ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

|
Google Oneindia Kannada News

ಹೈದರಾಬಾದ್, ಆಗಸ್ಟ್ 20: ಕೇರಳದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ಸಂತ್ರಸ್ತನಿಧಿಗೆ ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ನೀಡಲು ತೆಲಂಗಾಣದ ಉಪಮುಖ್ಯಮಂತ್ರಿ ಮೊಹಮ್ಮದ್ ಮಹ್ಮೂದ್ ಅಲಿ ನಿರ್ಧರಿಸಿದ್ದಾರೆ.

ತೆಲಂಗಾಣದ ಗೃಹಮಂತ್ರಿ ನಯನಿ ನರಸಿಂಹ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ 25 ಕೋಟಿ ರೂ.ಗಳ ಚೆಕ್ ಅನ್ನು ಸಂತ್ರಸ್ತರ ಪರಿಹಾರದ ರೂಪದಲ್ಲಿ ದೇಣಿಗೆ ನೀಡಿದ್ದಾರೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

ಅಷ್ಟೇ ಅಲ್ಲದೆ, ತೆಲಂಗಾಣ ಸರಕಾರ ಕೇರಳದ ಪ್ರವಾಹಕ್ಕೆ ಯಾವೆಲ್ಲ ರೀತಿಯಲ್ಲಿ ನೆರವು ನೀಡಬಹುದೋ ಆ ಎಲ್ಲ ರೀತಿಯಲ್ಲೂ ಸಹಾಯ ಹಸ್ತ ಚಾಚಿದೆ.

Kerala floods: Telangana Dy CM to donate one months salary

ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ರೂಪದಲ್ಲಿ ನೀಡುವ ಮೂಲಕ ಕೇರಳ ಉಪಮುಖ್ಯಮಂತ್ರಿ ಅಲಿ ಅವರು ಹೊಸ ಆದರ್ಶಕ್ಕೆ ನಾಂದಿ ಹಾಡಿದ್ದಾರೆ.

ಕರ್ನಾಟಕ, ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಕೇರಳದ ಈ ಸಂಕಷ್ಟದಲ್ಲಿ ಜೊತೆಯಾಗಿ, ನೆರವಿನ ಹಸ್ತಚಾಚಿದೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ಇತ್ತೀಚೆಗಷ್ಟೇ ತನ್ನೆಲ್ಲಾ ಜನಪ್ರತಿನಿಧಿಗಳ ಸಂಬಳವನ್ನು ಕಾಂಗ್ರೆಸ್ ಪಕ್ಷ, ಕೇರಳ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕಳೇದ ಕೆಲ ದಿನಗಳಿಂದ ಕೇರಳದಲ್ಲಿ ಒಂದೇ ಸಮೆನೆ ಸುರಿಯುತ್ತಿರುವ ಮಳೆಗೆ ಇದುವರೆಗೂ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಸುಮಾತು 19,512 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

English summary
Telangana Deputy Chief Minister Mohammad Mahmood Ali has decided to donate his one-month salary to flood-hit Kerala state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X