ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ತಗ್ಗದ ವರುಣನ ಮುನಿಸು: ಹೆಚ್ಚುವರಿ ರಕ್ಷಣಾ ಪಡೆ ರವಾನೆ

|
Google Oneindia Kannada News

ಕೊಚ್ಚಿನ್, ಆಗಸ್ಟ್ 16: ಕೇರಳದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನರ ಪರದಾಟ ತೀವ್ರಗೊಂಡಿದೆ.

ಪ್ರವಾಹ ಮತ್ತು ಭೂಕುಸಿತಗಳ ಕಾರಣ ಮೃತಪಟ್ಟವರ ಸಂಖ್ಯೆ 79ಕ್ಕೆ ಏರಿದೆ. ಗುರುವಾರ 12 ಮಂದಿ ಮೃತಪಟ್ಟಿರವುದು ವರದಿಯಾಗಿದೆ.

ಮುನ್ನಾರ್‌ನಲ್ಲಿ 82 ಪ್ರವಾಸಿಗರು ಬಸ್ ಒಳಗೆ ಸಿಲುಕಿಕೊಂಡಿದ್ದಾರೆ. ಕೇರಳದ ಬಹುತೇಕ ಎಲ್ಲ ರಸ್ತೆಗಳೂ ಪ್ರವಾಹ ಅಥವಾ ಭೂಕುಸಿತದ ಕಾರಣ ಬಂದ್ ಆಗಿವೆ.

ಕೇರಳದಲ್ಲಿ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ ಆರೆಸ್ಸೆಸ್ ಮಾನವೀಯತೆ?ಕೇರಳದಲ್ಲಿ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ ಆರೆಸ್ಸೆಸ್ ಮಾನವೀಯತೆ?

ಪ್ರವಾಹದ ನಡುವೆ ಸಿಲುಕಿರುವ ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ರಕ್ಷಣಾ ಪಡೆಗಳು ಧಾವಿಸಿವೆ. 50ಕ್ಕೂ ಹೆಚ್ಚು ಜನರಿರುವ ಕಡೆ ಲೈಫ್ ಬೋಟ್‌ಗಳು, ಲೈಫ್ ಜಾಕೆಟ್ ಹಾಗೂ ತೇಲುವ ಉಪಕರಣಗಳನ್ನು ಹೆಲಿಕಾಫ್ಟರ್ ಮೂಲಕ ಪೂರೈಸಲಾಗುತ್ತಿದೆ.

ಭಾರತೀಯ ವಾಯುಪಡೆಯ ಯೋಧರು ಕಾರ್ಯೋನ್ಮುಖರಾಗಿದ್ದು, ವಿವಿಧೆಡೆ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಕೊಂಡೊಯ್ಯುತ್ತಿದೆ.

Array

ಸಾರಿಗೆ ಸಂಪರ್ಕವಿಲ್ಲ

ತಿರುವನಂತಪುರಂ, ಕ್ಯಾಲಿಕಟ್ ವಿಮಾನ ನಿಲ್ದಾಣಗಳಿಂದ ಹೊರಡಬೇಕಿದ್ದ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನವದೆಹಲಿಯಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದ್ದು, ವಿಮಾನ ಸಂಚಾರಕ್ಕೆ ಸಂಬಂಧಿಸಿದ ಎಲ್ಲ ಅನುಮಾನಗಳಿಗೆ ದಿನದ 24 ಗಂಟೆಯೂ ಸ್ಪಂದಿಸಲಿದೆ.

ಕೊಚ್ಚಿ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟವನ್ನು ಶನಿವಾರದವರೆಗೂ ಸ್ಥಗಿತಗೊಳಿಸಲಾಗಿದೆ. 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಹೆಚ್ಚಿನ ಪ್ರಮಾಣದ ದೋಣಿಗಳು ಹಾಗೂ ಲೈಫ್ ಜಾಕೆಟ್‌ಗಳನ್ನು ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ಅವರ ಕೋರಿಕೆಗೆ ತಕ್ಷಣ ಸ್ಪಂದಿಸಲು ರಕ್ಷಣಾ ಕಾರ್ಯದರ್ಶಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.

ಕರಾವಳಿಯಲ್ಲಿ ಇನ್ನೂ ಎರಡು ದಿನ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆಕರಾವಳಿಯಲ್ಲಿ ಇನ್ನೂ ಎರಡು ದಿನ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಪಿಣರಾಯಿಗೆ ಮೋದಿ ಕರೆ

ಗುರುವಾರ ಬೆಳಿಗ್ಗೆ ವಿಜಯನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮಾತುಕತೆ ನಡೆಸಿದ್ದಾರೆ. ರಾಜ್ಯದಾದ್ಯಂತ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ರಕ್ಷಣಾ ಸಚಿವಾಲಯಕ್ಕೆ ನಿರ್ದೇಶಿಸಲಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆಕೇರಳ ಪ್ರವಾಹ : ದೇವರ ನಾಡಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ

ಎಲ್ಲ ರೀತಿಯ ನೆರವಿನ ಭರವಸೆ

ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ರವಾನಿಸುತ್ತಿರುವುದಾಗಿ ತಿಳಿಸಿದ್ದಾರೆ. ಸಾಧ್ಯವಿರುವ ಎಲ್ಲ ರೀತಿಯ ನೆರವುಗಳನ್ನು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ದೊಡ್ಡ ಪ್ರಮಾಣದಲ್ಲಿ ಸೇನೆ ಹಾಗೂ ನೌಕಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಕೋರಿದ್ದಾರೆ. ಕೇರಳ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೆರವು ನೀಡುವಂತೆ ರಾಹುಲ್ ಗಾಂಧಿ ಟ್ವಿಟ್ಟರ್‌ನಲ್ಲಿ ಜನರಿಗೆ ಮನವಿ ಮಾಡಿದ್ದಾರೆ.

ಮುಲ್ಲಪೆರಿಯಾರ್ ಸಮಸ್ಯೆಗೆ ಪರಿಹಾರ

ಬುಧವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವರ ಮಧ್ಯಪ್ರವೇಶದೊಂದಿಗೆ ಮುಲ್ಲಪೆರಿಯಾರ್ ಅಣೆಕಟ್ಟಿನ ಹೆಚ್ಚುತ್ತಿರುವ ನೀರಿನ ಮಟ್ಟದ ಕುರಿತಂತೆ ಕೇರಳ ಮತ್ತು ತಮಿಳುನಾಡು ನಡುವೆ ಉದ್ಭವಿಸಿದ್ದ ಉದ್ವಿಗ್ನ ಸ್ಥಿತಿ ಶಮನವಾಗಿದೆ. ಅಣೆಕಟ್ಟಿನಿಂದ ನೀರು ಹೊರಬಿಟ್ಟು ಒಳಹರಿವು ಒಂದೇ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲು ಕೇರಳ ಕೋರಿತ್ತು. ಅಣೆಕಟ್ಟಿನ ಗರಿಷ್ಠ ಮಟ್ಟವಾದ 142 ಅಡಿ ನೀಡು ತುಂಬಿಕೊಂಡಂತೆ ಕೇರಳಕ್ಕೆ ಅಪಾಯ ಹೆಚ್ಚುತ್ತಿತ್ತು.

ಏಳನೇ ದಿನದ ಕಾರ್ಯಾಚರಣೆ

ಭಾರತೀಯ ನೌಕಾಪಡೆಯ ಆಪರೇಷನ್ ಮಡಾದ್ ಏಳನೇ ದಿನಕ್ಕೆ ಕಾಲಿರಿಸಿದ್ದು, ದಕ್ಷಿಣ ನೌಕಾ ಕಮಾಂಡ್ 21 ರಕ್ಷಣಾ ಮತ್ತು ಮುಳುಗುತಜ್ಞರ ತಂಡಗಳನ್ನು ನಿಯೋಜಿಸಿದೆ. ಜೆಮಿನಿ ಬೋಟ್‌ಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 399 ಸಿಬ್ಬಂದಿ 34 ದೋಣಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ವಿಪತ್ತು ಪರಿಹಾರದ 14 ತಂಡಗಳು ಕಾರ್ಯನಿರ್ವಹಿಸುತ್ತಿವೆ.

926 ಮಂದಿ ರಕ್ಷಣೆ

ಕೋಯಿಕ್ಕೋಡ್, ಎರ್ನಾಕುಲಂ, ತ್ರಿಶ್ಶೂರ್, ಅಳಪ್ಪುಳ, ಪದಮಿಥಿಟ್ಟ ಜಿಲ್ಲೆಗಳಲ್ಲಿ ಇದುವರೆಗೂ ಸುಮಾರು 926 ಮಂದಿಯನ್ನು ರಕ್ಷಿಸಲಾಗಿದೆ.

ಮಲಪ್ಪುಳದ ವಲಿಯಾಕಾಡು ಗ್ರಾಮದಲ್ಲಿ 35 ಅಡಿ ಉದ್ದದ ಸೇತುವೆ ನಿರ್ಮಿಸಿರುವ ಸೇನಾಪಡೆ ನೂರಾರು ಮಕ್ಕಳು, ವೃದ್ಧರನ್ನು ರಕ್ಷಿಸಿದೆ. ಹೆಲಿಕಾಪ್ಟರ್, ದೋಣಿಗಳ ಮೂಲಕ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳುತ್ತಿರುವ ರಕ್ಷಣಾ ಸಿಬ್ಬಂದಿ ಜೀವದ ಹಂಗು ತೊರೆದು ಅವರನ್ನು ರಕ್ಷಿಸುತ್ತಿದ್ದಾರೆ.

ಪ್ರವಾಸೋದ್ಯಮಕ್ಕೆ ಪೆಟ್ಟು

ಕೇರಳದ ಅತಿ ದೊಡ್ಡ ಆದಾಯದ ಮೂಲವಾಗಿರುವ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತೀಯ ಪ್ರವಾಸ ಕಾರ್ಯಾಚರಣೆ ಸಂಸ್ಥೆಯ ಪ್ರಕಾರ ಇಡುಕ್ಕಿ, ಮುನ್ನಾರ್, ಕುಮಾರಕ್ಕೊಮ್ ಮುಂತಾದ ಪ್ರದೇಶಗಳ ಶೇ 70-80ರಷ್ಟು ಟಿಕೆಟ್‌ಗಳನ್ನು ಪ್ರವಾಸಿಗರು ರದ್ದುಗೊಳಿಸಿದ್ದಾರೆ.

ಬೇರೆ ಬೇರೆ ಪ್ರದೇಶ, ರಾಜ್ಯಗಳಿಂದ ಬಂದ ಅನೇಕ ಪ್ರವಾಸಿಗರು ರಸ್ತೆ ಮಧ್ಯೆಯೇ ಸಿಲುಕಿಕೊಂಡಿದ್ದಾರೆ. ರಾಜ್ಯದ ಬಹುತೇಕ ಪ್ರದೇಶಗಳಿಗೆ ಹಾನಿಯಾಗಿರುವುದರಿಂದ ಇದು ತನ್ನ ಹಳೆಯ ಸೊಬಗನ್ನು ಕಳೆದುಕೊಳ್ಳುವ ಆತಂಕವೂ ಎದುರಾಗಿದೆ.

ಚಹಾ ತೋಟ ಹಾನಿ

ಮಳೆಯಿಂದಾಗಿ ಟೀ, ಕಾಫಿ, ರಬ್ಬರ್ ಮುಂತಾದ ತೋಟಗಳಲ್ಲಿ ಮಳೆಯಿಂದ ಸುಮಾರು 600 ಕೋಟಿ ರೂ. ಹಾನಿಯಾಗಿದೆ. ಚಹಾ ತೋಟಗಳಲ್ಲಿಯೇ 150-250 ಕೋಟಿ ರೂ. ನಷ್ಟವನ್ನು ಅಂದಾಜಿಸಲಾಗಿದೆ. ವಯನಾಡಿನಲ್ಲಿ ನೂರಾರು ಎಕರೆ ಜಮೀನು ಭೂಕುಸಿತದಿಂದ ನಾಶವಾಗಿವೆ.

English summary
Kerala flood Rain and Floods in Kerala continued on Thursday also. Death toll rises to 79. Defence ministry and Home ministry sent additional rescue troops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X