ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪ್ರವಾಹ: ಆಗಸ್ಟ್ 26ರವರೆಗೆ ಕೊಚ್ಚಿ ಏರ್‌ಪೋರ್ಟ್‌ ಬಂದ್‌

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 17: ಕೇರಳದಲ್ಲಿ ಪ್ರವಾಹದಿಂದಾಗಿ ಕೊಚ್ಚಿ ಏರ್‌ಪೋರ್ಟ್‌ ಜಲಾವೃತವಾಗಿದ್ದು, ಆಗಸ್ಟ್ 26ರವರೆಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಮಳೆಯ ಭೀಕರತೆಗೆ ಕೇರಳ ನಲುಗಿದೆ, ಎಲ್ಲೆಂದರಲ್ಲಿ ಮರಗಳ ರೀತಿ ಮನೆಗಳು ಉರುಳಿವೆ, ಪ್ರವಾಹದಿಂದಾಗಿ ಕೊಚ್ಚಿ ಏರ್‌ಪೋರ್ಟ್‌ಗೂ ನೀರು ನುಗ್ಗಿದೆ. ಹಾಗಾಗಿ ಆಗಸ್ಟ್ 26ರ ಮಧ್ಯಾಹ್ನ 2 ಗಂಟೆಯವರೆಗೆ ಕೊಚ್ಚಿ ವಿಮಾನ ನಿಲ್ದಾಣವನ್ನು ಬಂದ್‌ ಮಾಡಲಾಗುತ್ತಿದೆ.

ಕೇರಳ ಪ್ರವಾಹ: 6 ಸಾವಿರ ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಕೇರಳ ಪ್ರವಾಹ: 6 ಸಾವಿರ ರೈಲ್ವೆ ಟಿಕೆಟ್‌ ಕ್ಯಾನ್ಸಲ್‌

ತ್ರಿವೆಂಡ್ರಮ್‌, ಕ್ಯಾಲಿಕಟ್‌ ವಿಮಾನ ನಿಲ್ದಾಣಗಳು ಲಭ್ಯವಿರಲಿವೆ, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಇದೇ ರೀತಿ ಪ್ರವಾಹ ಮುಂದುವರೆದರೆ ಇನ್ನೂ ಕೆಲವು ದಿನಗಳ ಕಾಲ ವಿಸ್ತರಿಸಲಾಗುತ್ತದೆ. ಕೊಚ್ಚಿ ವಿಮಾನನಿಲ್ದಾಣವು ಕೂಡ ಜಲಾವೃತವಾಗಿದೆ.

Kerala floods: Kochi airport closed till August 26

ತ್ರಿವೆಂಡ್ರಮ್‌ ಹಾಗೂ ಕ್ಯಾಲಿಕಟ್‌ನಿಂದ ಹೆಚ್ಚುವರಿ ವಿಮಾನ ವ್ಯವಸ್ಥೆ ಮಾಡಲಾಗಿದೆ. ವಿದೇಶಿ ವಿಮಾನಗಳಾದ ಏರ್‌ ಏಷಿಯಾ ಬರ್ಹದ್‌, ಗಲ್ಫ್‌ ಏರ್‌, ಕುವಾಯಿತ್‌ ಏರ್‌ಲೈನ್ಸ್‌, ಮಲಿಂಡೊ, ಸಿಲ್ಕ್ ಏರ್‌ ವಿಮಾನಗಳ ಕೊಚ್ಚಿನ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ

ಒಡಿಶಾ ಸರ್ಕಾರವು ಕೇರಳಕ್ಕೆ 5 ಕೋಟಿ, ಕರ್ನಾಟಕ ಸರ್ಕಾರವು 10 ಕೋಟಿ ರೂ.ಗಳ ನೆರವು ನೀಡಿದೆ.

English summary
The Cochin international airport which is still submerged in flood waters won’t open on Saturday as expected. A CIAL release on Thursday said that the airport operations have been temporarily suspended upto 2 pm, August 26 due to very high flood situation and with key essential facilities like runway, taxiway, apron.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X