ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥ ಯಾತ್ರೆ; ಮೂವರು ಯಾತ್ರಾರ್ಥಿಗಳ ಸಾವು

|
Google Oneindia Kannada News

ಡೆಹರಾಡೂನ್, ಮೇ 26: ಉತ್ತರಖಂಡ ರಾಜ್ಯದ ಕೇದಾರನಾಥ ಕ್ಷೇತ್ರದಲ್ಲಿ ಬುಧವಾರ ಮೂವರು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಈ ವರ್ಷದ ಕೇದಾರನಾಥ ಯಾತ್ರೆಯಲ್ಲಿ ನಿಧನರಾದ ಯಾತ್ರಾರ್ಥಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೇ 6ರಂದು ಪವಿತ್ರ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಯಿತು.
ಹೃದಯಾಘಾತದಿಂದ ಮೂವರು ಯಾತ್ರಾರ್ಥಿಗಳು ಬುಧವಾರ ಕೇದಾರನಾಥದಲ್ಲಿ ಸಾವನ್ನಪ್ಪಿದ್ದಾರೆ.

ಕೋವಿಡ್-19 ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಖಂಡ್ ನ ಚಾರ್‌ಧಾಮ್‌ ಯಾತ್ರೆ 2022 ರ ಮೇ 3ರಂದು ಮತ್ತೆ ಆರಂಭವಾಗಿದೆ. ಈ ವರ್ಷದ ಚಾರ್‌ಧಾಮ್‌ ಯಾತ್ರೆಯಲ್ಲಿ ಇದುವರೆಗೂ 57 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ರುದ್ರಪ್ರಯಾಗ್ ಜಿಲ್ಲಾಡಳಿತ ತಿಳಿಸಿದೆ.

Kedharnath Yathra: 3 more died, toll reaches 37

ಚಾರ್‌ಧಾಮ್‌ ಯಾತ್ರೆಯು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಒಳಗೊಂಡಿದೆ. ಅಕ್ಷಯ ತೃತೀಯದ ಪವಿತ್ರ ದಿನದಂದು ಚಾರ್ಧಾಮ್ ಯಾತ್ರೆಗೆ ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಚಾಲನೆ ನೀಡಿದರು.

ಮೇ 3 ರಂದು ಗಂಗೋತ್ರಿ ಮತ್ತು ಯಮುನೋತ್ರಿಯಿಂದ ಭಕ್ತರು ತಮ್ಮ ಯಾತ್ರೆಯನ್ನು ಆರಂಭಿಸಿದರು. ಬದರಿನಾಥ ದೇವಾಲಯವನ್ನು ಮೇ 8 ರಂದು ತೆರೆಯಲಾಯಿತು.

Kedharnath Yathra: 3 more died, toll reaches 37

ಉತ್ತರಖಂಡ ಸರಕಾರದ ಪ್ರಕಾರ ಒಂದು ದಿನಕ್ಕೆ ಗಂಗೋತ್ರಿಯಲ್ಲಿ 8,000 ಯಾತ್ರಾರ್ಥಿಗಳಿಗೆ ಅವಕಾಶ ನೀಡುತ್ತಿದೆ. ಅದೇ ರೀತಿ ಬದರಿನಾಥದಲ್ಲಿ 16,000 ಭಕ್ತರು, ಕೇದರನಾಥದಲ್ಲಿ 13,000 ಭಕ್ತರು ಹಾಗೂ ಯಮುನೋತ್ರಿಯಲ್ಲಿ ಪ್ರತಿ ದಿನ 5,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳು ಹಿಮಾಲಯದ ಅತ್ಯಂತ ಪೂಜ್ಯ ಹಿಂದೂ ತೀರ್ಥಯಾತ್ರೆ ಕ್ಷೇತ್ರಗಳಾಗಿವೆ.

"ಭಕ್ತರು ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಚಾರ್‌ಧಾಮ್‌ ಯಾತ್ರೆಗೆ ಅಣಿಯಾಗಬೇಕು. ಸ್ಥಿರವಾದ ಆರೋಗ್ಯ ಇಲ್ಲದವರೂ ಯಾತ್ರೆಗೆ ಮುಂದಾಗಬಾರದು'' ಎಂದು ಉತ್ತರಖಂಡ ಸರಕಾರ ಭಕ್ತರಿಗೆ ಮನವಿ ಮಾಡಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಪರಿಸ್ಥಿತಿ ಹಿನ್ನಲೆಯಲ್ಲಿ ಮುಚ್ಚಿದ್ದ ಧಾರ್ಮಿಕ, ಯಾತ್ರಾ ಸ್ಥಳಗಳು ಈ ವರ್ಷ ಪೂರ್ಣ ಪ್ರಮಾಣದಲ್ಲಿ ತೆರಯಲಾಗಿದೆ. ಈ ಹಿನ್ನೆಲೆಯಲ್ಲಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದೆ.

English summary
Three more people have died in Kedarnath Dham, bringing the cumulative death toll to 37 since the opening of the holy shrine’s doors for devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X