ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟಿಯಲ್ಲಿ ಕರ್ನಾಟಕದಿಂದ ಚೇಸಿಂಗ್ ಫೌಂಟೇನ್: ವಿಶೇಷತೆ ಏನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 3: ಕರ್ನಾಟಕದಿಂದ ಊಟಿಯಲ್ಲಿ ಅದ್ಭುತ ಚೇಸಿಂಗ್ ಫೌಂಟೇನ್ ನಿರ್ಮಾಣವಾಗುತ್ತಿದೆ.

ಅಲ್ಲಿ ಶೀತಲವಲಯದ ಆಕರ್ಷಕ ಹೂವಿನ ಗಿಡಗಳು ಹಾಗೂ ಟೊಪೇರಿಯಾಗಳನ್ನೊಳಗೊಂಡ ಊಟಿಯ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನಕ್ಕೆ ಶೀಘ್ರದಲ್ಲಿ ಬೃಹತ್ ತೂಗುಸೇತುವೆ ನಿರ್ಮಾಣವಾಗಲಿದೆ.

ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಲಗಿರಿ ಕುರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಈ ಕುರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ.

Karnataka Will Build Chasing Fountain In Ooty

ಹತ್ತಾರು ವರ್ಷಗಳಿಂದ ಬರಡಾಗಿದ್ದ ತಮಿಳುನಾಡಿನ ಊಟಿಯ ಬಟಾನಿಕಲ್ ಗಾರ್ಡನ್‌ಗೆ ಹೊಂದಿಕೊಂಡಂತಿರುವ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಒಡೆತನದ ಫರ್ನ್ ಹಿಲ್ ನ ಕರ್ನಾಟಕ ಸಿರಿ ತೊಟಗಾರಿಗೆ ಉದ್ಯಾನವನ್ನು ಐದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 1.4 ಕೋಟಿ ರೂ. ವೆಚ್ಚದಲ್ಲಿ ಬೃಹತ್ ತೂಗು ಸೇತುವೆ ಮತ್ತ 1.5 ಕೋಟಿ ರೂ. ವೆಚ್ಚದಲ್ಲಿ ಚೇಸಿಂಗ್ ಫೌಂಟೇನ್ ನಿರ್ಮಾಣವಾಗಲಿದೆ.

2.5 ಎಕರೆ ವ್ಯಾಪ್ತಿಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ವರ್ಷ ಊಟಿಗೆ ಸುಮಾರು 30 ಲಕ್ಷ ಮಂದಿ ಆಗಮಿಸುತ್ತಾರೆ.

ಸುಮಾರು ಮೂರು ಎಕರೆ ಪ್ರದೇಶದಲ್ಲಿ ಟೀ ಗಾರ್ಡನ್ ಮಾಡಲಾಗುತ್ತಿದೆ. ಈ ರ್ಗಾನ್‌ನಲ್ಲಿ ಪ್ರವಾಸಿಗರು ಫೋಟೊ ಶೂಟ್ ಮಾಡಲು ಅಗತ್ಯವಾದ ರೀತಿಯಲ್ಲಿ ವಿನ್ಯಾಸ ಮಾಡಲಾಗುತ್ತದೆ.

English summary
The Newly Developed Karnataka Siri Horticulture Garden Has Now Got A Hanging Bridge and a chasing Fountain In Ooty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X