ಇಂಧನ ಮರುನವೀಕರಣ, ಕರ್ನಾಟಕ ಅಪಾರದರ್ಶಕ : ಗೋಯಲ್ ಆರೋಪ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 06 : ಕರ್ನಾಟಕ ಮರುನವೀಕರಿಸಬಹುದಾದ ಇಂಧನ ಯೋಜನೆಯನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಪಾರದರ್ಶಕ ವ್ಯವಸ್ಥೆಯನ್ನು ಪಾಲಿಸುತ್ತಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಆರೋಪಿಸಿದ್ದಾರೆ.

ಕರ್ನಾಟಕ ಎದುರಿಸುತ್ತಿರುವ ಇಂಧನ ಕೊರತೆಯ ಕುರಿತಂತೆ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪಿಯೂಶ್ ಗೋಯಲ್ ಅವರು ಉತ್ತರಿಸುತ್ತಿದ್ದರು. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯ ಬಗ್ಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಮಾಡಿರುವ ಮನವಿಯ ಬಗ್ಗೆ ಮುನಿಯಪ್ಪ ಪ್ರಸ್ತಾಪಿಸಿದರು.

ಮುಂಬರುವ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಡಿ.ಕೆ ಶಿವಕುಮಾರ್

ಕರ್ನಾಟಕದ ಇಂಧನ ಸಚಿವರು ಮರುನವೀಕರಣ ಇಂಧನ ಮತ್ತು ಇಂಧನ ಕೊಳ್ಳುವಿಕೆಗಾಗಿ ಮಾರ್ಗದರ್ಶಿಯನ್ನು ನಿಗದಿ ಮಾಡಲು ಮಾತ್ರ ನನ್ನನ್ನು ಸಂಪರ್ಕಿಸಿದ್ದಾರೆ. ಆದರೆ, ಇನ್ನು ಅವರು ಪಾರದರ್ಶಕ ಕ್ರಿಯೆಯ ಮೂಲಕ ಮಾಡಿಲ್ಲ, ಒಡಂಬಡಿಕೆಯ ಆಧಾರದ ಮೇಲೆ ಮಾಡುತ್ತಿದ್ದಾರೆ. ಇದರಿಂದಾಗಿ ತೊಂದರೆಯಾಗುತ್ತಿದೆ ಎಂದು ಉತ್ತರಿಸಿದರು.

Piyush Goyal

ಪಿಯೂಶ್ ಗೋಯಲ್ ಅವರು ಇಂಧನ ಸಚಿವರಾಗಿದ್ದಾಗ, ಸ್ಪರ್ಧಾತ್ಮಕ ಹರಾಜಿನ ಬದಲು ಇಂಧನ ಕೊಳ್ಳುವಿಕೆ ಒಪ್ಪಂದದ ಆಧಾರದ ಮೇಲೆ ಹೊಸ ಮತ್ತು ಮರುನವೀಕರಣ ಇಂಧನ ಯೋಜನೆಯ ಬಗ್ಗೆ ಕರ್ನಾಟಕ ಉತ್ಸುಕತೆ ತೋರಿದ್ದಾಗ ಅದಕ್ಕೆ ಉತ್ತೇಜನ ನೀಡಿದ್ದರು.

ಸ್ಪರ್ಧಾತ್ಮಕ ಹರಾಜಿನ ಮೂಲಕ ಮರುನವೀಕರಣ ಇಂಧನ ಯೋಜನೆಯನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಕೇಂದ್ರ ಸರಕಾರ ಎಲ್ಲ ರಾಜ್ಯಗಳನ್ನು ಕೋರುತ್ತಿದೆ. ಇಂಧನ ಕೊಳ್ಳುವಿಕೆ ಒಪ್ಪಂದ ಅಥವಾ ಗುತ್ತಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಸ್ಪರ್ಧಾತ್ಮಕ ಹರಾಜಿಗೆ ಕಡಿಮೆ ವ್ಯಯವಾಗುತ್ತದೆ ಎಂಬುದು ಕೇಂದ್ರದ ಅಭಿಪ್ರಾಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka is not following the transparency system in developing renewable energy projects, Union Minister Piyush Goyal said in Parliament.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ