• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನೀಗ ಮುಕ್ತ ಮುಕ್ತ; ಕೇರಳ ಕಾಂಗ್ರೆಸ್ಸಿಗ ಮುಸ್ತಫಾ

By Srinath
|

ಕೊಚ್ಚಿ, ಮೇ 30: ಕೇರಳದಲ್ಲಿ ಈ ಬಾರಿಯೂ ತನ್ನ ಅಸ್ತಿತ್ವವನ್ನು ಸುಧಾರಿಸಿಕೊಳ್ಳುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಪಕ್ಷವು ಮುಜುಗರದ ಸನ್ನಿವೇಶ ಎದುರಿಸಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜೋಕರ್ ರೀತಿ ವರ್ತಿಸಿದ್ದಾರೆ ಎಂದು ಜರಿದಿದ್ದ ಮಾಜಿ ಸಚಿವರೊಬ್ಬರನ್ನು ಪಕ್ಷದಿಂದ ಗುರುವಾರ ರಾತ್ರಿ ಅಮಾನತು ಮಾಡಲಾಗಿದೆ. ಇದರಿಂದ ಕಾಂಗ್ರೆಸ್ಸಿಗೆ ಮತ್ತಷ್ಟು ಮುಜುಗರವುಂಟಾಗಿದೆ.

'ರಾಹುಲ್ ಜೋಕರ್' ಎಂದಿದ್ದಕ್ಕೆ ಎಐಸಿಸಿ ಸದಸ್ಯ ಸಸ್ಪೆಂಡ್ : ಕೇರಳದ ಮಾಜಿ ಸಚಿವ ಟಿಎಚ್ ಮುಸ್ತಾಫಾ ಅವರು ಕೊಚ್ಚಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡುತ್ತಾ 'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜೋಕರ್ ರೀತಿ ವರ್ತಿಸಿದ್ದಾರೆ. ಹೀಗಾಗಿಯೇ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋಲುವಂತಾಯಿತು' ಎಂದು ಈ ಬಾರಿಯ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿದ್ದರು.

ನಾನೀಗ ಮುಕ್ತ ಮುಕ್ತ; ಕೇರಳ ಕಾಂಗ್ರೆಸ್ಸಿಗ ಮುಸ್ತಫಾ

ನಾನೀಗ ಮುಕ್ತ ಮುಕ್ತ; ಕೇರಳ ಕಾಂಗ್ರೆಸ್ಸಿಗ ಮುಸ್ತಫಾ

'ನಾನೀಗ ಸರ್ವತಂತ್ರ ಸ್ವತಂತ್ರ. ಇನ್ನು ಏನು ಬೇಕಾದರೂ ಮಾತನಾಡಬಹುದು. ನನ್ನ ಮನಸ್ಸಿಗೆ ಬಂದದ್ದನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಬಹುದು' ಎಂದು ಕಾಂಗ್ರೆಸ್‌ನಿಂದ ಅಮಾನತ್ತಾಗಿರುವ ನಾಯಕ ಮುಸ್ತಫಾ ಹೇಳಿದ್ದಾರೆ.

'ಈಗ ನನ್ನ ಮಾತಿಗೆ ನಿರ್ಬಂಧ ಹೇರುವವರು ಯಾರೂ ಇಲ್ಲ. ತೋಚಿದ್ದನ್ನು ಹೇಳಬಲ್ಲೆ. ಕೊನೆಯವರೆಗೆ ನಿಜವಾದ ಕಾಂಗ್ರೆಸ್ಸಿಗನಾಗಿ ಉಳಿದವನು ನಾನು ಎಂಬ ಹೆಮ್ಮೆ ನನ್ನದು' ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ವರಿಷ್ಠರು ಏನನ್ನುತ್ತಾರೆ?:

ಕಾಂಗ್ರೆಸ್ ವರಿಷ್ಠರು ಏನನ್ನುತ್ತಾರೆ?:

ಮುಸ್ತಫಾ ಅಮಾನುತು ಕ್ರಮವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಪಕ್ಷದೊಳಗಿನ ಆಂತರಿಕೆ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅವರು ಬಳಸಿರುವ ಭಾಷೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ನ ನಾಯಕ ಸಂಜಯ್ ಝಾ ಹೇಳಿದ್ದಾರೆ.

ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸೋಲಿನ ಹೊಣೆ ಹೊತ್ತು ಅವರ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅದಾಗ್ಯೂ ಮುಸ್ತಫಾ ಈ ರೀತಿ ಮಾತನಾಡಿರುವುದು ಖಂಡನಾರ್ಹ ಎಂದು ಝಾ ಹೇಳಿದ್ದಾರೆ.

ರಾಹುಲರನ್ನು ಬಲವಂತವಾಗಿ ವಜಾ ಮಾಡಬೇಕು

ರಾಹುಲರನ್ನು ಬಲವಂತವಾಗಿ ವಜಾ ಮಾಡಬೇಕು

ಜತೆಗೆ, ಅವರನ್ನು (ರಾಹುಲ್ ಗಾಂಧಿ) ಪಕ್ಷದಿಂದ ಉಚ್ಚಾಟಿಸಬೇಕು. ಅವರು ಸ್ವಯಂಪ್ರೇರಿತರಾಗಿ ಆ ಸ್ಥಾನದಿಂದ ಕೆಳಗಿಳಯಬೇಕು. ಇಲ್ಲವಾದಲ್ಲಿ ಅವರನ್ನು ಬಲವಂತವಾಗಿ ವಜಾ ಮಾಡಬೇಕು ಎಂದು ಮುಸ್ತಾಫಾ ಆಗ್ರಹಿಸಿದ್ದರು.

ಪ್ರಿಯಾಂಕಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಲಿ

ಪ್ರಿಯಾಂಕಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಲಿ

ಇದೇ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನೇ ಪಕ್ಷದ ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂದೂ ಮುಸ್ತಾಫಾ ಆಗ್ರಹಿಸಿದ್ದರು. ಗಮನಾರ್ಹವೆಂದರೆ ಮುಸ್ತಾಫಾ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಸದಸ್ಯರೂ ಹೌದು.

ಕಾಂಗ್ರೆಸ್ ಸೋಲಿಗೆ ಸಾಮೂಹಿಕ ಜವಾಬ್ದಾರಿ ಹೊರಬೇಕು

ಕಾಂಗ್ರೆಸ್ ಸೋಲಿಗೆ ಸಾಮೂಹಿಕ ಜವಾಬ್ದಾರಿ ಹೊರಬೇಕು

ಇದರಿಂದ ಕೆರಳಿದ ಕೆಪಿಸಿಸಿ ರಾಜ್ಯಾಧ್ಯಕ್ಷ ವಿಎಂ ಸುಧೀರ್ ಅವರು ಕಾಂಗ್ರೆಸ್ ಸೋಲಿಗೆ ಸಾಮೂಹಿಕ ಜವಾಬ್ದಾರಿ ಹೊರಬೇಕಿದೆ. ಕೇವಲ ಒಬ್ಬ ವ್ಯಕ್ತಿಯನ್ನು ದೂಷಿಸುವುದು ಸರ್ವತಾ ಸಾಧುವಲ್ಲ ಎಂದು ಮುಸ್ತಾಫಾ ಟೀಕೆಗೆ ಪ್ರತಿಕ್ರಿಯಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಸೋನಿಯಾನೂ ಬೇಡ ಪ್ರಿಯಾಂಕಾ ಬರಲಿ

ಸೋನಿಯಾನೂ ಬೇಡ ಪ್ರಿಯಾಂಕಾ ಬರಲಿ

1998ರ ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪರಾಭವಗೊಂಡಾಗ ಸೋನಿಯಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷೆಯನ್ನಾಗಿ ನೇಮಿಸಲಾಯಿತು. 1999ರಲ್ಲಿಯೇ ಕಾಂಗ್ರೆಸ್ ಮತ್ತೆ ಬಿಜೆಪಿ ಎದುರು ಸೋತಿತು. ಆದರೆ 5 ವರ್ಷದ ಬಳಿಕ ಪಕ್ಷ ಮತ್ತೆ ಅಮೋಘವಾಗಿ ಜಯ ಸಾಧಿಸಿ, 10 ವರ್ಷ ಕಾಲ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿತ್ತು.

ಕೇರಳದಲ್ಲೂ, ದೇಶದಲ್ಲಿಯೂ ಕಾಂಗ್ರೆಸ್ಸಿಗೆ ಭಾರಿ ಪರಾಭವ

ಕೇರಳದಲ್ಲೂ, ದೇಶದಲ್ಲಿಯೂ ಕಾಂಗ್ರೆಸ್ಸಿಗೆ ಭಾರಿ ಪರಾಭವ

ಕೇರಳದಲ್ಲಿ ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷವು ಯುಡಿಎಫ್ ಮೈತ್ರಿಯೊಂದಿಗೆ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ದೇಶದಾದ್ಯಂತ 543 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷವು ಕೇವಲ 44 ಸ್ಥಾನ ಗಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha election results 2014- Former Kerala minister TH Mustafa, who had demanded Congress vice president Rahul Gandhi's ouster for leading their party to its worst-ever performance, and handing over the reins of the party to his sister Priyanka Gandhi Vadra, has been suspended by the state Congress Committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more