ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್.ಸಿ/ಎಸ್.ಟಿ ಕಾಯ್ದೆ: ಸುಪ್ರೀಂ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಕೇರಳ

By Sachhidananda Acharya
|
Google Oneindia Kannada News

ತಿರುವನಂತಪುರಂ, ಏಪ್ರಿಲ್ 15: ಮಾರ್ಚ್ 20ರ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಕೇರಳ ಸರಕಾರ ಮೇಲ್ಮನವಿ ಸಲ್ಲಿಸಿದೆ. ಈ ಮೂಲಕ ಎಸ್.ಸಿ/ಎಸ್.ಟಿ ಕಾಯ್ದೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಮೊದಲ ರಾಜ್ಯವಾಗಿ ಕೇರಳ ಗುರುತಿಸಿಕೊಂಡಿದೆ.

ಎಸ್.ಸಿ/ಎಸ್.ಟಿ ಕಾಯ್ದೆ ಅನ್ವಯ ವ್ಯಕ್ತಿಯೊಬ್ಬರನ್ನು ತಕ್ಷಣ ಬಂಧನ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಇದನ್ನು ಪಶ್ನಿಸಿ ಕೇರಳ ಮೇಲ್ಮನವಿ ಸಲ್ಲಿಸಿದೆ.

ತನ್ನ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಕೇರಳ ಮನವಿ ಸಲ್ಲಿಸಿದೆ. ಆದೇಶದಿಂದ ಎಸ್.ಸಿ/ಎಸ್.ಟಿಗಳಿಗೆ ಅಸುರಕ್ಷಿತ ಭಾವ ಉಂಟಾಗಲಿದೆ ಎಂದು ಕೇರಳ ಹೇಳಿದೆ. ಈ ಕುರಿತು 19 ಪುಟಗಳ ಅರ್ಜಿ ಸಲ್ಲಿಸಿದ್ದು ಆದೇಶವು ಈ ಸಮುದಾಯಗಳಿಗೆ ದೊಡ್ಡ ಹಾನಿ ಉಂಟು ಮಾಡಲಿದೆ ಎಂದು ಹೇಳಿದೆ.

Kerala becomes first state to challenge Supreme Court’s SC/ST verdict

ಇಷ್ಟೇ ಅಲ್ಲದೆ ಈ ಆದೇಶ ಈ ಹಿಂದಿನ ನ್ಯಾಯಾಲಯದ ಆದೇಶಕ್ಕೆ ತದ್ವಿರುದ್ಧವಾಗಿದೆ ಎಂದೂ ಅರ್ಜಿಯಲ್ಲಿ ಕೇರಳ ಹೇಳಿದೆ. ಇನ್ನು ಈ ಹಿಂದಿನ ಘಟನಾವಳಿಗಳ ಮೇಲೆ ಬೆಳಕು ಚೆಲ್ಲುವುದಾದರೆ ಈ ಹಿಂದೆ ಅಸ್ಪೃಷ್ಯತೆಯಂಥ ಆಚರಣೆಗಳನ್ನು ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಆಯೋಗ ಈ ಕ್ರಮಕ್ಕೆ ಮುಂದಾಗಿತ್ತು. ಆದರೆ ತೀರ್ಪಿನಿಂದ ಆರೋಪಿಗೆ ಮಧ್ಯಂತರ ಜಾಮೀನು ಸಿಗಲು ಸಾಧ್ಯವಾಗುತ್ತದೆ. ಈ ಸಂದರ್ಭ ಆರೋಪಿಗಳು ಸಂತ್ರಸ್ತರಿಗೆ ಬೆದರಿಕೆ ಹಾಕುವ ಸಂದರ್ಭಗಳು ಉದ್ಭವಿಸುತ್ತವೆ ಎಂದು ಕೇರಳ ವಿವರಿಸಿದೆ.

English summary
The Kerala government became the first state to file a separate review petition challenging the March 20 verdict of the Supreme Court which banned the immediate arrest of a person under the SC/ST act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X