ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನದೇ ರಾಜ್ಯದವರನ್ನು ’ಕಳ್ಳ’ ರೆಂದ ಕೇಂದ್ರ ಸಚಿವ

|
Google Oneindia Kannada News

ಶ್ರೀನಗರ, ಮಾ 4: ಈ ರಾಜ್ಯದ ಜನತೆ ಇವರನ್ನು ಮತ್ತು ಇವರ ಪಕ್ಷದವರನ್ನು ಗೆಲ್ಲಿಸಿ ಅಧಿಕಾರದ ರುಚಿ ತೋರಿಸಿ ಕೊಟ್ಟಿದ್ದರು. ಆದರೆ, ತಮ್ಮನ್ನು ಆರಿಸಿದ ಜನತೆಯನ್ನೇ ಕಳ್ಳರೆಂದು ಸಂಭೋದಿಸುವ ಮೂಲಕ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ಹೊಸ ವಿವಾದ ಮೈಮೇಲೆ ಎಳೆದು ಕೊಂಡಿದ್ದಾರೆ.

ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ, ಕಾಶ್ಮೀರಿಗಳನ್ನು ನಂಬಲು ಸಾಧ್ಯವಿಲ್ಲ. ಅವರು ಮಹಾನ್ ಕಳ್ಳ (ಮಹಾನ್ ಚೋರ್ಸ್) ರೆಂದು ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಸೋಮವಾರ ( ಮಾ 3) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ಫಾರೂಕ್ ಈ ಹೇಳಿಕೆ ನೀಡಿದ್ದರು. ತನ್ನ ಹೇಳಿಕೆ ವಿವಾದ ಹುಟ್ಟು ಹಾಕುತ್ತಿದೆ ಎಂದರಿತ ಕೇಂದ್ರ ಸಚಿವರು ತಕ್ಷಣವೇ ಮಾತು ಬದಲಿಸಿ 'ಮಾಧ್ಯಮದವರು ತನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡಿದ್ದಾರೆ' ಎನ್ನುವ ಮಾಮೂಲಿ ಡೈಲಾಗ್ ಹೊಡಿದಿದ್ದಾರೆ.

ಫಾರೂಕ್ ಹೇಳಿಕೆ ವಿರುದ್ದ ಪಿಡಿಪಿ ಪಕ್ಷವು ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ ಗದ್ದಲ ಎಬ್ಬಿಸಿ, ಫಾರೂಕ್ ರಾಜೀನಾಮೆ ಮತ್ತು ಕಾಶ್ಮೀರಿಗಳ ಕ್ಷಮೆಯಾಚಿಸ ಬೇಕೆಂದು ಪಟ್ಟು ಹಿಡಿದಿದೆ.

ಫಾರೂಕ್ ಈ ರೀತಿಯ ವಿವಾದಕಾರಿ ಹೊಸದೇನಲ್ಲ..

ಮಹಿಳೆಯರನ್ನು ನೋಡೋದೇ ಭಯ

ಮಹಿಳೆಯರನ್ನು ನೋಡೋದೇ ಭಯ

ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಮಹಿಳೆಯರನ್ನು ನೋಡೋದು, ಮಾತಾಡಿಸುವುದೆಂದರೆ ಭಯ ಪಡುವಂತಹ ಪರಿಸ್ಥಿತಿ ಬಂದಿದೆ. ನನಗೂ ಮಹಿಳೆಯರ ಬಳಿ ಮಾತನಾಡಲು ಭಯವಾಗುತ್ತಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದರು.

ಮಹಿಳಾ ಸೆಕ್ರೆಟರಿ ಬೇಡ

ಮಹಿಳಾ ಸೆಕ್ರೆಟರಿ ಬೇಡ

ನನಗೆ ಮತ್ತು ನನ್ನ ಕಚೇರಿಗೆ ಮಹಿಳಾ ಸೆಕ್ರೆಟರಿ ಬೇಡ. ನಾನು ಮಹಿಳೆಯರನ್ನು ಆ ಜಾಗಕ್ಕೆ ನೇಮಿಸುವುದಿಲ್ಲ ಎಂದು ಫಾರೂಕ್, ಎ ಕೆ ಗಂಗೂಲಿಯವರ ಲೈಂಗಿಕ ದೌರ್ಜನ್ಯ ಕೇಸಿನ ನಂತರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.

1 ರೂಪಾಯಿಯಲ್ಲಿ ಹೊಟ್ಟೆ ತುಂಬಲ್ವಾ?

1 ರೂಪಾಯಿಯಲ್ಲಿ ಹೊಟ್ಟೆ ತುಂಬಲ್ವಾ?

ಒಂದು ರೂಪಾಯಿಯಲ್ಲಿ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ. ಒಂದು ರೂಪಾಯಿನಿಂದಲೂ ಹೊಟ್ಟೆ ತುಂಬಿಸಿಕೊಳ್ಳಬಹುದು, ನೂರು ರೂಪಾಯಿಯಿಂದಲೂ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂದು ಫಾರೂಕ್ ಅಬ್ದುಲ್ಲಾ ಈ ಹಿಂದೆ ಪ್ರತಿಪಕ್ಷ ಮತ್ತು ತಮ್ಮದೇ ಒಕ್ಕೂಟದ ಸದಸ್ಯರಿಂದ ಟೀಕೆಗೆ ಗುರಿಯಾಗಿದ್ದರು.
(ರೂಪಾಯಿಗೆ ಹೊಟ್ಟೆ ತುಂಬಲ್ವಾ)

ಬಡವರ ಬಗ್ಗೆ ಕಾಳಜಿ

ಬಡವರ ಬಗ್ಗೆ ಕಾಳಜಿ

ಕೇಂದ್ರದ ಯುಪಿಎ ಸರಕಾರ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಅವರ ಜೀವನ ಶೈಲಿಯನ್ನು ಬದಲಾಯಿಸಲು ಸರಕಾರ ಕಟಿಬದ್ದವಾಗಿದೆ. ಅವರು ಚೆನ್ನಾಗಿ ತಿಂದು ಆರೋಗ್ಯವಾಗಿದ್ದರೆ ತಾನೇ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎನ್ನುವ ಮಾತನ್ನು ಫಾರೂಕ್ ಅಬ್ದುಲ್ಲಾ ಈ ಹಿಂದೆ ಆಡಿದ್ದರು.

ಪುರುಷರು ಸಲಿಂಗಿಗಳು

ಪುರುಷರು ಸಲಿಂಗಿಗಳು

ಮುಂದೊಂದು ದಿನ ಮದುವೆ ಮಾಡಿಕೊಳ್ಳೋಣ ಅಂದರೆ ಹುಡುಗಿಯರೇ ಸಿಗುವುದಿಲ್ಲ. ಆಗ ಪುರುಷರು ಸಲಿಂಗಿಗಳಾಗುತ್ತಾರೆ. ಅಂತಹ ದಿನಗಳು ದೂರವೇನೂ ಇಲ್ಲ. ಯುವತಿಯರು ಸಿಗದೆ ನಾವೆಲ್ಲ ಸಲಿಂಗಿಗಳಾಗಬೇಕಾಗುತ್ತದೆ, ಫಾರೂಖ್ ಅಬ್ದುಲ್ಲಾ ಭವಿಷ್ಯ ನುಡಿದಿದ್ದರು.
(ಪುರುಷರು ಸಲಿಂಗಿಗಳಾಗುತ್ತಾರೆ)

English summary
National Conference leader and Union Minister Farooq Abdullah is in the news again. This time for making a controversial statement against Kashmiris. Abdullah made a statement saying that 'Kashmiris were maha chors (big thieves)'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X