ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

Google Oneindia Kannada News

ಹಸಿರು ಸಿರಿಯಿಂದ ಸಮೃದ್ಧವಾದ ನಾಡು ಕೇರಳ. ಇದು 'ದೇವರ ಸ್ವಂತ ನಾಡು' ಅಂತಲೂ ಪ್ರಸಿದ್ಧವಾಗಿದೆ. ಆದರೆ ಇದೀಗ ಈ ನಾಡು ಪ್ರಕೃತಿ ವಿಕೋಪವನ್ನು ಎದುರಿಸುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತತ್ತರಿಸಿ ಹೋಗಿದೆ. ಸುಮಾರು 13 ಜಿಲ್ಲೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿಯ ಮುಖ್ಯಮಂತ್ರಿಯಾದ ಪಿಣರಾಯಿ ವಿಜಯನ್ ಹೇಳುವ ಪ್ರಕಾರ 19,500 ಕೋಟಿ ರುಪಾಯಿ ನಷ್ಟವಾಗಿದೆ.

ಈ ರೀತಿಯ ಪ್ರವಾಹವು ತೊಂಬತ್ನಾಲ್ಕು ವರ್ಷಗಳ ಹಿಂದೆ ವರದಿಯಾಗಿತ್ತು ಎಂದು ಹೇಳಲಾಗುತ್ತಿದೆ. ಈ ಘೋರ ಪರಿಸ್ಥಿತಿಯಿಂದಾಗಿ ಜನರು ವಿದ್ಯುತ್, ಆಹಾರ ಹಾಗೂ ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾರೆ. ಹಲವೆಡೆ ನೀರು ತುಂಬಿಕೊಂಡಿರುವುದರಿಂದ ಬಹುತೇಕ ಜನರು ತಮ್ಮ ಮನೆಯ ಮಹಡಿಯನ್ನು ಹತ್ತಿ ಕುಳಿತಿದ್ದಾರೆ.

ಇದೀಗ ನೀರಿನ ಮಟ್ಟ ಹೆಚ್ಚುತ್ತಲೇ ಇದೆ. ಅಲ್ಲಿಯ ಸ್ಥಳೀಯ ಶಾಸಕ ಅಬ್ರಾಂ ಹೇಳುವ ಪ್ರಕಾರ ಪರಿಸ್ಥಿತಿ ಬಹಳ ಚಿಂತನೀಯ ಸ್ಥಿತಿಯಲ್ಲಿದೆ. ಹಾಗಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಪರಿಸ್ಥಿತಿಯನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ಪರಿಹಾರ ಹಣವನ್ನು ಘೋಷಿಸಿದ್ದಾರೆ. ನೆರೆಯಲ್ಲಿ ಮೃತರಾದವರ ಕುಟುಂಬಕ್ಕೆ 2 ಲಕ್ಷ ರುಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50,000 ರುಪಾಯಿಯನ್ನು ರಾಷ್ಟ್ರೀಯ ಪರಿಹಾರ ನಿಧಿಯಿಂದ ಕೊಡುವುದಾಗಿ ಭರವಸೆ ನೀಡಿದ್ದಾರೆ.

ನಿರಾಶ್ರಿತರಾದ ಇಲ್ಲಿಯ ನಾಗರಿಕರು ಪರಿಹಾರ ಹಾಗೂ ರಕ್ಷಣೆಯನ್ನು ಯಾಚಿಸುತ್ತಿದ್ದಾರೆ. 1.3 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. 300ಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಲಪ್ಪುರಂ ಮತ್ತು ಇಡುಕ್ಕಿಯಲ್ಲಿ ಉಂಟಾದ ಭೂಕುಸಿತ ಮತ್ತು ಪ್ರವಾಹದಲ್ಲಿ 2,000ಕ್ಕೂ ಅಧಿಕ ಮನೆಗಳು ನಾಶವಾಗಿವೆ.

ಇದೀಗ ಕೊಚ್ಚಿ ವಿಮಾನ ನಿಲ್ದಾಣವನ್ನು ಆಗಸ್ಟ್ 26ರ ವರೆಗೆ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ 35ಕ್ಕೂ ಅಧಿಕ ಅಣೆಕಟ್ಟುಗಳು ತೆರೆದಿವೆ.

ಅನೇಕರು ತಮ್ಮ ಸೆಲ್ ಫೋನ್ ಸಹಾಯದಿಂದ ನೆರೆಯಿಂದ ಅನುಭವಿಸುತ್ತಿರುವ ತೊಂದರೆಯನ್ನು ಸೆರೆಹಿಡಿದು ಇಂಟರ್ನೆಟ್ ಮೂಲಕ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ. ಚೆನ್ನಣ್ಣೂರು ಕೇಂದ್ರೀಯ ಪಟ್ಟಣದಿಂದ ಓರ್ವ ವ್ಯಕ್ತಿ ತನ್ನ ಸ್ವಂತ ಮನೆಯಲ್ಲಿ ಕುತ್ತಿಗೆಯವರೆಗೆ ನೀರು ಬಂದಿರುವುದನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ಒಂದು ಕುಟುಂಬ ಅನ್ನ, ನೀರು, ವಿದ್ಯುತ್ ಇಲ್ಲದೆ ಅಲಪುಳಾದಲ್ಲಿ ಸಿಕ್ಕಿಕೊಂಡಿರುವುದನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿದೆ.

ಇವು ಕೇವಲ ಒಂದೆರಡು ಉದಾಹರಣೆಯಷ್ಟೆ. ಇಂತಹ ಸಾವಿರಾರು ಜನರು ಹತಾಶರಾಗಿದ್ದಾರೆ. ನೈಸರ್ಗಿಕ ವಿಕೋಪ ಎಲ್ಲಿಯಾದರೂ ಯಾವಾಗಲಾದರೂ ಸಂಭವಿಸಬಹುದು. ಇಂತಹ ಸ್ಥಿತಿ ಉಂಟಾದಾಗ ಮಾನವೀಯತೆಯಿಂದ ಸಹಾಯ ಮಾಡುವುದು ಮನುಷ್ಯನ ಧರ್ಮ.

ಕೇರಳದ ಜನತೆಗೆ ಇದೀಗ ತುರ್ತು ಸಹಾಯದ ಅಗತ್ಯವಿದೆ. ಅವರ ಈ ಅಸಹಾಯಕತೆಗೆ ನಾವು ಕೊಂಚ ಸಹಾಯ ಮಾಡಬೇಕು. ನಾವು ಮಾಡುವ ಒಂದು ಚಿಕ್ಕ ಸಹಾಯವು ಅವರಿಗೆ ಒಂದು ದೊಡ್ಡ ಸಹಾಯವಾಗುತ್ತದೆ. ಹನಿಹನಿ ಸೇರಿದರೆ ಸಮುದ್ರವಾಗುತ್ತದೆ ಎನ್ನುವುದನ್ನು ಅರಿಯೋಣ.

ನೀವು ಕೇರಳದ ಜನತೆಗೆ ಸಹಾಯ ಮಾಡಲು ಬಯಸಿದರೆ ಆನ್ ಲೈನ್ ಮೂಲಕ ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ (ಕೇರಳ ಸರ್ಕಾರ) ಕೊಡುಗೆ ನೀಡಬಹುದು.

ಆನ್ ಲೈನ್ ದೇಣಿಗೆಯ ಹೊರತಾಗಿ ನೀವು ಸಹಾಯ ಮಾಡಬಹುದಾದ ಇತರ ವಿಧಾನಗಳು ಇಲ್ಲಿವೆ...

ಬಟ್ಟೆ, ಆಹಾರ ಪದಾರ್ಥಗಳು, ನೈರ್ಮಲ್ಯ ಕರವಸ್ತ್ರಗಳು, ಅಡುಗೆ ಪಾತ್ರೆಗಳು, ಚಾಪೆ, ನ್ಯಾಪ್ ಕಿನ್ಸ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಇಲ್ಲಿ ಅಥವಾ ಅಲ್ಲಿಗೆ ಹೋಗಿಯೂ ಸಹ ದಾನ ಮಾಡಬಹುದಾಗಿದೆ.

ಅಮೆಜಾನ್ ಸಂಸ್ಥೆಯು ಕೇರಳ ಪ್ರವಾಹ ಪರಿಹಾರ ಕಾರ್ಯಾಚರಣೆಯನ್ನು ಸ್ಥಾಪಿಸಿದೆ. ಅಲ್ಲಿಯ ಪ್ರಜೆಗಳು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ನೀವು ಇಲ್ಲಿ ಕೊಡುಗೆ ನೀಡಬಹುದು.

ನಿಮ್ಮ ಕುಟುಂಬದ ಸದಸ್ಯರು, ಸಂಬಂಧಿಗಳು ಮತ್ತು ಸ್ನೇಹಿತರು ಕೇರಳದ ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ ಗೂಗಲ್ ಪ್ರಾರಂಭಿಸಿರುವ "ಪರ್ಸನ್ ಫೈಂಡರ್" ಟೂಲ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಕೆಲವು ಸಹಾಯವಾಣಿ ಸಂಖ್ಯೆಗಳು/ ಹೆಲ್ಪ್ ಲೈನ್ ಸಂಖ್ಯೆಗಳು:
ಕಾಸರಗೋಡು: 9446601700

ಕಣ್ಣೂರು: 91-944-668-2300

ಕೋಳಿಕೋಡು: 91-944-653-8900

ವಯನಾಡ್: 91-807-840-9770

ಮಲಪ್ಪುರಂ: 91-938-346-3212

ಮಲಪ್ಪುರಂ: 91-938-346-4212

ತ್ರಿಶ್ಶೂರ್: 91-944-707-4424

ತ್ರಿಶ್ಶೂರ್: 91-487-236-3424

ಪಾಲಕ್ಕಾಡ್: 91-830-180-3282

ಎರ್ನಾಕುಲಂ: 91-790-220-0400

ಎರ್ನಾಕುಲಂ: 91-790-220-0300

ಅಲಪುಳಾ: 91-477-223-8630

ಅಲಪುಳಾ: 91-949-500-3630

ಅಲಪುಳಾ: 91-949-500-3640

ಇಡುಕ್ಕಿ: 91-906-156-6111

ಇಡುಕ್ಕಿ: 91-938-346-3036

ಕೊಟ್ಟಾಯಂ: 91-944-656-2236

ಕೊಟ್ಟಾಯಂ: 91-944-656-2236

ಪಥನಂತಿಟ್ಟಾ: 91-807-880-8915

ಕೊಲ್ಲಂ: 91-944-767-7800

ತಿರುವನಂತಪುರಂ: 91-949-771-1281

ಕೇರಳದ ನಾಗರಿಕರಿಗೆ ನಮ್ಮ ತುರ್ತು ಬೆಂಬಲ ಬೇಕಿದೆ. ಅವರಿಗೆ ಸಹಾಯ ಮಾಡುತ್ತೇವೆ ಎನ್ನುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಹಾಗೂ ಅವರಿಗೆ ನೀವು ಅಸಹಾಯಕರಲ್ಲ, ನಾವಿದ್ದೇವೆ ಎನ್ನುವ ಧೈರ್ಯ ನೀಡೋಣ. ಇವುಗಳೊಂದಿಗೆ ಮಾನವೀಯತೆಯನ್ನು ಮೆರೆಯೋಣ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X