ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳಕ್ಕೆ ಮೋದಿ ಕೊಟ್ಟ ನೆರವಿಗಿಂತ ಜನರು ಕೊಟ್ಟ ನೆರವೇ ಹೆಚ್ಚು

By Manjunatha
|
Google Oneindia Kannada News

ತಿರುವನಂತಪುರ, ಆಗಸ್ಟ್ 30: ಶತಮಾನದ ಅತಿ ದೊಡ್ಡ ಪ್ರಾಕೃತಿ ವಿಕೋಪಕ್ಕೆ ಬಲಿಯಾದ ಕೇರಳಕ್ಕೆ ಭಾರಿ ದೊಡ್ಡ ಮಟ್ಟದ ಸಹಾಯ ಹರಿದುಬಂದಿದೆ. ಅದರ ಲೆಕ್ಕವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಶೇಷ ಅಧಿವೇಶನ ಕರೆದು ಸಾರ್ವಜನಿಕಗೊಳಿಸಿದ್ದಾರೆ.

ಕೇರಳದ ಮುಖ್ಯಮಂತ್ರಿಗಳ ಪರಿಹಾರ ನಿಧಿ (ಸಿಎಂಡಿಆರ್‌ಎಫ್‌) ಒಂದಕ್ಕೇ ಈ ವರೆಗೆ 730 ಕೋಟಿ ನೆರವು ಹರಿದುಬಂದಿದೆ. ಈ ಹಣವನ್ನು ಕೇರಳ ಸರ್ಕಾರವು ಪ್ರವಾಹ ಸಂತ್ರಸ್ತರಿಗೆ ನೀಡುತ್ತಿದೆ. ಹಣ ಹೊತರು ಪಡಿಸಿ ನೆರವಿನ ಸಾಮಗ್ರಿಗಳು ಭಾರಿ ಪ್ರಮಾಣದಲ್ಲಿ ಕೇರಳಕ್ಕೆ ಬಂದಿವೆ.

NASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರNASA ಕಣ್ಣಲ್ಲಿ ಕೇರಳದ ಚಿತ್ರ: ಪ್ರವಾಹಕ್ಕೂ ಮುನ್ನ ಮತ್ತು ನಂತರ

ಕೇಂದ್ರ ಸರ್ಕಾರವು ಕೇರಳಕ್ಕೆ 600 ಕೋಟಿ ಪರಿಹಾರ ಘೋಷಿಸಿ ಸುಮ್ಮನಾಗಿದೆ. ಆದರೆ ಕೇರಳಕ್ಕೆ ಮಾನವೀಯ ಗುಣದ ಜನರೇ ಈವರೆಗೆ 730 ಕೋಟಿ ನೆರವು ನೀಡಿದ್ದಾರೆ. ಇದು ಕೇಂದ್ರ ನೀಡಿದ ಸಹಾಯಧನಕ್ಕಿಂತಲೂ 21.7% ಹೆಚ್ಚು.

ಜನರು ನೀಡಿದ ಜನರಿಗೆ

ಜನರು ನೀಡಿದ ಜನರಿಗೆ

ಜನರು ನೀಡಿದ ಸಹಾಯ ಧನವನ್ನು ಪ್ರವಾಹ ಸಂತ್ರಸ್ತರಿಗೆ ಪ್ರಾಥಮಿಕ ಪರಿಹಾರವಾಗಿ ಕೇರಳ ಸರ್ಕಾರ ನೀಡಿದ್ದು, ಪ್ರವಾಹದಿಂದ ತೊಂದರೆಗೀಡಾಗಿರುವ 3.92 ಲಕ್ಷ ಜನರಿಗೆ 10000 ರೂಪಾಯಿ ನೀಡುವುದಾಗಿ ಹೇಳಿದೆ.

ಪರಿಹಾರ ನಿಧಿಯಿಂದ 6200

ಪರಿಹಾರ ನಿಧಿಯಿಂದ 6200

ಸಂತ್ರಸ್ತರಿಗೆ ನೀಡಲಾಗುತ್ತಿರುವ 10000 ಗಳಲ್ಲಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 6200 ಮತ್ತು ಉಳಿದ 3800 ರೂಗಳನ್ನು ರಾಜ್ಯ ಪ್ರಕೃತಿ ವಿಕೋಪ ವ್ಯವಸ್ಥಾನಪಾ (ಎಸ್‌ಡಿಆರ್‌ಎಫ್‌) ನೀಡುತ್ತಿದೆ. ಕೇರಳದ ಒಟ್ಟು 14 ಜಿಲ್ಲೆಯ 3.92 ಲಕ್ಷ ಜನಕ್ಕೆ ಇದರಿಂದ ಸಹಾಯವಾಗುತ್ತದೆ.

ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?ಕೇರಳ ಪ್ರವಾಹ: ಹವಾಮಾನ ವೈಪರೀತ್ಯದ ಗಂಡಾಂತರದ ಮುನ್ಸೂಚನೆಯೇ?

20000 ಕೋಟಿ ನಷ್ಟವಾಗಿದೆ ಕೇರಳಕ್ಕೆ

20000 ಕೋಟಿ ನಷ್ಟವಾಗಿದೆ ಕೇರಳಕ್ಕೆ

ಕೇರಳ ಈವರೆಗೆ 20000 ನಷ್ಟ ಅನುಭವಿಸಿದೆ ಎಂದು ಪ್ರಾಥಮಿಕ ವರದಿ ಪ್ರಕಾರ ಹೇಳಲಾಗುತ್ತಿದೆ. ಆದರೆ ಪೂರ್ಣ ಸಮೀಕ್ಷೆ ಮುಗಿದ ಬಳಿಕ ಆಸ್ತಿ ಹಾನಿ, ಬೆಳೆ ಹಾನಿ, ರಸ್ತೆ ಹಾನಿ, ವಾಹನ ಹಾನಿ ಎಲ್ಲವನ್ನೂ ಸೇರಿಸಿದರೆ ಈ ಮೊತ್ತ 10 ಪಟ್ಟು ಏರಿಕೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.

ವಿದೇಶಿ ಸಾಲಕ್ಕೆ ನಿರ್ಧಾರ

ವಿದೇಶಿ ಸಾಲಕ್ಕೆ ನಿರ್ಧಾರ

ಭಾರಿ ಪ್ರವಾಹಕ್ಕೆ ಅರ್ಧ ಭಾಗವನ್ನೇ ಕಳೆದುಕೊಂಡಿರುವ ಕೇರಳ ಅದನ್ನು ಮತ್ತೆ ಕಟ್ಟಲು ಭಾರಿ ಹಣ ಸಹಾಯಕ್ಕಾಗಿ ಎದುರು ನೋಡುತ್ತಿದೆ. ಈಗಾಗಲೇ ಕೆಲವು ತೆರಿಗೆಗಳನ್ನು ಹೆಚ್ಚಿಸಲಾಗಿದೆ. ಕೇಂದ್ರಕ್ಕೂ ಮನವಿ ಸಲ್ಲಿಸಲಾಗಿದೆ. ಆದರೆ ಕೇಂದ್ರ 600 ಕೋಟಿ ನೀಡಿ ಕೈ ಕಟ್ಟಿ ಕೂತಿದೆ. ಹಾಗಾಗಿ ಕೇರಳವು ವಿದೇಶಿ ಸಾಲ ಪಡೆಯುವ ನಿರ್ಧಾರ ಕೈಗೊಂಡಿದೆ.

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

English summary
Kerala CMDRF receives 730 crore rupees as help for floods till date says CM Pinarayi Vijayan. central government gave only 600 crore to Kerala but people gave more than that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X