• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳದಲ್ಲಿ 12 ಉಗ್ರರಿದ್ದಾರೆ: interpol ಘೋಷಣೆ

By Srinath
|

ನವದೆಹಲಿ, ಫೆ.1: ಕೇರಳ ರಾಜ್ಯವು ಭಯೋತ್ಪಾದಕರಿಗೆ ಪ್ರಶಸ್ತ ಸ್ಥಳ ಎಂದು ಖುದ್ದು ಯಾಸಿನ್ ಭಟ್ಕಳನೇ ಹೇಳಿಯಾಗಿದೆ. ಭಾರತದ NIA ಸಹ ಇದನ್ನೇ ಹೇಳುತ್ತಾ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಂಟರ್ ಪೋಲ್ ಸಂಸ್ಥೆಯವರು ಸಹ ಕೇರಳದಲ್ಲಿ 12 ಮಂದಿ ಉಗ್ರರು ನೆಲೆಸಿದ್ದಾರೆ ಎಂದು ಘೋಷಿಸಿದೆ. ಇದಲ್ಲದೆ ನಕಲಿ ನೋಟು ಪ್ರಕರಣದಲ್ಲಿ ಭಾಗಿಯಾಗಿರುವ ಮೂರು ವ್ಯಕ್ತಿಗಳ ವಿರುದ್ಧವೂ ಇಂಟರ್ ಪೋಲ್ ಪೊಲೀಸರಿಗೆ ಬೇಕಾಗಿದ್ದಾರೆ.

ಆತಂಕಕಾರಿ ವಿಷಯವೆಂದರೆ ಇಂಟರ್ ಪೋಲ್ ಸಂಸ್ಥೆಗೆ ಅತ್ಯಗತ್ಯವಿರುವ 12 ಭಯೋತ್ಪಾದಕರು ಕೇರಳದಲ್ಲಿದ್ದಾರಾದರೂ ಅವರ ಅಡಗುದಾಣ ಯಾವುದು ಎಂಬುದು ಪತ್ತೆಯಾಗಿಲ್ಲ. ಆದರೆ ಇವರೆಲ್ಲ ಎರ್ನಾಕುಲಂ ಮೂಲಸ್ಥರು.

ಸಿಬಿಐ ಪ್ರಕಾರ 19 ಮಂದಿ ಉಗ್ರರು ಕೇರಳದಲ್ಲಿದ್ದಾರೆ. ಇವರ ವಿರುದ್ಧ Interpol red corner ಸಹ ಜಾರಿಗೊಳಿಸಲಾಗಿದೆ. ಆದರೆ ಅವರು ಯಾರೂ ಇದುವರೆಗೂ ಪತ್ತೆಯಾಗಿಲ್ಲ.

{ಭಯೋತ್ಪಾದನೆ ಚಟುವಟಿಕೆಗೆ ಕೇರಳ ಹೆಚ್ಚು ಪ್ರಶಸ್ತ: ಭಟ್ಕಳ}

ಆದರೆ ಭಯೋತ್ಪಾದನೆ ಚಟುವಟಿಕೆ ನಡೆಸಿದ ಆರೋಪದ ಮೇಲೆ ಇಂಟರ್ ಪೋಲ್ ಸಂಸ್ಥೆ ಪ್ರಕಟಿಸಿರುವ 12 ಮಂದಿ ಭಯೋತ್ಪಾದಕರ ಪಟ್ಟಿಯಲ್ಲಿ ಅವರ ಭಾವಚಿತ್ರಗಳೇ ಇಲ್ಲ. ಅಥವಾ ವೈಯಕ್ತಿಕ ವಿವರಗಳೂ ಇಲ್ಲ. ಸ್ಥಳೀಯ ಪೊಲೀಸರು ಮತ್ತು ವಿಶೇಷ ತನಿಖಾ ದಳಗಳು ನೀಡಿರುವ ವಿವರಗಳಷ್ಟೇ ದಾಖಲಾಗಿವೆ. ಈ ಭಯೋತ್ಪಾದಕರ ಜನ್ಮಸ್ಥಳ ಮತ್ತು ಅವರು ಭಾಗಿಯಾಗಿರುವ ಭಯೋತ್ಪಾದಕ ಚಟುವಟಿಕೆಗಳ ವಿವರವಷ್ಟೇ ನಮೂದಾಗಿವೆ.

ಆತಂಕದ ವಿಷಯವೆಂದರೆ ಈ ಉಗ್ರರು ದೇಶದಲ್ಲಿ ಇನ್ನೂ ಚಲಾವಣೆಯಲ್ಲಿದ್ದು, ಭಯೋತ್ಪಾದಕ ಚಟುವಟಿಕೆಗಳಿಗೆ ಹೊಂಚುಹಾಕುತ್ತಿದ್ದಾರೆ ಎಂದು ಸಿಬಿಐ ಮೂಲಗಳು ಹೇಳಿವೆ. [ದಕ್ಷಿಣ ಭಾರತದ ಮೇಲೆ ಉಗ್ರರ ಕಣ್ಣು ಬಿದ್ದಿದೆ]

Interpol red corner ಪಟ್ಟಿಯಲ್ಲಿರುವ ಪ್ರಮುಖ ಉಗ್ರರು:

ಚೆನ್ನಪರಾಂಬಿಲ್ ಮೊಹಮದ್ ಬಷೀರ್, ಅಳುವಾ, ಕದಪ್ಪುರಂ ಶಿಹಾಬ್, ಕಾಸರಗೋಡ್, ಕರೀಂಬೇರಿಪಾಡಿ ನಜೀಬ್, ಎರ್ನಾಕುಲಂ, ಕೋಚುಪೀಡಿಕಯೀಲ್ ಸಬೀರ್, ಮರಕ್ಕರಕಂಡಿ, ಕಣ್ಣೂರು, ಕೊಟ್ಟಾ ಅಬ್ದುಲ್ ಸಬೂರ್, ಮರಂಗಟ್ಟು ನಸಾರ್, ಎರ್ನಾಕುಲಂ ಮೊಹಮದ್ ಅಷಾರ್, ಕೊಳವಲ್ಲೂರು, ತಲಷೇರಿ, ಮುದಸ್ಸೇರಿ ಸವಾದ್, ಪಿಪಿ ಯೂಸುಫ್, ಕೊಯ್ಯಂ, ತಲಿಪರಂಬ, ಪೊಟ್ಟಿಂಕಲ್ ಸುಹೇಬ್, ಪತಿಯನ್ನು ಕೊಂದ ತಮಿಳುನಾಡಿನ ಡಾ. ಎದಾದನ್ ಒಮಾನಾ ಇನ್ನೂ ಮುಂತಾದವರು.

{ ಚಿತ್ತೂರು ಉಗ್ರರು ಬೆಂಗಳೂರಿಗೆ; ಜತೆಗೆ ಭಟ್ಕಳನೂ }

English summary
Kerala has 12 terrorists- Interpol. They are among the 12 Keralites for whom the CBI had issued an Interpol red corner alert. Most of them are natives of Ernakulam. The red corner alerts do not even have the photographs or physical description of some of these wanted persons. Apart from the terrorists, three in the red corner alert list are wanted for counterfeiting/fake currency cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more