• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಾಬ್ ಪ್ರಕರಣ: ಕುರಾನ್ ವ್ಯಾಖ್ಯಾನದ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಸೆ. 16: ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿದೆ. ಈ ಕುರಿತಂತೆ ವಿಚಾರಣೆ ಮುಂದುವರೆದಿದ್ದು, ಗುರುವಾರದಂದು ನ್ಯಾ. ಹೇಮಂತ್ ಗುಪ್ತ ಹಾಗೂ ನ್ಯಾ. ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು ಕುರಾನ್ ವ್ಯಾಖ್ಯಾನದ ಬಗ್ಗೆ ಹೇಳಿದೆ.

ವಿಚಾರಣೆ ವೇಳೆ ನ್ಯಾಯಪೀಠವು ಕುರಾನ್ ವ್ಯಾಖ್ಯಾನ ಬಗ್ಗೆ ಹೇಳಿದ್ದು ಉಲ್ಲೇಖಾರ್ಹವಾಗಿದ್ದು, ನ್ಯಾಯಾಲವು, ಪವಿತ್ರ ಕುರಾನ್‌ನ "ವ್ಯಾಖ್ಯಾನಕಾರ" ಅಲ್ಲ ಎಂದಿದೆ. ಧಾರ್ಮಿಕ ಗ್ರಂಥಗಳನ್ನು ಅರ್ಥೈಸಲು ನ್ಯಾಯಾಲಯಗಳು ಸಜ್ಜುಗೊಂಡಿಲ್ಲ ಎಂದು ಕರ್ನಾಟಕ ಹಿಜಾಬ್ ನಿಷೇಧದ ವಿಷಯದಲ್ಲಿ ಈ ಬಗ್ಗೆ ವಾದಿಸಲಾಗಿದೆ ಎಂದು ನ್ಯಾಯಪೀಠವು ಹೇಳಿದೆ.

ರಾಜ್ಯದಲ್ಲಿ ಹಿಜಾಬ್ ನಿಷೇಧ: ಪರೀಕ್ಷೆಯಿಂದ ದೂರ ಉಳಿದ 17,000 ವಿದ್ಯಾರ್ಥಿಗಳು!ರಾಜ್ಯದಲ್ಲಿ ಹಿಜಾಬ್ ನಿಷೇಧ: ಪರೀಕ್ಷೆಯಿಂದ ದೂರ ಉಳಿದ 17,000 ವಿದ್ಯಾರ್ಥಿಗಳು!

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟುಗೂಡಿಸಿ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರೊಬ್ಬರ ಪರ ವಕೀಲರ ನಂತರ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

"ಕುರಾನ್ ಅನ್ನು ಅರ್ಥೈಸುವುದು ಒಂದು ಮಾರ್ಗವಾಗಿದೆ.... ನಾವು ಕುರಾನ್‌ನ ವ್ಯಾಖ್ಯಾನಕಾರರಲ್ಲ. ನಾವು ಅದನ್ನು ಮಾಡಲು ಸಾಧ್ಯವಿಲ್ಲ ಮತ್ತು ಧಾರ್ಮಿಕ ಗ್ರಂಥಗಳನ್ನು ಅರ್ಥೈಸಲು ನ್ಯಾಯಾಲಯಗಳು ಸಜ್ಜುಗೊಂಡಿಲ್ಲ ಎಂಬ ವಾದವೂ ಇದೆ" ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಅವರಿದ್ದ ನ್ಯಾಯಪೀಠವು ಹೇಳಿದೆ

ಹಿಜಾಬ್ ಧರಿಸುವುದು ಗೌಪ್ಯತೆ, ಘನತೆ ಮತ್ತು ಸ್ವಾಯತ್ತತೆಯ ವಿಷಯವಾಗಿದೆ ಮತ್ತು ಅದನ್ನು ಧರಿಸುವ ಅಭ್ಯಾಸವು ಮೂಲಭೂತವಾಗಿದೆಯೇ ಎಂಬ ಅಂಶಗಳು ಸೇರಿದಂತೆ ವಿವಿಧ ಅಂಶಗಳ ಕುರಿತು ಅರ್ಜಿದಾರರ ಪರ ಹಾಜರಾಗಿ ವಾದ ಮಂಡಿಸಿದ ಹಲವಾರು ವಕೀಲರ ಸಲ್ಲಿಕೆಗಳನ್ನು ಸುಪ್ರೀಂ ಕೋರ್ಟ್ ಆಲಿಸಿತು.

ಇಸ್ಲಾಮಿಕ್ ಮತ್ತು ಧಾರ್ಮಿಕ ದೃಷ್ಟಿಕೋನದಲ್ಲಿ ಉಚ್ಚ ನ್ಯಾಯಾಲಯವು ವಿಷಯವನ್ನು ಅರ್ಥೈಸುವ ರೀತಿ "ತಪ್ಪು ಮೌಲ್ಯಮಾಪನ" ಎಂದು ವಕೀಲರೊಬ್ಬರು ವಾದಿಸಿದರು.

"ಹೈಕೋರ್ಟ್ ಏನಾದರೂ ಹೇಳಿರಬಹುದು, ಆದರೆ ಈಗ ನಾವು ಮೇಲ್ಮನವಿಗಳಲ್ಲಿ ಸ್ವತಂತ್ರ ದೃಷ್ಟಿಕೋನವನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಪೀಠವು ಸಮರ್ಥಿಸಿತು.

ಹಿಜಾಬ್ ಧರಿಸುವುದು ಒಬ್ಬರ ಘನತೆ, ಖಾಸಗಿತನ ಮತ್ತು ಸ್ವಾಯತ್ತತೆಯ ವಿಷಯವಾಗಿದೆ ಎಂದು ವಕೀಲ ಶೋಬ್ ಆಲಂ ವಾದಿಸಿದರು.

"ಒಂದು ಕಡೆ, ನನಗೆ ಶಿಕ್ಷಣದ ಹಕ್ಕು, ಶಾಲೆಗೆ ಹೋಗುವ ಹಕ್ಕು, ಇತರರೊಂದಿಗೆ ಅಂತರ್ಗತ ಶಿಕ್ಷಣ ಪಡೆಯುವ ಹಕ್ಕು ಇದೆ. ಮತ್ತೊಂದೆಡೆ, ನನ್ನ ಇನ್ನೊಂದು ಹಕ್ಕು ಇದೆ, ಅದು ಖಾಸಗಿತನ, ಘನತೆ ಮತ್ತು ಸ್ವಾಯತ್ತತೆಯ ಹಕ್ಕು" ಎಂದು ಅವರು ಹೇಳಿದರು. .

English summary
The Supreme Court said on Thursday it is not the "interpreter" of the Holy Quran and it has been argued before it in the Karnataka Hijab ban matter that courts are not equipped to interpret religious scriptures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X