ಬಾಲ ಬಿಚ್ಚಿದ ಉಗ್ರರು: 5 ಯೋಧರು ಹುತಾತ್ಮ

Written By:
Subscribe to Oneindia Kannada

ಶ್ರೀನಗರ, ಜೂನ್ ,25: ಬಾಲ ಮುದುರಿಕೊಂಡಿದ್ದ ಉಗ್ರರು ಸೇನೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ನಡೆದ ಉಗ್ರರ ದಾಳಿಗೆ ಸಿಆರ್ ಪಿಎಫ್ ಯೋಧರ ಬಸ್ ಗುರಿಯಾಗಿದ್ದು 5 ಯೋಧರು ಪ್ರಾಣತ್ಯಾಗ ಮಾಡಿದ್ದಾರೆ.

20 ಜನ ಯೋಧರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೈನಿಕರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಇನ್ನೊಂದೆಡೆ ಉಗ್ರರು ಮತ್ತು ಸಿಆರ್ ಪಿಎಫ್ ಯೋಧರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ.[ಗುಜರಾತಿನ ದೇಗುಲ ಧ್ವಂಸಗೊಳಿಸಲು ಉಗ್ರರ ಎಂಟ್ರಿ?]

india

ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಉಗ್ರರು ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಸಂಘಟನೆಗೆ ಸೇರಿದವರು ಎಂದು ಸಿಆರ್ ಪಿಎಫ್ ಐಜಿ ನಳೀನ್ ಪ್ರಭಾತ್ ತಿಳಿಸಿದ್ದಾರೆ.[ಅಷ್ಟಕ್ಕೂ.. ತಮಿಳುನಾಡಿನ ಯುವಕ ತ್ರಿವರ್ಣ ಧ್ವಜ ಸುಟ್ಟಿದ್ದೇಕೆ?]

ದಾಳಿಯ ನಂತರ ಸೈನಿಕರು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಅಡಗಿಕೊಂಡಿರುವ ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two militants and 5 Central Reserve Police Force (CRPF) jawans were killed on Saturday in a gunfight after the terrorists ambushed a CRPF convoy on the Srinagar-Jammu national highway in Jammu and Kashmir's Pulwama district on 25, June 2015.
Please Wait while comments are loading...