ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಪ್ರವಾಹ : ಜನ ಹುಡುಕಾಟಕ್ಕೆ ಗೂಗಲ್ ಹೆಲ್ಪ್

By Mahesh
|
Google Oneindia Kannada News

ಶ್ರೀನಗರ, ಸೆ.10: ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಜನ ತತ್ತರಿಸುವ ಸಂದರ್ಭದಲ್ಲಿ ಜನರ ಹುಡುಕಾಟಕ್ಕೆ ನೆರವಾಗಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತೊಮ್ಮೆ ಸಿದ್ಧವಾಗಿದೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧು ಮಿತ್ರರನ್ನು ಕಳೆದುಕೊಂಡವರು ತಮ್ಮವರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು Google Person Finder Service ಬಳಸಬಹುದು.ಜೊತೆಗೆ ಸಂತ್ರಸ್ತರ ಬಗ್ಗೆ ಮಾಹಿತಿ ಇದ್ದರೆ ಹೆಚ್ಚಿನ ವಿವರಗಳನ್ನು ಗೂಗಲ್ ಗೆ ಒದಗಿಸಬಹುದು. ಈ ಸೇವೆ ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ.

2010ರ ಹೈತಿ ಭೂಕಂಪ, ಜಪಾನಿನಲ್ಲಿ 2011ರಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಮನೆ ಮಠ ಕಳೆದುಕೊಂಡವರ ಪತ್ತೆಗೆ ಗೂಗಲ್ ಇದೇ ಅಪ್ಲಿಕೇಷನ್ ಬಳಸಿತ್ತು. [ಸಂತ್ರಸ್ತರಿಗೆ ದೇಣಿಗೆ ನೀಡಲು ಆರ್ ಎಸ್ಎಸ್ ಮನವಿ]

Kashmir floods: Google chips in with 'person finder' application

ಭಾರತದ ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ಕಾಣೆಯಾದರವನ್ನು ಪತ್ತೆಹಚ್ಚುವ ಸಲುವಾಗಿ ಕೂಡಾ ಗೂಗಲ್‌ ಪರ್ಸ‌ನ್‌ ಫೈಂಡರ್‌ ವೆಬ್ ಅಪ್ಲಿಕೇಶನ್‌ ಬಳಸಲಾಗಿತ್ತು. ಇದು ಓಪನ್ ಸೋರ್ಸ್ ವೆಬ್ ಅಪ್ಲಿಕೇಷನ್ ಆಗಿದ್ದು, ಸಂದೇಶ ವಾಹಕ ಹಾಗೂ ಡಾಟಾಬೇಸ್ ಒಳಗೊಂಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೋರ್ಸ್(NDRF) ನ ಜೊತೆ ಕೈ ಜೋಡಿಸಿದೆ.

ಹುಡುಕುವುದು ಹೇಗೆ?
Person Finder : Jammu & Kashmir Floods, September 2014 ಕ್ಲಿಕ್ ಮಾಡಿ

ನಾಪತ್ತೆಯಾದ ವ್ಯಕ್ತಿಯ ಹೆಸರು ಗೊತ್ತಿದ್ದರೆ I'm looking for someone ಕ್ಲಿಕ್ ಮಾಡಿ ಹೆಸರು ಟೈಪ್ ಮಾಡಿ ವಿವರ ಪಡೆಯಿರಿ. ವ್ಯಕ್ತಿಯ ಬಗ್ಗೆ ಮಾಹಿತಿ ಗೊತ್ತಿದ್ದರೆ ಅವರ ಹೆಸರು ವಿವರ ನೀಡಿ ಸಹಾಯ ಮಾಡಬಹುದು. ಅಥವಾ ಎಸ್ ಎಂಎಸ್ ಮಾಡಿ ಮಾಹಿತಿ ಕೋರಬಹುದು.

Search is available through SMS. Text "search " to 97733 00000

ಜಮ್ಮು ಮತ್ತು ಕಾಶ್ಮೀರದ ಸಹಾಯವಾಣಿ: (011) 2309 3054, 2309 2763, 2309 3564, 2309 2923, 2309,2885, 2309,3566 2309,3563

English summary
Google has stepped in to help people locate their friends and relatives stranded in the severe floods in Jammu and Kashmir. The internet giant's much-praised app 'person finder' has tied up with the National Disaster Response Force (NDRF) to create a database on the status of stranded and missing people in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X