ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ, ಅಹಮದಾಬಾದ್‌ ಟೈಮ್ಸ್‌ನ ನಿಯತಕಾಲಿಕೆ ವಿಶ್ವದ ಅಗ್ರಗಣ್ಯ ಸ್ಥಳಗಳು

|
Google Oneindia Kannada News

ನವದೆಹಲಿ,ಜು.15: ಟೈಮ್ಸ್ ಮ್ಯಾಗಜೀನ್ ತನ್ನ 2022ರ ವಿಶ್ವದ 50 ಅಗ್ರಗಣ್ಯ ಸ್ಥಳಗಳಲ್ಲಿ ಕೇರಳ ಮತ್ತು ಅಹಮದಾಬಾದ್ ಅನ್ನು ಹೆಸರಿಸಿದೆ.

ಕೇರಳವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಅದ್ಭುತವಾದ ಕಡಲತೀರಗಳು ಮತ್ತು ಸೊಂಪಾದ ಹಿನ್ನೀರುಗಳು, ದೇವಾಲಯಗಳು ಮತ್ತು ಅರಮನೆಗಳನ್ನು ಹೊಂದಿದೆ. ಈ ಕಾರಣಕ್ಕಾಗಿ ಇದನ್ನು ದೇವರ ನಾಡು ಎಂದು ಕರೆಯಲಾಗುತ್ತದೆ ಎಂದು ನಿಯತಕಾಲಿಕೆ ಹೇಳಿದೆ.

ಸ್ವಂತ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಮೊದಲ ರಾಜ್ಯ ಕೇರಳ ಸ್ವಂತ ಇಂಟರ್ನೆಟ್ ಸೇವೆಯನ್ನು ಹೊಂದಿರುವ ದೇಶದ ಮೊದಲ ರಾಜ್ಯ ಕೇರಳ

ಟೈಮ್ಸ್‌ ನಿಯತಕಾಲಿಕೆ ತನ್ನ ವಿವರಣೆಯಲ್ಲಿ ಕೇರಳ ರಾಜ್ಯದ ಮೋಟಾರು, ಗೃಹ, ಪ್ರವಾಸೋದ್ಯಮ ಮತ್ತು ಅದರ ಮೊದಲ ಕಾರವಾನ್ ಪಾರ್ಕ್, ಕಾರವಾನ್ ಮೆಡೋಸ್ ಮೇಲೆ ಕೇಂದ್ರೀಕರಿಸಿದೆ.

Kerala Ahmedabad Times magazines top destinations in the world

ಹೌಸ್‌ಬೋಟ್ ಕ್ರೂಸಿಂಗ್‌ನೊಂದಿಗೆ ರಾಜ್ಯದ ಯಶಸ್ಸಿನ ಹಿನ್ನೆಲೆಯಲ್ಲಿ, ಸುಸ್ಥಿರ ಪ್ರವಾಸೋದ್ಯಮದ ಭರವಸೆಯೊಂದಿಗೆ ಕಾರವಾನ್‌ಗಳು ಇದನ್ನು ಅನುಸರಿಸುವ ನಿರೀಕ್ಷೆಯಿದೆ.

1,000ಕ್ಕೂ ಹೆಚ್ಚು ಶಿಬಿರಾರ್ಥಿಗಳು ಈಗಾಗಲೇ ಸಂಚರಿಸಲು ಪ್ರಾರಂಭಿಸಿದ್ದು, ಕೇರಳದ ಕಡಲತೀರಗಳು ಮತ್ತು ಹಸಿರು ತೋಟಗಳನ್ನು ಅನುಭವಿಸಲು ತಾಜಾ ಮತ್ತು ಅನನ್ಯ ಮಾರ್ಗವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತನ್ನ ಪಟ್ಟಿಯಲ್ಲಿ ಟೈಮ್ಸ್‌ ಭಾರತೀಯ ಎರಡನೇ ತಾಣ ಅಹಮದಾಬಾದ್ ಎಂದು ಹೇಳಿದೆ. ಭಾರತದ ಮೊದಲ ಯುನೆಸ್ಕೋ ವಿಶ್ವ ಪರಂಪರೆಯ ನಗರವಾಗಿ ಅಹಮದಾಬಾದ್ ಗುರುತಿಸಿದೆ. ಪ್ರಾಚೀನ ಹೆಗ್ಗುರುತುಗಳು ಮತ್ತು ಸಮಕಾಲೀನ ನಾವೀನ್ಯತೆಗಳೆರಡನ್ನೂ ಹೊಂದಿದೆ ಎಂದು ಹೇಳಿದೆ.

Kerala Ahmedabad Times magazines top destinations in the world

ಅಹಮದಾಬಾದ್‌ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಮೆಕ್ಕಾವಾಗಿದೆ. ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಸಬರಮತಿ ನದಿಯ ದಡದಲ್ಲಿ 36 ಎಕರೆಗಳಲ್ಲಿರುವ ಗಾಂಧಿ ಆಶ್ರಮ ಹಾಗೂ ನವರಾತ್ರಿಯ ಒಂಬತ್ತು ದಿನಗಳ ರೋಮಾಂಚಕ ಆಚರಣೆಯು ವಿಶ್ವದ ಅತಿ ಉದ್ದದ ನೃತ್ಯ ಉತ್ಸವ ಎಂದು ಹೇಳಿದೆ. ಅಲ್ಲದೆ ಇದು ಕಡ್ಡಾಯವಾಗಿ ಪಾಲ್ಗೊಳ್ಳಬೇಕಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದೆ.

ಅಹಮದಾಬಾದ್‌ ಗುಜರಾತ್ ಸೈನ್ಸ್ ಸಿಟಿ ಎಂದು ಉಲ್ಲೇಖಿಸಿದ ಟೈಮ್ಸ್‌, ಸ್ಥಳೀಯ ಸಸ್ಯವರ್ಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮತ್ತು ಚೆಸ್ ಆಡಲು ಮತ್ತು ಯೋಗವನ್ನು ಅಭ್ಯಾಸ ಮಾಡಲು ಹೊಸ ಸ್ಥಳಗಳನ್ನು ಒದಗಿಸಲು ಇದು 20 ಎಕರೆ ಪ್ರಕೃತಿ ಉದ್ಯಾನವನ್ನು ಒಳಗೊಂಡಿದೆ ಎಂದು ಹೇಳಿದೆ.

ರೋಬೋಟಿಕ್ಸ್‌ನಲ್ಲಿ ಹೊಸತನವನ್ನು ವಿವರಿಸುವ ಹೊಸ ಸಂವಾದಾತ್ಮಕ ರೋಬೋಟ್ ಗ್ಯಾಲರಿಯೂ ಇಲ್ಲಿದೆ. ಸೈನ್ಸ್ ಸಿಟಿಯ ಹೊಸ ಅಕ್ವೇರಿಯಂ, ಜಗತ್ತಿನಾದ್ಯಂತ ಇರುವ ಜಲಚರಗಳನ್ನು ಪ್ರದರ್ಶಿಸುತ್ತದೆ. ಇದು ಈಗ ಭಾರತದ ದೊಡ್ಡ ಅಕ್ವೇರಿಯಂ ಆಗಿದೆ ಎಂದು ಟೈಮ್ಸ್‌ ಹೇಳಿದೆ.

English summary
Time magazine has named Kerala and Ahmedabad among its top 50 places in the world for 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X