ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲಂಬೋ ಸ್ಫೋಟಕ್ಕೆ ಕನಿಷ್ಠ 156 ಸಾವು; ಸುಷ್ಮಾ ಸ್ವರಾಜ್ ಟ್ವೀಟ್

|
Google Oneindia Kannada News

ನವದೆಹಲಿ, ಏಪ್ರಿಲ್ 21: ಶ್ರೀಲಂಕಾ ರಾಜಧಾನಿ ಕೊಲಂಬೋ ಸುತ್ತಮುತ್ತ ಹಲವು ಸ್ಫೋಟ ಸಂಭವಿಸಿ, ಕನಿಷ್ಠ 156 ಮಂದಿ ಮೃತಪಟ್ಟು, ಹತ್ತಿರ ಹತ್ತಿರ 300 ಮಂದಿ ಗಾಯಗೊಂಡಿದ್ದು, ಅಲ್ಲಿನ ಬೆಳವಣಿಗೆಗಳನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಕೊಲಂಬೋದಲ್ಲಿ ಇರುವ ಭಾರತೀಯ ಹೈ ಕಮಿಷನರ್ ಜತೆಗೆ ನಿರಂತರವಾಗಿ ನಾನು ಸಂಪರ್ಕದಲ್ಲಿ ಇದ್ದೇನೆ. ಈಗಿನ ಸನ್ನಿವೇಶದ ಬಗ್ಗೆ ಗಮನಿಸುತ್ತಿದ್ದೇನೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಮೂರು ವಿಲಾಸಿ ಹೋಟೆಲ್, ಮೂರು ಚರ್ಚ್ ಗಳನ್ನು ಗುರಿ ಮಾಡಿಕೊಂಡು ದಾಳಿ ನಡೆದಿದೆ. ಕೊಲಂಬೋ ಸುತ್ತಮುತ್ತ ಈಸ್ಟರ್ ಭಾನುವಾರ ಆಚರಣೆಯ ಸಂಭ್ರಮದಲ್ಲಿ ಇದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 155 ಸಾವು, 500 ಮಂದಿಗೆ ಗಾಯಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 155 ಸಾವು, 500 ಮಂದಿಗೆ ಗಾಯ

ಮೊದಲ ಸ್ಫೋಟ ಕೊಲಂಬೋದಲ್ಲಿನ ಸೇಂಟ್ ಆಂಥೋಣಿ ಚರ್ಚ್ ನಿಂದ ವರದಿ ಆಗಿದ್ದು, ಆ ನಂತರ ರಾಜಧಾನಿ ಹೊರಭಾಗದಲ್ಲಿರುವ ನೆಗೊಂಬೋ ಸೇಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಸಂಭವಿಸಿದೆ. ಬಟ್ಟಿಕಲೊವಾದ ಚರ್ಚ್ ಅನ್ನು ಸಹ ಗುರಿ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಎಂಟೂ ಮುಕ್ಕಾಲು ಹೊತ್ತಿದೆ ಸ್ಫೋಟ ಸಂಭವಿಸಿದೆ.

Keeping close watch: Union minister Sushma Swaraj after Sri Lanka serial blasts

ಫೈವ್ ಸ್ಟಾರ್ ಹೋಟೆಲ್ ಗಳಾದ ಶಾಂಗ್ರಿಲಾ, ಕಿಂಗ್ಸ್ ಬರಿ ಮತ್ತು ಸಿನ್ನಮೊನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಮೂರು ಸ್ಫೋಟ ಸಂಭವಿಸಿದೆ. ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ ಅಧಿಕೃತ ನಿವಾಸದ ಬಳಿಯೇ ಈ ಹೋಟೆಲ್ ಇದೆ. ಈ "ಹೇಡಿ ದಾಳಿ"ಯನ್ನು ವಿಕ್ರಮಸಿಂಘೆ ಖಂಡಿಸಿದ್ದು, ನಮ್ಮ ಜನರ ಮೇಲೆ ನಡೆದ ಈ ಹೇಡಿ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಯಾವುದೇ ವದಂತಿಗಳನ್ನು ನಂಬಬೇಡಿ. ಸನ್ನಿವೇಶ ಹತೋಟಿಗೆ ತರಲು ಸರಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದಿದ್ದಾರೆ.

ಕೊಲಂಬೋ, ಬಟ್ಟಿಕಲೋವಾದಲ್ಲಿ ಇಂದು ಸ್ಫೋಟ ಸಂಭವಿಸಿದೆ. ತುಂಬ ಹತ್ತಿರದಿಂದ ಸನ್ನಿವೇಶವನ್ನು ಗಮನಿಸುತ್ತಿದ್ದೇವೆ. ಭಾರತೀಯ ನಾಗರಿಕರು ನೆರವು ಅಥವಾ ಸಹಾಯ ಬೇಕಿದ್ದರೆ +94777903082, +94112422788, +94112422789 ಈ ಸಂಖ್ಯೆಗಳನ್ನು ಹಾಗೂ ಇದರ ಜತೆಗೆ +94777902082, +94772234176 ಇವೆರಡು ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕೊಲಂಬೋದಲ್ಲಿನ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಲಾಗಿದೆ.

ಯಾವ ರೀತಿಯ ಸ್ಫೋಟ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಈ ಸ್ಫೋಟಕ್ಕೆ ಯಾವ ಸಂಘಟನೆಯು ಹೊಣೆ ಹೊತ್ತಿಕೊಂಡಿಲ್ಲ.

English summary
External Affairs Minister Sushma Swaraj has said India is keeping a close watch on the situation in Sri Lanka closely after at least 156 people were killed and nearly 300 were injured in multiple blasts in and around Colombo, Sri Lanka's capital."I am in constant touch with Indian High Commissioner in Colombo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X