ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ದಿನೇಶ್ ಮಹೇಶ್ವರಿ ಸುಪ್ರೀಂ ನ್ಯಾಯಮೂರ್ತಿಯಾಗಿ ನೇಮಕ

|
Google Oneindia Kannada News

ಕರ್ನಾಟಕ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ದೆಹಲಿ ಹೈ ಕೋರ್ಟ್ ಅ ನ್ಯಾ.ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸರಕಾರ ನೇಮಕ ಮಾಡಿದೆ. ಈ ಬಗ್ಗೆ ಕಾನೂನು ಸಚಿವಾಲಯದ ಅಧಿಸೂಚನೆ ಇದನ್ನು ತಿಳಿಸಿದ್ದು, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರ ಅಂಕಿತ ಬಿದ್ದ ನಂತರ ಆದೇಶ ಹೊರಡಿಸಲಾಗಿದೆ.

ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನಕ್ಕೆ ಆಕ್ಷೇಪ; ಏನಿದು ಹೊಸ ವಿವಾದ?ಸುಪ್ರೀಂಕೋರ್ಟ್ ಕೊಲಿಜಿಯಂ ತೀರ್ಮಾನಕ್ಕೆ ಆಕ್ಷೇಪ; ಏನಿದು ಹೊಸ ವಿವಾದ?

ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಮಾಡಿದ ಶಿಫಾರಸಿಗೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದಾರೆ. ಕರ್ನಾಟಕ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರನ್ನು ಪದೋನ್ನತಿಯಲ್ಲಿ ಕಡೆಗಣಿಸಲಾಗಿತ್ತು. ಇನ್ನು ಸದ್ಯಕ್ಕೆ ಇರುವ ಸುಪ್ರೀಂ ಕೋರ್ಟ್ ನ ಹಲವು ಮುಖ್ಯ ನ್ಯಾಯಮೂರ್ತಿಗಳಿಗಿಂತ ಹಾಗೂ ಹೈಕೋರ್ಟ್ ಹಲವು ನ್ಯಾಯಮೂರ್ತಿಗಳಿಗಿಂತ ಕಿರಿಯರು.

Karnatakas chief justice Dinesh Maheswari appointed as judges Supreme Court

ಸದ್ಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಇಪ್ಪತ್ತಾರು ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅದರ ಮಂಜೂರಾದ ಸಾಮರ್ಥ್ಯ ಮೂವತ್ತೊಂದು. ಐದು ಸ್ಥಾನಗಳನ್ನು ಹಾಗೇ ಬಿಡಲಾಗಿದೆ. ಸುಪ್ರೀಂ ಕೋರ್ಟ್ ನ ಕೊಲಿಜಿಯಂನಿಂದ ನ್ಯಾಯಮೂರ್ತಿಗಳಾದ ಮಹೇಶ್ವರಿ ಹಾಗೂ ಖನ್ನಾ ಹೆಸರು ಅಂತಿಮಗೊಳಿಸಲಾಗಿತ್ತು.

English summary
The government on Wednesday appointed Karnataka high court chief justice Dinesh Maheswari and Delhi high court judge Sanjiv Khanna as judges Supreme Court, according to a notification by the Ministry of Law and Justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X