ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಚ್ಚಿಹೋದದ್ದು ಸೂರೊಂದೇ ಅಲ್ಲ,ಕನಸೂ!ಪ್ರವಾಹ ಸಂತ್ರಸ್ತನ ಕಣ್ಣೀರ ಕತೆ

|
Google Oneindia Kannada News

ವಂಡಿಪೆರಿಯಾರ್(ಕೇರಳ), ಆಗಸ್ಟ್ 20: "ಇನ್ನು ಕೆಲವು ದಿನ ನಾವು ಸಂತ್ರಸ್ತ ಶಿಬಿರಗಳಲ್ಲಿರುತ್ತೇವೆ. ಆದರೆ ಎಲ್ಲವೂ ಸಹಜ ಸ್ಥಿಗೆ ಮರಳಿದ ಮೇಲೆ ನಾವು ಎಲ್ಲಿಗೆ ಹೋಗೋದು?" ಇದ್ದೊಂದು ಮನೆ ಕಳೆದುಕೊಂಡ ಪ್ರವಾಹ ಸಂತ್ರಸ್ತನೊಬ್ಬ ಕಣ್ಣೀರು ಹಾಕುತ್ತ ಕೇಳಿದ ಪ್ರಶ್ನೆ ಇದು!

65 ವರ್ಷ ವಯಸ್ಸಿನ ಚಂದ್ರಬಾಸ್ ಎಂಬ ವ್ಯಕ್ತಿ ಕೇರಳದ ವಂಡಿಪೆರಿಯಾರ್ ಎಂಬಲ್ಲಿಯವರು. ಕಳೆದ ಕೆಲ ದಿನಗಳಿಂದ ಈ ರಾಜ್ಯ ಎದುರಿಸಿದ ಭೀಕರ ಪ್ರವಾಹಕ್ಕೆ ಕೊಚ್ಚಿಕೊಂಡು ಹೋದ ಮನೆಗಳಲ್ಲಿ ಚಂದ್ರಬಾಸ್ ಅವರ ಮನೆಯೂ ಸೇರಿದೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

"ಕೊಚ್ಚಿಹೋದದ್ದು ನಮ್ಮ ಸೂರೊಂದೇ ಅಲ್ಲ, ನಮ್ಮ ಕನಸು ಸಹ" ಎಂದು ಬಿಕ್ಕುವ ಚಂದ್ರಬಾಸ್ ಅವರ ಕಣ್ಣೀರಿಗೆ ಸಾಂತ್ವ ಹೇಳುವುದು ಹೇಗೆ?

Kerala flood victim crying after seeing his damaged house

ಟೇಲರ್ ಕೆಲಸ ಮಾಡುತ್ತಿರುವ ಚಂದ್ರಬಾಸ್ ಒಂದೊಂದು ಪೈಸೆಯನ್ನೂ ಕೂಡಿಟ್ಟು ಕಟ್ಟಿದ್ದ ಮನೆ, ಮುಳೈಪೆರಿಯಾರ್ ಜಲಾಶಯದಿಂದ ನೀರು ಬಿಡುಗಡೆಯಾದ ಪರಿಣಾಮ ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ಶಾಲೆಯೊಂದರಲ್ಲಿರುವ ಸಂತ್ರಸ್ತ ಶಿಬಿರದಲ್ಲಿ ಆಅಸರೆ ಕಂಡುಕೊಂಡಿರುವ ಚಂದ್ರಬಾಸ್ ಅವರಿಗೆ ಭವಿಷ್ಯದ್ದೇ ಚಿಂತೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದುವರೆಗೂ ಅಂದಾಜಿ, 19512 ಕೋಟಿ ರೂ. ನಷ್ಟವಾಗಿದ್ದಿರಬಹುದು ಎನ್ನಲಾಗಿದೆ.

English summary
As the devastating floods in Kerala has left the people of the southern state helpless and homeless, a 65-year-old tailor from Idduki district broke down into tears after seeing his damaged house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X