ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀದಿ-ಕೆಸಿಆರ್ ಭೇಟಿ: ಇದು ತೃತೀಯ ರಂಗದ ಆರಂಭ ಎಂದ ತೆಲಂಗಾಣ ಸಿಎಂ

By Sachhidananda Acharya
|
Google Oneindia Kannada News

ಕೊಲ್ಕತ್ತಾ, ಮಾರ್ಚ್ 20: ಮಹತ್ವದ ಬೆಳವಣಿಗೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ. ಸೋಮವಾರ ಕೊಲ್ಕೊತ್ತಾಗೆ ತೆರಳಿ ಅವರು ದೀದಿಯನ್ನು ಭೇಟಿಯಾಗಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಭೇಟಿ ವೇಳೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಎದುರಿಸಲು ತೃತೀಯ ರಂಗ ರಚನೆ ಸಂಬಂಧ ಚರ್ಚೆ ನಡೆಸಿದ್ದಾರೆ.

ತೃತೀಯ ರಂಗಕ್ಕೆ ಚಾಲನೆ ನೀಡಲು ಕೆಸಿಆರ್- ಮಮತಾ ಭೇಟಿತೃತೀಯ ರಂಗಕ್ಕೆ ಚಾಲನೆ ನೀಡಲು ಕೆಸಿಆರ್- ಮಮತಾ ಭೇಟಿ

ಮಮತಾ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾವ್, ದೇಶಕ್ಕೆ ಪರ್ಯಾಯ ಪರಿಕಲ್ಪನೆಯ ಅಗತ್ಯವಿದೆ ಮತ್ತು ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದಿದ್ದಾರೆ.

KCR meets Mamata, says this is beginning of federal front

"ದೇಶಕ್ಕೆ ಒಳ್ಳೆಯದು ಬೇಕಾಗಿದೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೆ ಏನು ಬದಲಾವಣೆಯಾಗುತ್ತದೆ? ಯಾವುದಾದರೂ ಪವಾಡ ನಡೆಯುತ್ತದೆಯೇ? ನಾವು ಸಮಾನ ಸಿದ್ಧಾಂತ ಹೊಂದಿರುವ ಪಕ್ಷಗಳ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ," ಎಂದರು.

ಮತ್ತೆ ತೃತೀಯ ರಂಗದ ಚರ್ಚೆ, ಈ ಬಾರಿ ಚಂದ್ರಶೇಖರ್ ರಾವ್ ದಾಳಮತ್ತೆ ತೃತೀಯ ರಂಗದ ಚರ್ಚೆ, ಈ ಬಾರಿ ಚಂದ್ರಶೇಖರ್ ರಾವ್ ದಾಳ

ಇದು ತೃತೀಯ ರಂಗದ ಆರಂಭ ಎಂದು ಬಣ್ಣಿಸಿದ ಅವರು, ತೃತೀಯ ರಂಗ ಜನರ ರಂಗವಾಗಿರಲಿದೆ ಎಂದಿದ್ದಾರೆ.

ಇತ್ತೀಚೆಗೆ ಕೆಸಿಆರ್ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವನ್ನು ರಚಿಸಲಾಗುವುದು ಎಂದಿದ್ದರು. ಇದೀಗ ಈ ಸಂಬಂಧ ಪರ್ಯಾಯ ಶಕ್ತಿ ಒಟ್ಟುಗೂಡಿಸಲು ಅವರು ಅಖಾಡಕ್ಕೆ ಧುಮುಕಿದ್ದಾರೆ.

English summary
Telangana Chief Minister K Chandrashekhar Rao met his West Bengal counterpart Mamata Banerjee here on Monday and discussed the formation of a federal front to take on the BJP and the Congress in the 2019 general election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X