• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇವಿ ಅಧಿಕಾರಿಗಳಿಗೆ 'Thanks' ಹೇಳಿದ ಹಸಿ ಬಾಣಂತಿ ಸಜಿತಾ

By Mahesh
|

ಬೆಂಗಳೂರು, ಆಗಸ್ಟ್ 20: ಮಹಾಮಳೆಗೆ ತತ್ತರಿಸಿರುವ ಕೇರಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಭಾರತೀಯ ವಾಯು, ಜಲ, ಸೇನೆ, ವಿಪತ್ತು ನಿರ್ವಹಣಾ ದಳ, ಸ್ಥಳೀಯ ಮೀನುಗಾರರಿಗೆ ಇದೀಗ ಧನ್ಯವಾದ ಅರ್ಪಿಸುವ ಸಮಯ ಬಂದಿದೆ. ಆಗಸ್ಟ್ 17ರಂದು ತುಂಬು ಗರ್ಭಿಣಿಯ ಜೀವ ಉಳಿಸಿದ ಭಾರತೀಯ ಜಲ ಸೇನೆ ಅಧಿಕಾರಿಗಳಿಗೆ ಹಸಿ ಬಾಣಂತಿ ಸಜಿತಾ ಅವರು 'ಥ್ಯಾಂಕ್ಸ್' ಹೇಳಿದ್ದಾರೆ.

25 ವರ್ಷ ವಯಸ್ಸಿನ ತುಂಬು ಗರ್ಭಿಣಿ ಸಜಿತಾ ಅವರನ್ನು ಅಂದು ಆಸ್ಪತ್ರೆಗೆ ದಾಖಲಿಸಲು ನೇವಿಯ ಪೈಲಟ್ ಕಮಾಂಡರ್​ ವಿಜಯ್ ವರ್ಮ ಹಾಗೂ ತಂಡ ತೆಗೆದುಕೊಂಡಿದ್ದು 20 ನಿಮಿಷಗಳು ಮಾತ್ರ. ತ್ವರಿತಗತಿಯ ಈ ಕಾರ್ಯಾಚಾರಣೆಯಿಂದಾಗಿ ಸಜಿತಾ ಅವರು ಅಗತ್ಯ ವೈದ್ಯಕೀಯ ನೆರವು ಪಡೆದು ಗಂಡು ಮಗುವಿಗೆ ಜನ್ಮ ನೀಡುವಂತಾಯಿತು.

ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಜಿತಾ ಅವರನ್ನು ರಕ್ಷಿಸಿದ ನೌಕಾಪಡೆ ತಂಡಕ್ಕೆ ಪೈಲಟ್ ಕಮಾಂಡರ್ ವಿಜಯ್ ಅವರಿಗೆ ಸಜಿತಾ ಅವರ ಕುಟುಂಬ ವಿಶೇಷವಾಗಿ ಧನ್ಯವಾದ ಆರ್ಪಿಸಿದೆ.

ಸಜಿತಾ ಅವರ ಕುಟುಂಬಸ್ಥರು ಮನೆಯ ಮಹಡಿ ಮೇಲೆ Thanks ಎಂದು ಬಿಳಿ ಬಣ್ಣದಲ್ಲಿ ದೊಡ್ಡದಾಗಿ ಬರೆದು ರಕ್ಷಣಾ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ನವಜಾತ ಶಿಶುವಿನೊಂದಿಗೆ ತಾಯಿ ಸಜಿತಾ

ನವಜಾತ ಶಿಶುವಿನೊಂದಿಗೆ ತಾಯಿ ಸಜಿತಾ

ಕೇರಳದ ಮಹಾಮಳೆ, ಪ್ರವಾಹಕ್ಕೆ ತುತ್ತಾಗಿ ತತ್ತರಿಸಿದ ಜಿಲ್ಲೆಗಳ ಪೈಕಿ ಎರ್ನಾಕುಲಂ ಕೂಡಾ ಒಂದು. ಈ ಜಿಲ್ಲೆಯ ಆಳುವ ಪ್ರದೇಶದ ಚೆಂಗಮನಾಡ್ ಎಂಬಲ್ಲಿ ವಾಸವಿರುವ 25 ವರ್ಷ ವಯಸ್ಸಿನ ಸಜಿತಾ ಅವರ ಮನೆಗೂ ನೀರು ನುಗ್ಗಿತ್ತು. ಸಜಿತಾ ಜಜಿಲ್ ಅವರು ಕಟ್ಟಡದ ಎರಡನೇ ಅಂತಸ್ತಿನಲ್ಲಿದ್ದರೆ, ಮೊದಲ ಅಂತಸ್ತು ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಎರಡನೇ ಅಂತಸ್ತಿಗೆ ನೀರು ನುಗ್ಗುವ ಸಂದರ್ಭದಲ್ಲಿ ಸಜಿತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದು ಆಗಸ್ಟ್ 17ರಂದು ನಡೆದ ಘಟನೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

20 ನಿಮಿಷಗಳ ಕಾರ್ಯಾಚರಣೆ

20 ನಿಮಿಷಗಳ ಕಾರ್ಯಾಚರಣೆ

ಪೈಲಟ್ ಕಮಾಂಡರ್ ವಿಜಯ್ ಅವರ ತಂಡಕ್ಕೆ ಈ ಬಗ್ಗೆ ಸುದ್ದಿ ಸಿಕ್ಕ ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಆಗಮಿಸಿತು. 20 ನಿಮಿಷಗಳಲ್ಲಿ ಸಜಿತಾರನ್ನು ಏರ್ ಲಿಫ್ಟ್ ಮಾಡಿ ಕರೆದುಕೊಂಡು ಹೋಗುವುದು ತುಸು ಕಷ್ಟದ ಕೆಲಸವಾಗಿತ್ತು, ಆದರೆ, ನಾಜೂಕಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡ ನೌಕಾ ಪಡೆ, ಸಜಿತಾರನ್ನು ಕೊಚ್ಚಿಯ ಐಎನ್ ಎಚ್ಎಸ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿತು.

ಭಾರಿ ಥಂಡಿ ವಾತಾವರಣದಲ್ಲಿದ್ದ ಗರ್ಭಿಣಿ ಅವರ ರಕ್ಷಣೆ ಹಾಗೂ ಮಗುವಿನ ಜನನ ಆಸ್ಪತ್ರೆಯ ವೈದ್ಯರಿಗೆ ಸವಾಲಾಗಿತ್ತು. ಚಿತ್ರದಲ್ಲಿ ಸಜಿತಾ ಅವರ ಮನೆ ಮೇಲೆ ಥ್ಯಾಂಕ್ಸ್ ಎಂದು ಬರೆದಿರುವುದನ್ನು ಕಾಣಬಹುದು.

ಕೇರಳದಲ್ಲಿ ಪುನರ್ವಸತಿಗೆ ಕೋಟ್ಯಾಂತರ ರೂಪಾಯಿ ನೀಡಿದ ಬಿಜೆಪಿ ಸರಕಾರಗಳು

ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ

ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ನವಜಾತ ಶಿಶುವಿನ ಜತೆ ಇರುವ ತಾಯಿ ಸಜಿತಾ ಹಾಗೂ ಆಸ್ಪತ್ರೆ ಸಿಬ್ಬಂದಿಯ ಚಿತ್ರವನ್ನು ಟ್ವೀಟ್ ಮಾಡಿದ ಭಾರತೀಯ ನೌಕಾಪಡೆ.

ನೆರೆ ಸಂತ್ರಸ್ತರನ್ನು ಲೇವಡಿ ಮಾಡಿ ದುಬೈನಲ್ಲಿ ಕೆಲಸ ಕಳೆದುಕೊಂಡ ಕೇರಳಿಗ

ರಕ್ಷಣಾ ಕಾರ್ಯಾಚರಣೆ ಬಗ್ಗೆ ಟ್ವೀಟ್

ರಕ್ಷಣಾ ಕಾರ್ಯಾಚರಣೆ ಬಗ್ಗೆ ಸತತವಾಗಿ ಟ್ವೀಟ್ ಮಾಡುವ ಮೂಲಕ ಅಪ್ಡೇಟ್ ನೀಡುತ್ತಿರುವ ನೌಕಾಪಡೆ. ಸಂಕಷ್ಟದಲ್ಲಿ ಸಿಲುಕಿರುವವರು ಟ್ವೀಟ್ ಮಾಡಿ ಕೂಡಾ ನೆರವು ಕೋರಬಹುದಾಗಿದೆ.

ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

English summary
Naval pilot Commodore Vijay Varma and his men got a unique thank you note days after they rescued a pregnant woman from the rooftop of her flooded house in Chengamanad near Aluva in Kerala. Sajitha Jabil, 25, gave birth to a baby boy just 30 minutes after she was rescued by a helicopter on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X