ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಂತೆ ಕರ್ನಾಟಕಕ್ಕೂ ಪ್ರತ್ಯೇಕ ಧ್ವಜ, ಇದು ಸಾಧ್ಯ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 19: ಜಮ್ಮು ಮತ್ತು ಕಾಶ್ಮೀರ ರಾಜ್ಯ ಪ್ರತ್ಯೇಕ ರಾಜ್ಯ ಧ್ವಜ ಹೊಂದಿರುವಂತೆ ಕರ್ನಾಟಕವೂ ಕೂಡಾ ಧ್ವಜ ಹೊಂದಬಹುದೇ? ಸಂವಿಧಾನದಲ್ಲಿ ಇದಕ್ಕೆ ಮಾನ್ಯತೆ ಇದೆಯೇ? ವಿವರ ಮುಂದೆ ಓದಿ...

ಬಿಜೆಪಿ ಬಲಿ ಹಾಕಲು ಸಿದ್ದರಾಮಯ್ಯರಿಂದ 'ಕನ್ನಡ' ಅಸ್ತ್ರ?ಬಿಜೆಪಿ ಬಲಿ ಹಾಕಲು ಸಿದ್ದರಾಮಯ್ಯರಿಂದ 'ಕನ್ನಡ' ಅಸ್ತ್ರ?

ಕರ್ನಾಟಕ ರಾಜ್ಯ ತನ್ನದೇ ಆದ ಪ್ರತ್ಯೇಕ ಧ್ವಜ ಹೊಂದಲು ಮುಂದಾಗಿದ್ದು, ಇದಕ್ಕಾಗಿ 9 ಜನ ಸದಸ್ಯರ ಸಮಿತಿ ರಚಿಸಲಾಗಿದೆ.

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ : ವಾದ ಪ್ರತಿವಾದ ವಿವಾದಕರ್ನಾಟಕಕ್ಕೆ ಪ್ರತ್ಯೇಕ ಧ್ವಜ : ವಾದ ಪ್ರತಿವಾದ ವಿವಾದ

ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬಾರದಂತೆ ಕರ್ನಾಟಕ ಸರ್ಕಾರ ನಡೆದುಕೊಳ್ಳಲಿದೆ. ಪ್ರತ್ಯೇಕ ನಾಡ ಧ್ವಜ ಹೊಂದಬಾರದು ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಾವುಟ ಇಲ್ಲಕರ್ನಾಟಕ ರಾಜ್ಯಕ್ಕೆ ಅಧಿಕೃತ ಬಾವುಟ ಇಲ್ಲ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಚಿಸಿರುವ ಸಮಿತಿಯೊಂದಿಗೆ ಮೊದಲಿಗೆ ಸಭೆ ನಡೆಸಿ, ಸಾರ್ವಜನಿಕರ ಮುಕ್ತ ಅಭಿಪ್ರಾಯಗಳನ್ನು ಆಲಿಸಿ, ವಿರೋಧ ಪಕ್ಷದ ಅನಿಸಿಕೆಗಳನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ನಂತರ ಏನು ಮಾಡಬೇಕೆಂಬುದನ್ನು ತೀರ್ಮಾನಿಸಲಿದೆ. ಜಮ್ಮು ಮತ್ತು ಕಾಶ್ಮೀರದ ಬಾವುಟ, ಸಂವಿಧಾನದ ಮಾನ್ಯತೆ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ..

ಗೃಹ ಇಲಾಖೆ ವಕ್ತಾರರ ಸ್ಪಷ್ಟನೆ

ಗೃಹ ಇಲಾಖೆ ವಕ್ತಾರರ ಸ್ಪಷ್ಟನೆ

ಕರ್ನಾಟಕ ಸರಕಾರದ ಪ್ರತ್ಯೇಕ ಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು, "ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ. ಭಾರತಕ್ಕಿರುವುದು ತ್ರಿವರ್ಣ ಧ್ವಜ ಮಾತ್ರ ," ಅಂತ ಸ್ಪಷ್ಟಪಡಿಸಿದೆ.

"ನಮ್ಮದು ಒಂದು ದೇಶ ಒಂದು ಧ್ವಜ. ಕಾನೂನಾತ್ಮಕವಾಗಿ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ನೀಡಲು ಅವಕಾಶವೂ ಇಲ್ಲ, ನಿರ್ಬಂಧವೂ ಇಲ್ಲ," ಎಂದು ಗೃಹ ಇಲಾಖೆ ವಕ್ತಾರರು ಹೇಳಿದ್ದಾರೆ.

ಕಾನೂನು ಏನು ಹೇಳುತ್ತದೆ?

ಕಾನೂನು ಏನು ಹೇಳುತ್ತದೆ?

ರಾಷ್ಟ್ರಧ್ವಜಕ್ಕೆ ಅಗೌರವ ತೋರದಂತೆ ಧ್ವಜ ನೀತಿ ಸಂಹಿತೆಯನ್ನು ಪಾಲಿಸಿಕೊಂಡು ಬೇರೆ ಧ್ವಜಗಳನ್ನು ಬಳಸುವುದರಲ್ಲಿ ತಪ್ಪೇನಿಲ್ಲ. ಪಕ್ಷ,ಪ್ರಾದೇಶಿಕತೆ, ಸಂಸ್ಕೃತಿ, ಸಂಘಟನೆಗೆ ತಕ್ಕಂತೆ ವಿವಿಧ ಧ್ವಜಗಳು ಈಗಾಗಲೇ ಚಾಲ್ತಿಯಲ್ಲಿವೆ.


ಕರ್ನಾಟಕದ ವಿಷಯಕ್ಕೆ ಬಂದರೆ, ಕರ್ನಾಟಕದಲ್ಲಿ ಕೇಸರಿ ಹಾಗೂ ಕೆಂಪು ಬಣ್ಣದ ಬಾವುಟವನ್ನು ಎಲ್ಲೆಡೆ ಬಳಸಲಾಗುತ್ತಿದೆ. 60ರ ದಶಕದಲ್ಲಿ ಸ್ವಾತಂತ್ರ್ಯ ಸೇನಾನಿ ವೀರಕೇಸರಿ ಸೀತಾರಾಮಶಾಸ್ತ್ರಿಗಳ ಮಗ ಸಾಮಾಜಿಕ ಹೋರಾಟಗಾರ ಮ. ರಾಮಮೂರ್ತಿ ಅವರು ಮೊದಲಿಗೆ ಈಗ ಚಾಲ್ತಿಯಲ್ಲಿರುವ 'ಕನ್ನಡ ಬಾವುಟ' ವನ್ನು ಬಳಸಲು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಸಾರ್ವಜನಿಕವಾಗಿ ಇದೇ ಬಾವುಟ ಬಳಕೆಯಲ್ಲಿದೆ.

ಆದರೆ, ಈ ಬಾವುಟಕ್ಕೆ ಕಾನೂನಿನ ಮಾನ್ಯತೆ ಅಥವಾ ಅಧಿಕೃತ ಬಾವುಟದ ಮಾನ್ಯತೆ ಸಿಕ್ಕಿಲ್ಲ.

ಬೊಮ್ಮಾಯಿ ಕಾಲದ ತೀರ್ಪು

1994ರಲ್ಲಿ ಕೇಂದ್ರ ಸರ್ಕಾರ ಹಾಗೂ ಎಸ್ ಆರ್ ಬೊಮ್ಮಾಯಿ ಸರ್ಕಾರ ನಡುವೆ ಇದೇ ವಿಷಯವಾಗಿ ಸುಪ್ರೀಂಕೋರ್ಟಿನಲ್ಲಿ ವಾದ-ವಿವಾದ ನಡೆದಿತ್ತು. ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆ ಮೂಲ ಆಶಯವಾಗಿದ್ದು, ಆಯಾ ರಾಜ್ಯಗಳು ತಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಭುತ್ವವನ್ನು ಹೊಂದಿ, ಪ್ರತ್ಯೇಕ ಧ್ವಜ ಹೊಂದುವುದರಲ್ಲಿ ತಪ್ಪೇನಿಲ್ಲ. ಆದರೆ, ರಾಜ್ಯ ಧ್ವಜದಿಂದ ರಾಷ್ಟ್ರಧ್ವಜದ ಘನತೆಗೆ ಕುಂದುಂಟಾಗಬಾರದು ಎಂಬ ತೀರ್ಮಾನ ಹೊರ ಬಂದಿತ್ತು. ಆದ್ರೆ, ಸದಾನಂದ ಗೌಡರ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ಹೈಕೋರ್ಟಿನಲ್ಲಿ ಹೇಳಿಕೆ ನೀಡಿ, ಕರ್ನಾಟಕದಲ್ಲಿ ಅಧಿಕೃತ ಧ್ವಜ ಇಲ್ಲ ಎಂದು ಸಾರಿತ್ತು.

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

ಭಾರತೀಯ ಸಂವಿಧಾನದ 370ನೇ ಪರಿಚ್ಛೇದ ಹಾಗೂ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕ ಸಂವಿಧಾನದ ಅನ್ವಯ ಕಣಿವೆ ರಾಜ್ಯಕ್ಕೆ ಪ್ರತ್ಯೇಕ ರಾಜ್ಯ ಧ್ವಜ ಹೊಂದುವ ಅಧಿಕಾರ ಸಿಕ್ಕಿದೆ. ರಾಷ್ಟ್ರಧ್ವಜದ ಸಮನಾಂತರವಾಗಿ ರಾಜ್ಯಧ್ವಜವನ್ನು ಹಾರಿಸಬಹುದಾಗಿದೆ. ಜಮ್ಮು, ಕಾಶ್ಮೀರ, ಲಢಾಕ್, ಕೃಷಿ, ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಧ್ವಜವನ್ನು ಕಾಶ್ಮೀರದಲ್ಲಿ ಬಳಸಲಾಗುತ್ತಿದೆ.
ಆದರೆ, ಬೇರೆ ರಾಜ್ಯಗಳಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರವಾಗಿ ಅಥವಾ ರಾಷ್ಟ್ರಧ್ವಜಕ್ಕೆ ಅಗೌರವ ತೋರುವಂತೆ ರಾಜ್ಯ ಧ್ವಜ ಅಥವಾ ಇನ್ಯಾವುದೇ ಧ್ವಜವನ್ನು ಹಾರಿಸುವಂತಿಲ್ಲ.

English summary
Is there a bar on having a state flag? A controversy has erupted after the Karnataka government constituted a nine member committee to examine the possibility of having a state flag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X