ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಪ್ರವಾಹ: 1ಲಕ್ಷ RSS ಕಾರ್ಯಕರ್ತರ ಬೃಹತ್ ಪರಿಹಾರ ಕಾರ್ಯಾಚರಣೆ

|
Google Oneindia Kannada News

ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಎನ್ನುವ ಮಾತಿನಂತೆ, ಕಂಡು ಕೇಳರಿಯದ ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೇರಳದಲ್ಲಿ ಜನಜೀವನ ಕುಂಟುತ್ತಾ ಸಹಜಸ್ಥಿತಿಗೆ ಮರಳುತ್ತಿದ್ದರೂ, ತುರ್ತು ಮೂಲಭೂತ ವ್ಯವಸ್ಥೆ ಮತ್ತು ಪುನರ್ವಸತಿ ಕಲ್ಪಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ದೇಶದ ಇದುವರೆಗಿನ ಅತ್ಯಂತ ದೊಡ್ಡ ಸೇನಾ ಪರಿಹಾರ ಕಾರ್ಯಾಚರಣೆಯಲ್ಲಿ ಒಂದಾದ ಕೇರಳದ ಜಲಪ್ರಳಯದ ಸಂದರ್ಭದಲ್ಲಿ ಮಿಲಿಟರಿ, ಮೀನುಗಾರರು ಮತ್ತು ಇತರ ಸಂಘಟನೆಗಳು ತೊಡಗಿಸಿಕೊಂಡ ರೀತಿ ವ್ಯಾಪಕ ಪ್ರಶಂಸೆಗೊಳಗಾಗಿದೆ. ಇದೇ ರೀತಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಸಹ ಸಂಘಟನೆ 'ದೇಶೀಯ ಸೇವಾಭಾರತಿ' ಪರಿಹಾರ ಕಾರ್ಯದಲ್ಲಿ ದೊಡ್ಡ ಮಟ್ಟಿನ ಸೇವೆ ನೀಡುತ್ತಿದೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

ಪ್ರವಾಹ ಪೀಡಿತ ಎಲ್ಲಾ ಹದಿನಾಲ್ಕು ಜಿಲ್ಲೆಗಳಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ದೇಣಿಗೆಯಿಂದ ಹಿಡಿದು ವಸತಿ, ಊಟ, ಪರಿಹಾರ ಶಿಬಿರ ಮುಂತಾದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳಾ ಕಾರ್ಯಕರ್ತರೂ ಸೇರಿ ಸುಮಾರು ಒಂದು ಲಕ್ಷ RSS ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕೇರಳದ ಪರಿಹಾರ ಕಾರ್ಯದಲ್ಲಿ ಸಂಘಟನೆ ತೊಡಗಿಸಿಕೊಂಡಿರುವುದು ಸತ್ಯಕ್ಕೆ ದೂರವಾದುದು, ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಇಮೇಜುಗಳು ಗುಜರಾತ್ ಪ್ರವಾಹದ ಸಂದರ್ಭದ್ದು ಎಂದು ಸಾಮಾಜಿಕ ತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆಲ್ಲಾ, ಸಂಘಟನೆಯ ಈ ಬೃಹತ್ ಕಾರ್ಯಾಚರಣೆ ಉತ್ತರ ನೀಡಿದೆ.

ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರುಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು

ವೃತ್ತಿಯಲ್ಲಿ ಉಪನ್ಯಾಸಕರು ಮತ್ತು ಸಂಘಟನೆಯ ವಿದ್ಯಾರ್ಥಿ ಪ್ರಮುಖ್ ಆಗಿರುವ ರಾಜೇಶ್ ಪದ್ಮಾರ್, 'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ, ಸುಮಾರು ಒಂದು ಲಕ್ಷ ಸಂಘಟನೆಯ ಕಾರ್ಯಕರ್ತರು, ಕೇರಳದ ಪ್ರವಾಹ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇರಳದ ಪ್ರಮುಖ ಸುದ್ದಿವಾಹಿನಿಗಳು ನಮ್ಮ ಕಾರ್ಯಕರ್ತರ ಸೇವಾ ಮನೋಭಾವವನ್ನು ಪ್ರಸಾರ ಮಾಡಿವೆ. ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಇದೇ ಉತ್ತರ ನೀಡುತ್ತದೆ ಎಂದು ಪದ್ಮಾರ್ ಹೇಳಿದ್ದಾರೆ. RSS ಕಾರ್ಯಾಚರಣೆ ಯಾವ ರೀತಿಯಿದೆ, ಸ್ಲೈಡಿನಲ್ಲಿ ಇಮೇಜ್ ಸಹಿತ ಪ್ರಕಟಿಸಲಾಗಿದೆ.

75 ಸಾವಿರಕ್ಕೂ ಹೆಚ್ಚು ನಾಗರೀಕರನ್ನು ಪ್ರವಾಹದಿಂದ ರಕ್ಷಿಸಲಾಗಿದೆ

75 ಸಾವಿರಕ್ಕೂ ಹೆಚ್ಚು ನಾಗರೀಕರನ್ನು ಪ್ರವಾಹದಿಂದ ರಕ್ಷಿಸಲಾಗಿದೆ

ಇದುವರೆಗೆ 75 ಸಾವಿರಕ್ಕೂ ಹೆಚ್ಚು ನಾಗರೀಕರನ್ನು ಪ್ರವಾಹದಿಂದ ರಕ್ಷಿಸಲಾಗಿದೆ, ಇದುವರೆಗೆ ರಕ್ಷಣಾ ಕಾರ್ಯಾಚರಣೆಗೆ ಸುಮಾರು 1.2ಕೋಟಿ ರೂಪಾಯಿ ಸಂಘಟನೆಗೆ ತಗುಲಿದೆ. 85,000 ಪುರುಷರು ಮತ್ತು 15,000 ಮಹಿಳಾ ಕಾರ್ಯಕರ್ತರು ಪರಿಹಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 3,965 ಪರಿಹಾರ ಶಿಬಿರವನ್ನು ತೆರೆಯಲಾಗಿದ್ದು, ಇದರಲ್ಲಿ 150 ಕ್ಯಾಂಪ್ ಅನ್ನು ನೇರವಾಗಿ ಸೇವಾಭಾರತಿ ನಿರ್ವಹಿಸುತ್ತಿದೆ.

ಮೂರು ಬೃಹತ್ ಗೋದಾಮನ್ನು RSS ತೆರೆದಿದೆ

ಮೂರು ಬೃಹತ್ ಗೋದಾಮನ್ನು RSS ತೆರೆದಿದೆ

ಆಹಾರ ಸಾಮಗ್ರಿ, ಬಟ್ಟೆ, ಔಷದಿ ಮುಂತಾದುವುಗಳನ್ನು ಶೇಖರಿಸಿಡಲು ತಿರುವನಂತಪುರಂ, ಪಾಲಕ್ಕಾಡ್ ಮತ್ತು ಕಾಸರಗೋಡಿನಲ್ಲಿ ಮೂರು ಬೃಹತ್ ಗೋದಾಮನ್ನು RSS ತೆರೆದಿದೆ. ಜೊತೆಗೆ, ರಕ್ಷಣಾ ಕಾರ್ಯಾಚರಣೆಗಾಗಿ ನೂರೈವತ್ತು ಬೋಟನ್ನು ನಿಯೋಜಿಸಲಾಗಿದೆ. ಮುನ್ನೂರಕ್ಕೂ ಹೆಚ್ಚು ವಾಹನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ನವಜಾತಶಿಶು ನೋಡಿ ಸಂತಸಪಟ್ಟ ನೌಕಾಪಡೆ ಅಧಿಕಾರಿಗಳುನವಜಾತಶಿಶು ನೋಡಿ ಸಂತಸಪಟ್ಟ ನೌಕಾಪಡೆ ಅಧಿಕಾರಿಗಳು

ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಬೃಹತ್ ಕಾರ್ಯಾಚರಣೆ

ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಬೃಹತ್ ಕಾರ್ಯಾಚರಣೆ

ಎಲ್ಲೆ ನೋಡಿದರಲ್ಲಿ ಕಸ, ಬಗೆದಷ್ಟು ಕೆಸರು ತುಂಬಿರುವ ಹದಿನಾಲ್ಕು ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗ ಹರಡದೇ ಇರಲು ನೈರ್ಮಲ್ಯಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 75ಸಾವಿರಕ್ಕೂ ಹೆಚ್ಚು ಜನರನ್ನು ಪ್ರವಾಹದಿಂದ ರಕ್ಷಿಸಲಾಗಿದೆ ಎಂದು ಆರ್ ಎಸ್ ಎಸ್ ಹೇಳಿದೆ.

210 ಸಣ್ಣ ಗೋದಾಮು ಕಾರ್ಯನಿರ್ವಹಿಸುತ್ತಿದೆ

210 ಸಣ್ಣ ಗೋದಾಮು ಕಾರ್ಯನಿರ್ವಹಿಸುತ್ತಿದೆ

ಪ್ರವಾಹ ಪೀಡಿತ ಪ್ರತೀ ಜಿಲ್ಲೆಯ ವಿವಿಧ ಹದಿನೈದು ಕಡೆ ಸಣ್ಣ ಗೋದಾಮನ್ನು ತೆರೆಯಲಾಗಿದೆ. ಪ್ರತೀ ಗೋದಾಮಿನಲ್ಲೂ ಆಯಾಯ ಪ್ರದೇಶಕ್ಕೆ ಬೇಕಾಗುವಷ್ಟು ದಿನಸಿ, ಮೆಡಿಸಿನ್, ದೈನಂದಿನ ವಸ್ತುಗಳು, ಶೌಚಲಾಯಕ್ಕೆ ಸಂಬಂಧಪಟ್ಟ ವಸ್ತುಗಳು, ಬಟ್ಟೆ ಮುಂತಾದವುಗಳನ್ನು ಶೇಖರಿಸಿಡಲಾಗಿದೆ. ಈ ರೀತಿಯ 210 ಸಣ್ಣ ಗೋದಾಮು ಕಾರ್ಯನಿರ್ವಹಿಸುತ್ತಿದೆ.

ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?ಕೇರಳ ಪ್ರವಾಹ: ಯುಎಇ ನೆರವು ಕೇಂದ್ರ ತಿರಸ್ಕರಿಸಿದ್ದೇಕೆ ಗೊತ್ತೇ?

ಎಪ್ಪತ್ತು ಅಂಬುಲೆನ್ಸ್ ಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ

ಎಪ್ಪತ್ತು ಅಂಬುಲೆನ್ಸ್ ಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ

ಎಪ್ಪತ್ತು ಅಂಬುಲೆನ್ಸ್ ಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ, ಜೊತೆಗೆ 24X7 ಹೆಲ್ಪ್ ಡೆಸ್ಕ್ ತ್ರಿಶೂರು ಸೇರಿದಂತೆ ಹದಿನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. (ದೂರವಾಣಿ ಸಂಖ್ಯೆ - 8330083324). ಇದುವರೆಗೆ ರಕ್ಷಣಾ ಕಾರ್ಯಾಚರಣೆಗೆ ಸುಮಾರು 1.2ಕೋಟಿ ರೂಪಾಯಿ ತಗುಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಹೇಳಲಾಗಿದೆ.

English summary
Kerala flood: RSS and Sevabharathi organization massive rescue and relief activities, more than 1Lac volunteers working on this. 210 wearhouse, 70 ambulence, 150 boats deployed for rescue operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X