಂಗ್ ಆರೋಪಿ ಟಿ.ಕೆ ಫೈಜ್ ಜತೆ ನಿಮ್ಮ ಸಂಬಂಧ ಏನು ಎಂದು ಶ್ರಾವ್ಯರನ್ನು ಕೇಳಲಾಗಿದೆ. ವಿಚಾರಣೆ ವೇಳೆ ಫೈಜ್ ಹಾಗೂ ನಾನು ಉತ್ತಮ ಸ್ನೇಹಿತರು ಆದರೆ, ಅವನು ಸ್ಮಗ್ಲಲಿಂಗ್ ದಂಧೆಯಲ್ಲಿದ್ದಾನೆ ಎಂಬುದು ಗೊತ್ತಿಲ್ಲ ಎಂದು ಶ್ರಾವ್ಯ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

2004ರಲ್ಲಿ ದಕ್ಷಿಣ ಭಾರತ ಸೌಂದರ್ಯ ಸ್ಪರ್ಧೆ ವಿಜೇತರಾಗಿರುವ ಶ್ರಾವ್ಯ ಅವರ ವಿಚಾರಣೆ ಮಂಗಳವಾರ ಕೂಡಾ ಮುಂದುವರೆಯಲಿದೆ ಎಂದು ಸಿಬಿಐ ಮೂಲಗಳು ಹೇಳಿವೆ. ವಿಚಾರಣೆ ನಡೆದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರಾವ್ಯ, ಸಿಬಿಐ ವಿಚಾರಣೆ ಪೂರ್ತಿಯಾಗುವವರೆಗೂ ಯಾವುದೇ ಮಾಹಿತಿ ನೀಡುವಂತಿಲ್ಲ ಎಂದಿದ್ದಾರೆ.

ತಿಂಗಳಿಗೆ ಐದು ಬಾರಿ ಭಾರತದಿಂದ ದುಬೈ ಕಡೆಗೆ ಚೆನ್ನೈ ಮೂಲದ ರೂಪದರ್ಶಿ ಶ್ರಾವ್ಯ ಸಂಚರಿಸಿರುವುದು ಸಿಬಿಐ ಅನುಮಾನ ಹೆಚ್ಚಳಕ್ಕೆ ಕಾರಣವಾಗಿತ್ತು. ಫೈಜ್ ಹಾಗೂ ಶ್ರಾವ್ಯ ಗಂಟೆಗಟ್ಟಲೇ ಮಾತನಾಡಿರುವ ದಾಖಲೆ(call record details) ಕೂಡಾ ಸಿಬಿಐ ವಶದಲ್ಲಿದೆ.

ಬಲವಾದ ಸಾಕ್ಷಿ ಆಧಾರಗಳು ಸಿಕ್ಕ ಮೇಲಷ್ಟೇ ಶ್ರಾವ್ಯ ಸುಧಾಕರ್ ಅವರನ್ನು ಆರೋಪಿ ಎಂದು ಹೆಸರಿಸಲಾಗುವುದು. ಈಗ ಸದ್ಯಕ್ಕೆ ಫೈಜ್ ಹಾಗೂ ಶ್ರಾವ್ಯ ನಡುವಿನ ಸಂಬಂಧ, ಮಾತುಕತೆ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ಸಿಬಿಐ ತಂಡ ಹೇಳಿದೆ. ಕಳ್ಳಸಾಗಣೆದಾರರ ತಂಡದ ಮುಖ್ಯಸ್ಥ ಟಿಕೆ ಫಯಾಜ್ ಹಾಗೂ ಆತನಿಗೆ ಸಹಕಾರ ನೀಡಿದ ಕಸ್ಟಮ್ಸ್ ಅಧಿಕಾರಿಗಳನ್ನು ಕಳೆದ ಸೆಪ್ಟೆಂಬರಿನಲ್ಲಿ ದೆಹಲಿ ಸಿಬಿಐ ಪೊಲೀಸರು ಬಂಧಿಸಿದ್ದರು.

DRI ತಂಡವು ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯದ ನಾನಾ ವಿಮಾನ ನಿಲ್ದಾಣಗಳಲ್ಲಿ ಅನೇಕ ಚಿನ್ನದ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಚಿನ್ನದ ಸಾಗಣೆಯನ್ನೇ ಕಾಯಕವಾಗಿಸಿಕೊಂಡಿರುವ Air India Express ಗಗನಸಖಿಯನ್ನೂ ಸಹ ಇತ್ತೀಚೆಗೆ ಬಂಧಿಸಲಾಗಿದೆ.

English summary
The anti-corruption wing of the CBI on Monday questioned model Shravya Sudhakar on her connection with the Nedumbassery gold smuggling case accused T.K. Faiz.The CBI said she would be arraigned if they get any concrete evidence about her involvement in the smuggling racket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X