ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಸಿಬಿಎಸ್‌ಇ ಫಲಿತಾಂಶ: ಟಾಪ್‌ 3 ಪಟ್ಟಿಯಲ್ಲಿ ಕರ್ನಾಟಕ ಇಲ್ಲ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಮೇ 26: ಕೇಂದ್ರೀಯ ಪರೀಕ್ಷಾ ಮಂಡಳಿ ಸಿಬಿಎಸ್‌ಇ ಶನಿವಾರ 12 ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು, ಕರ್ನಾಟಕ ರಾಜ್ಯ ಟಾಪ್‌ ಥ್ರೀ ರಾಜ್ಯಗಳ ಪಟ್ಟಿಯಲ್ಲಿ ಹೆಸರು ಪಡೆಯುವಲ್ಲಿ ವಿಫಲವಾಗಿದೆ.

  ತ್ರಿವೆಂಡ್ರಮ್ ದೇಶದಲ್ಲೇ ಅತಿ ಹೆಚ್ಚು ಅಂದರೆ ಶೇ.97.32 ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಶೇ. 93.87 ಫಲಿತಾಂಶ ಪಡೆದು ದ್ವಿತೀಯ ಸ್ಥಾನದಲ್ಲಿದೆ ಇನ್ನು ದೆಹಲಿ ಶೇ.89 ತೃಪ್ತಿಪಟ್ಟುಕೊಂಡಿದೆ.

  ಗಾಜಿಯಾಬಾದ್ ನ ಮೇಘನಾ ಸಿಬಿಎಸ್ಇ 12ನೇ ಕ್ಲಾಸ್ ಟಾಪರ್

  ಜಾಜಿಯಾಬಾದ್‌ನ ಮೇಘನಾ ಶ್ರೀವಾತ್ಸವ 500 ಅಂಕಗಳಿಗೆ 499 ಅಂಕಗಳನ್ನು ಗಳಿಸಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಉತ್ತರ ಪ್ರದೇಶದ ಅನುಷ್ಕಾ ಚಂದಾ ದ್ವಿತೀಯ ಸ್ಥಾನ ಗಳಿಸಿದ್ದು, ರಾಜಸ್ತಾನದ ಚಾಹತ್ ಬೋಧ್‌ರಾಜ್ ತೃತೀಯ ಸ್ಥಾನ ಪಡೆದಿದ್ದಾರೆ.

  Karnataka misses CBSE 12 class top list

  ಬಾಲಕರು ಶೇ.78.99 ರಷ್ಟು ಫಲಿತಾಂಶ ಪಡೆದರೆ ವಿದ್ಯಾರ್ಥಿನಿಯರು ಶೇ.88.31 ಉತ್ತೀರ್ಣರಾಗುವ ಮೂಲಕ ಬಾಲಕರನ್ನು ಹಿಂದಿಕ್ಕಿದ್ದಾರೆ. ಈ ಬಾರಿ ಶೇ.83.ರಷ್ಟು ಫಲಿತಾಂಶ ಲಭ್ಯವಾಗಿದೆ. ಕಳೆದ ಬಾರಿ ಶೇ.82.02 ಫಲಿತಾಂಶ ಬಂದಿತ್ತು.

  ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಇನ್ನೆರೆಡು ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಮೇ 28 ಅಥವಾ 29 ರಂದು ಸಿಬಿಎಸ್‌ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ತಿಳಿಸಿದ್ದಾರೆ.

  ಈ ಬಾರಿ ಸಿಬಿಎಸ್‌ಇ ಹತ್ತನೇ ತರಗತಿ ಹಾಗೂ 12ನೇ ತರಗತಿ ಸೇರಿ ಒಟ್ಟು 28 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 16, 38,420 ವಿದ್ಯಾರ್ಥಿಗಳು 1೦ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು 4453 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  CBSE announced its class 12 results on Saturday. Karnataka misses it's name in top three ranks as Trivendrum stands first rank followed by Chennai and Delhi.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more