ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತುವಾ ಅತ್ಯಾಚಾರ-ಕೊಲೆಯ ಸುತ್ತ ಹುಟ್ಟುವ ವಿಲಕ್ಷಣ ಅನುಮಾನ!

|
Google Oneindia Kannada News

ಕತುವಾ, ಏಪ್ರಿಲ್ 17: 'ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಕಿಲರೊಬ್ಬರು ಪ್ರತ್ಯೇಕತಾವಾದಿಗಳ ಪರವಾದ ಎನ್ ಜಿಒವೊಂದನ್ನು ನಡೆಸುತ್ತಿದ್ದಾರಂತೆ ಹೌದೇ?"

ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ ಕಾಮುಕರಿಗೆ ಬಲಿಯಾದ ಮುಗ್ಧ ಬಾಲಕಿ ಪರ ಒಗ್ಗೂಡಿದ ಧ್ವನಿ

"ಕತುವಾ ಸಂತ್ರಸ್ಥೆಯನ್ನು ಹಲವು ದಿನಗಳ ಕಾಲ ದೇವಾಲಯವೊಂದರಲ್ಲಿ ಕೂಡಿಟ್ಟು ಅತ್ಯಾಚಾರ ಎಸಗಲಾಗಿತ್ತು ಎನ್ನಲಾಗಿದೆ. ಆ ದೇವಾಲಯಕ್ಕೆ ಮೂರು ಬಾಗಿಲುಗಳಿವೆ. ಸಾರ್ವಜನಿಕರು ದಿನಕ್ಕೆ ಎರಡುಬಾರಿ ಈ ದೇವಾಲಯಕ್ಕೆ ಬರುತ್ತಾರೆ. ಆದರೆ ಆ ಹೆಣ್ಣು ಮಗಳು ಯಾರೊಬ್ಬರ ಕಣ್ಣಿಗೂ ಬೀಳದಿದ್ದುದು ಆಶ್ಚರ್ಯ!"

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಎಂಬಿತ್ಯಾದಿ ಟ್ವೀಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತ, ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುತ್ತ ಹೊಸದೊಂದು ವಿಲಕ್ಷಣ ಅನುಮಾನದ ಹುತ್ತವನ್ನು ಬೆಳೆಸುತ್ತಿದೆ! ಟ್ವಿಟ್ಟರ್ ನಲ್ಲಿ CBI4KathuaCase ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಕತುವಾ ಘಟನೆಯ ಸುತ್ತ ಹೊಸದೇ ವಿಚಾರವನ್ನು ಹುಟ್ಟುಹಾಕುತ್ತಿದೆ.

ಸಮವಸ್ತ್ರವೇ ನನ್ನ ಧರ್ಮ ಎನ್ನುತ್ತಾರೆ ಈ ಅಧಿಕಾರಿಣಿಸಮವಸ್ತ್ರವೇ ನನ್ನ ಧರ್ಮ ಎನ್ನುತ್ತಾರೆ ಈ ಅಧಿಕಾರಿಣಿ

ಆದರೆ ಪುಟ್ಟ ಮಗುವೊಂದು ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದಂತೂ ಅರಗಿಸಿಕೊಳ್ಳಲಾಗದ ವಾಸ್ತವ.

ಏನಿದು ಘಟನೆ?

ಏನಿದು ಘಟನೆ?

ಜನವರಿ ತಿಂಗಳಿನಲ್ಲಿ ಕತುವಾದ ಎಂಟು ವರ್ಷದ ಮಗುವನ್ನು ಅಪಹರಿಸಿ, ಅದಕ್ಕೆ ಮತ್ತು ರುವ ಔಷಧ ನೀಡಿ ಹಲವು ದಿನಗಳ ಕಾಲ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯನ್ನು ಕೆಲ ದಿನಗಳ ಕಾಲ ಹತ್ತಿರದ ದೇವಾಲಯವೊಂದರಲ್ಲಿ ಇರಿಸಿಕೊಳ್ಳಲಾಗಿತ್ತು ಎಂಬುದೂ ಆರೋಪ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ 90 ದಿನಗಳೊಳಗೆ ಇತ್ಯರ್ಥಗೊಳಿಸಬೇಕೆಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆದೇಶಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂಬ ಕೂಗೂ ಕೇಳಿಬರುತ್ತಿದೆ.

ಸತ್ಯವನ್ನು ಬೆಂಬಲಿಸಿ

ಯಾವುದೇ ಹಿಂದು ಅಥವಾ ಮುಸ್ಲಿಂ ಪರವಾಗಿ ನಿಲ್ಲಬೇಡಿ. ಕಾಶ್ಮೀರ ಅಥವಾ ಜಮ್ಮುವಿಗೆ ಬೆಂಬಲಿಸಬೇಡಿ. ಕೇವಲ ಸತ್ಯವನ್ನು ಬೆಂಬಲಿಸಿ. ಸುಳ್ಳನ್ನು ತೋರಿಸಿ, ಸತ್ಯವನ್ನು ಅರ್ಥಮಾಡಿಸುವುದಕ್ಕಾಗಿ ಈ ಪ್ರಕರಣವನ್ನು ಸಿಬಿಐ ಗೆ ವಹಿಸಿ ಎಂದಿದ್ದಾರೆ ವಿಕಾಸ್ ಪಾಂಡೆ.

ಜೀರ್ಣಿಸಿಕೊಳ್ಳುವುದು ಕಷ್ಟ!

ಸಂತ್ರಸ್ಥ ಬಾಲಕಿಯನ್ನು ಕೂಡಿಡಲಾಗಿತ್ತು ಎಂಬ ದೇವಾಲಯಕ್ಕೆ ಮೂರು ಬಾಗಿಲುಗಳಿವೆ. ದಿನಕ್ಕೆ ಎರಡು ಬಾರಿ ಸಾರ್ವಜನಿಕರು ಈ ದೇವಾಲಯಕ್ಕೆ ಬೇಟಿ ನೀಡುತ್ತಾರೆ. ಆದರೂ ಯಾರೊಬ್ಬರಿಗೂ ಈ ಬಾಲಕಿ ಕಾಣುವುದುದಿಲ್ಲ ಎಂದರೇನು? ಈ ವಿಷಯವನ್ನು ಜೀರ್ಣಿಸಿಕೊಳ್ಳುವುದು ಕಷ್ಟ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಕೋಮಲ ಲೊಚಾನ್ ಮಹಾಂತಾ ಎಂಬುವವರು.

ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿರುವುದೇಕೆ?

ಕತುವಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ತಾಲಿಬ್ ಹುಸೇನ್ ಎಂಬ ವಕೀಲ ಪ್ರತ್ಯೇಕತಾವಾದಿಗಳ ಪರವಾಗಿ ಎನ್ ಜಿಒ ವೊಂದನ್ನು ನಡೆಸುತ್ತಿದ್ದಾರಂತೆ ನಿಜವೇ? ಆತ ಸಂತ್ರಸ್ಥೆಯ ಕುಟುಂಬವನ್ನು ಏಕೆ ಕ್ರೈ ಬ್ರಾಂಚ್ ತನಿಖೆಗೆ ಒತ್ತಾಯಿಸುತ್ತಿದ್ದಾರೆ? ಸಿಬಿಐ ತನಿಖೆಗೇಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ನೀತು ಗಾರ್ಗ್ ಎಂಬುವವರು ಪ್ರಶ್ನಿಸಿದ್ದಾರೆ.

ಕುದುರೆಗಳು ಆಡುಗಳಾಗಿದ್ದು ಹೇಗೆ..?!

ಆರೋಪಪಟ್ಟಿ ಮೊದಲ ಪುಟದಲ್ಲಿ ಜಗದೀಶ್ ರಾಜ್ ಎಂಬುವವರು ತಮ್ಮ ಆಡುಗಳನ್ನು ಹುಡುಕಲು ಹೋದಾಗ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಎರಡನೇ ಪುಟದಲ್ಲಿ ಕುದುರೆಗಳನ್ನು ಹುಡುಕುವಾಗ ಪತ್ತೆಯಾಗಿದೆ ಎನ್ನುತ್ತಾರೆ. ಹಾಗಾದರೆ ತನಿಖೆಯ ಸಮಯದಲ್ಲಿ ಕುದುರೆಗಳು ಆಡುಗಳಾಗಿ ಬದಲಾಗಿಬಿಟ್ಟವೇ ಎಂದು ಪ್ರಶ್ನಿಸಿದ್ದಾರೆ ಅಭಿಶೇಕ್ ಕುಲಶ್ರೇಷ್ಠ.

ಪರಿ ಚಾವ್ಲಾ?

ಮೆಹಬೂಬಾ ಮುಫ್ತಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಮೀನಾಮೇಷ ಎಣಿಸುತ್ತಿರುವುದೇಕೆ? ಶೋಪಿಯಾನ್ ಪ್ರಕರಣದಲ್ಲಿ ಅವರೇ ಖುದ್ದಾಗಿ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದ್ದರು. ಆದರೆ ಈ ಪ್ರಕರಣದಲ್ಲಿ ಅವರನ್ನು ತಡೆಯುತ್ತಿರುವ ಶಕ್ತಿ ಯಾವುದು? ಎಂದಿದ್ದಾರೆ ಪರಿ ಚಾವ್ಲಾ.

ಕೋಮು ಗಲಭೆ, ರಾಜಕೀಯ ಸ್ವಾರ್ಥ

ಕೋಮು ಗಲಭೆ, ರಾಜಕೀಯ ಸ್ವಾರ್ಥ

ಮುಸ್ಲಿಂ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಬಂಧಿತ ಆರೋಪಿಗಳು ಹಿಂದುಗಳಾಗಿರುವುದು ಪ್ರಕರಣಕ್ಕೆ ಕೋಮು ಬಣ್ಣವನ್ನು ಲೇಪಿಸಿದೆ. ಆದರೆ ಎಲ್ಲ ಸಿದ್ಧಾಂತಗಳನ್ನೂ ಮೀರಿ ಮಾನವೀಯತೆಯಿಂದ ಯೋಚಿಸಿದರೆ, ಒಬ್ಬ ಮುಗ್ಧ ಹೆಣ್ಣು ಮಗಳು ತಾನು ಮಾಡದ ತಪ್ಪಿಗೆ ಚಿತ್ರಹಿಂಸೆ ಅನುಭವಿಸಿ ಸತ್ತಿದ್ದಾಳೆ ಎಂಬುದಷ್ಟೇ ಸತ್ಯ! ಇಡೀ ದೇಶದಾದ್ಯಂತ ಕತುವಾ ಪ್ರಕರಣದ ವಿರುದ್ಧ ಎದ್ದಿರುವ ಕೂಗು ರಾಜಕೀಯ ಸ್ವಾರ್ಥಕ್ಕೆ, ಕೋಮುವಾದದ ಅನರ್ಥ ಸಿದ್ಧಾಂತಕ್ಕೆ ಬಲಿಯಾಗದೆ, ಜಾತಿ, ಮತ ಎಲ್ಲವನ್ನೂ ಮೀರಿ ಒಬ್ಬ ಅಸಾಹಯಕ ಹೆಣ್ಣುಮಗಳ ನೋವನ್ನಷ್ಟೇ ಅರಿಯುವಂತಾಗಲಿ ಎಂಬುದು ನಮ್ಮ ಕಳಕಳಿ.

English summary
An eight-year-old girl belonging to a nomadic Muslim tribe in Kathua district was allegedly abducted, drugged, gangraped, tortured and killed in January. Among the accused in the case are police officers and a retired government official. Now the case turns communal dimension. Here are twitter statements demanding CBI enquiry in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X