ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇದಾರನಾಥ ದೇವಾಲಯದ ನಿರ್ಮಾತೃ ಯಾರು ಎನ್ನುವ ಪ್ರಶ್ನೆಯ ಮಧ್ಯೆ ನಿರ್ಮಾಣದ ಹಲವು ಅಚ್ಚರಿಗಳು

|
Google Oneindia Kannada News

ಕೇದಾರನಾಥ ದೇವಾಲಯ ಯಾವಾಗ ನಿರ್ಮಾಣವಾಯಿತು ಎನ್ನುವ ವಿಚಾರದಲ್ಲಿ ಹಲವು ಚರ್ಚೆಗಳು ಇಂದಿಗೂ ಪ್ರಸ್ತುತ. ಪಾಂಡವರಿಂದ ಹಿಡಿದು ಆದಿ ಶಂಕರಾಚಾರ್ಯರವರೆಗೆ ದೇವಾಲಯ ನಿರ್ಮಾಣದ ವಿಚಾರದಲ್ಲಿ ಚರ್ಚೆಗಳು ಕೇಳಿ ಬರುತ್ತಿವೆ. ಅದೇನೇ ಇರಲಿ.. ಇಂದಿನ ಟೆಕ್ನಾಲಜಿಯು ಕೇದಾರನಾಥ ದೇವಾಲಯವನ್ನು ಪ್ರಾಯಶಃ 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ.

ಅದನ್ನೇ ಸರಿಯಾದ ತರ್ಕ ಎಂದು ನಂಬುವುದಾದರೆ, ಈ ದೇವಾಲಯವು ಕನಿಷ್ಠ 1,200 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಕೇದಾರನಾಥ ಇರುವ ಪ್ರದೇಶ 21ನೇ ಶತಮಾನದಲ್ಲಿ ಅತ್ಯಂತ ಪ್ರತಿಕೂಲವಾದ ವಾತಾವರಣವಿರುವ ಜಾಗವಾಗಿದೆ. ಒಂದು ಕಡೆ 22,000 ಅಡಿ ಎತ್ತರದ ಕೇದಾರನಾಥ ಬೆಟ್ಟ, ಇನ್ನೊಂದು ಬದಿಯಲ್ಲಿ 21,600 ಅಡಿ ಎತ್ತರದ ಕರಚಕುಂಡ್ ಮತ್ತು ಮೂರನೇ ಭಾಗದಲ್ಲಿ 22,700 ಅಡಿ ಎತ್ತರದ ಭರತಕುಂಡ್.

ಈ ಮೂರು ಪರ್ವತಗಳ ಮೂಲಕ ಹರಿಯುವ ಐದು ನದಿಗಳೆಂದರೆ ಮಂದಾಕಿನಿ, ಮಧುಗಂಗಾ, ಚಿರಗಂಗಾ, ಸರಸ್ವತಿ ಮತ್ತು ಸ್ವರಂದಾರಿ. ಇವುಗಳಲ್ಲಿ ಕೆಲವನ್ನು ಈ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಚಳಿಯ ದಿನಗಳಲ್ಲಿ ಭಾರೀ ಪ್ರಮಾಣದ ಹಿಮ ಮತ್ತು ಮಳೆಗಾಲದಲ್ಲಿ ಅತ್ಯಂತ ವೇಗದಲ್ಲಿ ನೀರು ಹರಿಯುವ ಸ್ಥಳ ಇದಾಗಿದೆ. ಹಾಗಾದರೆ, ಇಂತಹ ಪ್ರತಿಕೂಲ ಪ್ರದೇಶದಲ್ಲಿ ಸುಮಾರು 1,000 ವರ್ಷಗಳ ಹಿಂದೆ ದೇವಾಲಯವನ್ನು ಹೇಗೆ ನಿರ್ಮಿಸಲು ಸಾಧ್ಯವಾಯಿತು?

ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?

ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಜಿಯಾಲಜಿ, ಡೆಹ್ರಾಡೂನ್, ಕೇದಾರನಾಥ ದೇವಾಲಯದ ಬಂಡೆಗಳ ಮೇಲೆ ಲಿಗ್ನೋಮ್ಯಾಟಿಕ್ ಡೇಟಿಂಗ್ ಪರೀಕ್ಷೆಯನ್ನು ನಡೆಸಿತ್ತು. ಕಲ್ಲುಗಳ ಬಾಳಿಕೆಯನ್ನು ಗುರುತಿಸಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. 14ನೇ ಶತಮಾನದಿಂದ 17ನೇ ಶತಮಾನದ ಮಧ್ಯಭಾಗದವರೆಗೆ ದೇವಾಲಯವು ಸಂಪೂರ್ಣವಾಗಿ ಮಂಜುಗಡ್ಡೆಯಲ್ಲಿ ಹೂತುಹೋಗಿತ್ತು ಎಂದು ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

 2013ರಲ್ಲಿ ಕೇದಾರನಾಥಕ್ಕೆ ಅಪ್ಪಳಿಸಿದ ಭೀಕರ ಪ್ರವಾಹ

2013ರಲ್ಲಿ ಕೇದಾರನಾಥಕ್ಕೆ ಅಪ್ಪಳಿಸಿದ ಭೀಕರ ಪ್ರವಾಹ

ಆದರೂ, ದೇವಾಲಯಕ್ಕೆ ಯಾವುದೇ ಹಾನಿಯಾಗಿರಲಿಲ್ಲ. 2013ರಲ್ಲಿ ಕೇದಾರನಾಥಕ್ಕೆ ಅಪ್ಪಳಿಸಿದ ಭೀಕರ ಪ್ರವಾಹದಿಂದ ಸರಾಸರಿಗಿಂತ ಶೇ.375ರಷ್ಟು ಹೆಚ್ಚು ಮಳೆಯಾಗಿತ್ತು. ಇದರಿಂದ ಸಾವಿರಾರು ಜನರು ಮೃತ ಪಟ್ಟಿದ್ದರು ಮತ್ತು 4,200 ಹಳ್ಳಿಗಳೂ ನಾಶವಾಗಿದ್ದವು. ಆದರೆ ಇಂತಹ ಭೀಕರ ಪ್ರವಾಹದಲ್ಲೂ ಕೇದಾರನಾಥ ದೇವಾಲಯದ ಸಂಪೂರ್ಣ ರಚನೆಗೆ ಕಿಂಚಿತ್ತೂ ಧಕ್ಕೆಯಾಗಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. (ಚಿತ್ರ: ಪಿಟಿಐ)

ಕೇದಾರನಾಥದಲ್ಲಿ ಉದ್ಘಾಟನೆಗೊಂಡ ಶಂಕರಾಚಾರ್ಯರ ಪುತ್ಥಳಿ ಕೆತ್ತಿದ್ದು ಮೈಸೂರಿನ ಶಿಲ್ಪಿಕೇದಾರನಾಥದಲ್ಲಿ ಉದ್ಘಾಟನೆಗೊಂಡ ಶಂಕರಾಚಾರ್ಯರ ಪುತ್ಥಳಿ ಕೆತ್ತಿದ್ದು ಮೈಸೂರಿನ ಶಿಲ್ಪಿ

 ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ನಡೆಸಿದ್ದ ಆಡಿಟ್

ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ನಡೆಸಿದ್ದ ಆಡಿಟ್

ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ನಡೆಸಿದ್ದ ಆಡಿಟ್ ಪ್ರಕಾರ, ಭೀಕರ ಪ್ರವಾಹದ ನಂತರವೂ ದೇವಾಲಯ ಶೇ. 99 ಪ್ರತಿಶತದಷ್ಟು ಸುರಕ್ಷಿತವಾಗಿದೆ. 2013ರ ಪ್ರವಾಹದ ಸಮಯದಲ್ಲಿ ನಿರ್ಮಾಣಕ್ಕೆ ಎಷ್ಟು ಹಾನಿಯಾಗಿದೆ ಮತ್ತು ಅದರ ಪ್ರಸ್ತುತ ಸ್ಥಿತಿಯನ್ನು ಅಧ್ಯಯನ ಮಾಡಲು ಐಐಟಿ - ಮದರಾಸ್, NDT ಪರೀಕ್ಷೆ ನಡೆಸಿತ್ತು. ದೇವಾಲಯವು ಸಂಪೂರ್ಣವಾಗಿ ಸುರಕ್ಷಿತ ಮತ್ತು ಬಲಿಷ್ಠವಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿತ್ತು. (ಚಿತ್ರ: ಪಿಟಿಐ)

 ಕೇದಾರನಾಥ ದೇವಾಲಯವನ್ನು ಉತ್ತರ-ದಕ್ಷಿಣ ಎಂದು ನಿರ್ಮಿಸಲಾಗಿದೆ

ಕೇದಾರನಾಥ ದೇವಾಲಯವನ್ನು ಉತ್ತರ-ದಕ್ಷಿಣ ಎಂದು ನಿರ್ಮಿಸಲಾಗಿದೆ

ಈ ದೇವಾಲಯವನ್ನು ನಿರ್ಮಿಸಿದ ರೀತಿಯು ಇದು ಬಲಿಷ್ಠವಾಗಿರಲು ಕಾರಣ ಎಂದು ನಂಬಲಾಗಿದೆ. ದೇವಾಲಯ ನಿರ್ಮಾಣಕ್ಕೆ ಆಯ್ಕೆ ಮಾಡಲಾದ ಸ್ಥಳ, ನಿರ್ಮಾಣಕ್ಕೆ ಬಳಸಲಾದ ಕಲ್ಲು ಮತ್ತು ರಚನೆಯ ವಿಧಾನವೇ ಈ ದೇವಾಲಯವು ಈ ಪ್ರವಾಹದಲ್ಲಿ ಉಳಿಯಲು ಕಾರಣವೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಕೇದಾರನಾಥ ದೇವಾಲಯವನ್ನು ಉತ್ತರ-ದಕ್ಷಿಣ ಎಂದು ನಿರ್ಮಿಸಲಾಗಿದೆ. ಭಾರತದಲ್ಲಿನ ಬಹುತೇಕ ದೇವಾಲಯಗಳು ಪೂರ್ವ-ಪಶ್ಚಿಮ ರೀತಿಯಲ್ಲಿ ನಿರ್ಮಾಣಗೊಂಡಿದೆ. (ಚಿತ್ರ: ಪಿಟಿಐ)

ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣ: ಟಿಕೆಟ್‌ ಬುಕ್ ಮಾಡುವುದು ಹೇಗೆ?ಹೆಲಿಕಾಪ್ಟರ್ ಮೂಲಕ ಕೇದಾರನಾಥಕ್ಕೆ ಪ್ರಯಾಣ: ಟಿಕೆಟ್‌ ಬುಕ್ ಮಾಡುವುದು ಹೇಗೆ?

 ದೇವಾಲಯ ನಿರ್ಮಾಣಕ್ಕೆ ಬಳಸಲಾದ ಕಲ್ಲು ತುಂಬಾ ಕಠಿಣ

ದೇವಾಲಯ ನಿರ್ಮಾಣಕ್ಕೆ ಬಳಸಲಾದ ಕಲ್ಲು ತುಂಬಾ ಕಠಿಣ

ತಜ್ಞರ ಪ್ರಕಾರ, ದೇವಾಲಯವು ಪೂರ್ವ-ಪಶ್ಚಿಮ ಆಗಿದ್ದರೆ, ಅದು ಈಗಾಗಲೇ ನಾಶವಾಗುತ್ತಿತ್ತು. ಅಥವಾ 2013ರ ಪ್ರವಾಹದಲ್ಲಾದರೂ ನಾಶವಾಗುತ್ತಿತ್ತು. ಹಾಗಾಗಿ, ಉತ್ತರ-ದಕ್ಷಿಣ ನಿರ್ಮಾಣದಿಂದಾಗಿ ಕೇದಾರನಾಥ ದೇವಾಲಯ ಉಳಿದುಕೊಂಡಿದೆ. ಇನ್ನೊಂದು ವಿಷಯವೆಂದರೆ ದೇವಾಲಯ ನಿರ್ಮಾಣಕ್ಕೆ ಬಳಸಲಾದ ಕಲ್ಲು ತುಂಬಾ ಕಠಿಣ ಮತ್ತು ಬಾಳಿಕೆ ಬರುವಂತಹದ್ದಾಗಿದೆ. (ಚಿತ್ರ: ಪಿಟಿಐ)

 400 ವರ್ಷಗಳ ನಂತರ ಮಂಜುಗಡ್ಡೆಯ ಅಡಿಯಲ್ಲಿದ್ದರೂ ಏನೂ ವ್ಯತ್ಯಾಸವಿಲ್ಲ

400 ವರ್ಷಗಳ ನಂತರ ಮಂಜುಗಡ್ಡೆಯ ಅಡಿಯಲ್ಲಿದ್ದರೂ ಏನೂ ವ್ಯತ್ಯಾಸವಿಲ್ಲ

ವಿಶೇಷವೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಬಳಸಲಾದ ಕಲ್ಲು ಅಲ್ಲಿ ಲಭ್ಯವಿರಲಿಲ್ಲ. ಆ ಕಾಲದಲ್ಲಿ ಅಷ್ಟು ದೊಡ್ಡ ಕಲ್ಲನ್ನು ಒಯ್ಯಲು ಅಂತಹ ಉಪಕರಣಗಳೂ ಇರಲಿಲ್ಲ. ಈ ಕಲ್ಲಿನ ವೈಶಿಷ್ಟ್ಯವೆಂದರೆ 400 ವರ್ಷಗಳ ನಂತರ ಮಂಜುಗಡ್ಡೆಯ ಅಡಿಯಲ್ಲಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ. ಹಾಗಾಗಿ, ದೇವಾಲಯವು ಪ್ರಕೃತಿಯ ವೈಪ್ಯರೀತ್ಯದದ ನಡುವೆಯೂ ತನ್ನ ಶಕ್ತಿಯನ್ನು ಉಳಿಸಿಕೊಂಡಿದೆ. ದೇವಾಲಯದಲ್ಲಿರುವ ಈ ಬಲವಾದ ಕಲ್ಲುಗಳನ್ನು ಯಾವುದೇ ಸಿಮೆಂಟ್ ಬಳಸದೆ "ಆಶ್ಲರ್" ರೀತಿಯಲ್ಲಿ ಒಟ್ಟಿಗೆ ಅಂಟಿಸಲಾಗಿದೆ. (ಚಿತ್ರ: ಪಿಟಿಐ)

 ಸಂಸ್ಕೃತಿ ಮತ್ತು ಶಕ್ತಿಯನ್ನು ಸಂರಕ್ಷಿಸುವ ದೇವಾಲಯ

ಸಂಸ್ಕೃತಿ ಮತ್ತು ಶಕ್ತಿಯನ್ನು ಸಂರಕ್ಷಿಸುವ ದೇವಾಲಯ

1,200 ವರ್ಷಗಳ ಕಾಲ ತನ್ನ ಸಂಸ್ಕೃತಿ ಮತ್ತು ಶಕ್ತಿಯನ್ನು ಸಂರಕ್ಷಿಸುವ ದೇವಾಲಯದ ನಿರ್ಮಾಣಕ್ಕಾಗಿ ಆಯ್ದುಕೊಂಡ ಜಾಗ, ತಂತ್ರಜ್ಣಾನ, ಬಳಸಲಾದ ಸಾಮಗ್ರಿ ಜೊತೆಗೆ, ಪ್ರಕೃತಿಯನ್ನು ಸಹ ಎಚ್ಚರಿಕೆಯಿಂದ ಗಮನಿಸಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಟೈಟಾನಿಕ್ ಮುಳುಗಿದ ನಂತರ, ಪಾಶ್ಚಿಮಾತ್ಯರು NDT ಪರೀಕ್ಷೆ, ತಾಪಮಾನದ ಬದಲಾವಣೆಯನ್ನು ಹೇಗೆ ಪರೀಕ್ಷಿಸಬಹುದು ಎಂಬುದನ್ನು ಅರಿತುಕೊಂಡರು. ಆದರೆ, ಇದನ್ನು ಆ ಕಾಲದಲ್ಲಿಯೇ ನಮ್ಮವರು ಗಮನದಲ್ಲಿ ಇಟ್ಟುಕೊಂಡಿದ್ದರು ಎನ್ನುವುದಕ್ಕೆ ಕೇದಾರನಾಥ ದೇವಾಲಯ ಸಾಕ್ಷಿ.

ಇಂದು ಎಲ್ಲಾ ಪ್ರವಾಹ, ಹಿಮಪಾತಗಳ ನಂತರವೂ, ಅದೇ ಭವ್ಯತೆಯಿಂದ 12 ಜ್ಯೋತಿರ್ಲಿಂಗಗಳಲ್ಲಿ ಅತ್ಯುನ್ನತ ಗೌರವವನ್ನು ಪಡೆಯುವ ಕೇದಾರನಾಥ ದೇವಾಲಯ ನಿರ್ಮಿಸಿದ ವಿಜ್ಞಾನಿಗಳ ಮುಂದಾಲೋಚನೆಗೆ ತಲೆಬಾಗಬೇಕಾಗುತ್ತದೆ. ವೈದಿಕ ಹಿಂದೂ ಧರ್ಮ ಮತ್ತು ಸಂಸ್ಕೃತಿ ಎಷ್ಟು ಮುಂದುವರಿದಿತ್ತು ಎಂಬುದಕ್ಕೆ ಇದೊಂದು ಉದಾಹರಣೆಯಾಗಬಲ್ಲದು. (ರಾಧಾಕೃಷ್ಣ ನೆರೂರು), (ಚಿತ್ರ: ಪಿಟಿಐ)

English summary
Kedaranath Temple In Uttarakhand And Its Unsolved Codes. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X