ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲೆಕ್ಕಾಚಾರ: 10 ಸಾವಿರ ಸನಿಹದಲ್ಲಿ ಕರ್ನಾಟಕ-ಆಂಧ್ರ ಪ್ರದೇಶ

|
Google Oneindia Kannada News

ದೆಹಲಿ, ಜೂನ್ 24: ಭಾರತದಲ್ಲಿ ಬುಧವಾರದ ವರದಿ ಬಳಿಕ ಕೊರೊನಾ ವೈರಸ್ ರೋಗಿಗಳ ಸಂಖ್ಯೆ 4,56,183ಕ್ಕೆ ಏರಿಕೆಯಾಗಿದೆ. ಒಂದೇ ದಿನ 15,968 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ದೇಶಾದ್ಯಂತ 2.58 ಲಕ್ಷ ಜನರು ಸೋಂಕಿನಿಂದ ಗುಣಮುಖರಾಗಿದ್ದು, 14000 ಜನರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ ಅಂತಹ ರಾಜ್ಯಗಳಲ್ಲಿ ಕೊರೊನಾ ಅಟ್ಟಹಾಸ ಮಾಡುತ್ತಿದೆ. ಈ ಐದು ರಾಜ್ಯಗಳಲ್ಲಿ ಸೇರಿ ಸುಮಾರು 3 ಲಕ್ಷಕ್ಕಿಂತ ಅಧಿಕ ಕೇಸ್ ವರದಿಯಾಗಿದೆ.

ಭಾರತದಲ್ಲಿ ಒಂದೇ ದಿನ 15,968 ಮಂದಿಗೆ ಕೊರೊನಾವೈರಸ್ ಪಾಸಿಟಿವ್!ಭಾರತದಲ್ಲಿ ಒಂದೇ ದಿನ 15,968 ಮಂದಿಗೆ ಕೊರೊನಾವೈರಸ್ ಪಾಸಿಟಿವ್!

ಈವರೆಗೂ ದೇಶದಲ್ಲಿ 9 ರಾಜ್ಯಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ವೈರಸ್ ಕೇಸ್ ದಾಖಲಾಗಿದೆ. ಇದೀಗ, ಮತ್ತೆರಡು ರಾಜ್ಯಗಳು ಹತ್ತು ಸಾವಿರದ ಸನಿಹ ಬಂದು ನಿಂತಿದೆ. ಯಾವುದು ಆ ರಾಜ್ಯಗಳು? ಮುಂದೆ ಓದಿ.....

ಆಂಧ್ರ-ಕರ್ನಾಟಕ ಪೈಪೋಟಿ

ಆಂಧ್ರ-ಕರ್ನಾಟಕ ಪೈಪೋಟಿ

ಕರ್ನಾಟಕದಲ್ಲಿ ಮಂಗಳವಾರ ಅಂತ್ಯಕ್ಕೆ ಒಟ್ಟು ಸೋಂಕಿತರ ಸಂಖ್ಯೆ 9721ಕ್ಕೆ ಏರಿದೆ. ಬಹುಶಃ ಬುಧವಾರ ಸಂಜೆಯ ವರದಿ ಬಂದ ಬಳಿಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಬಹುದು. ಕರ್ನಾಟಕದಂತೆ ಹತ್ತು ಸಾವಿರ ಗಡಿ ಸನಿಹ ಬಂದು ನಿಂತಿರುವ ಮತ್ತೊಂದು ರಾಜ್ಯ ಆಂಧ್ರ ಪ್ರದೇಶ. ಆಂಧ್ರದಲ್ಲಿ ಈವರೆಗೂ 9834 ಜನರಿಗೆ ಕೊರೊನಾ ಅಂಟಿಕೊಂಡಿದೆ. ಬಹುಶಃ ಇಂದಿನ ವರದಿ ಬಳಿಕ ಆಂಧ್ರದಲ್ಲೂ ಕೊವಿಡ್ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಲಿದೆ.

ಟಾಪ್ ಐದು ರಾಜ್ಯಗಳಲ್ಲಿ ವಿವರ

ಟಾಪ್ ಐದು ರಾಜ್ಯಗಳಲ್ಲಿ ವಿವರ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೇಸ್ ವರದಿಯಾಗಿದೆ. ಬುಧವಾರದ ವರದಿ ಪ್ರಕಾರ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,39,010. ಈವರೆಗೂ 69,631 ಜನರು ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 66,602ಕ್ಕೆ ಏರಿದೆ. ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 64,603 ಜಿಗಿದಿದೆ. ಗುಜರಾತ್‌ನಲ್ಲಿ ಬುಧವಾರದ ವರದಿ ಪ್ರಕಾರ 28,371 ಕೇಸ್ ದಾಖಲಾಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು ಸೋಂಕಿನ ಸಂಖ್ಯೆ 18,893ಕ್ಕೆ ಏರಿದೆ.

20 ಸಾವಿರದ ಕಡೆಗೆ ಸಾಗುತ್ತಿರುವ ರಾಜ್ಯಗಳು

20 ಸಾವಿರದ ಕಡೆಗೆ ಸಾಗುತ್ತಿರುವ ರಾಜ್ಯಗಳು

ರಾಜಸ್ಥಾನ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಹರ್ಯಾಣ ರಾಜ್ಯಗಳಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರದ ಕಡೆ ಸಾಗುತ್ತಿದೆ. ರಾಜಸ್ಥಾನದಲ್ಲಿ 15809 ಕೇಸ್ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ 14,728 ಪ್ರಕರಣ, ಮಧ್ಯಪ್ರದೇಶದಲ್ಲಿ 12,261 ಕೇಸ್, ಹರ್ಯಾಣದಲ್ಲಿ 11,520 ಜನರಿಗೆ ಸೋಂಕು ದೃಢಪಟ್ಟಿದೆ.

ಹತ್ತು ಸಾವಿರಕ್ಕಿಂತ ಕಡಿಮೆ ಸೋಂಕು

ಹತ್ತು ಸಾವಿರಕ್ಕಿಂತ ಕಡಿಮೆ ಸೋಂಕು

ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಬುಧವಾರದ ವರದಿ ಬಳಿಕ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಲಿದೆ. ಈ ಎರಡು ರಾಜ್ಯಗಳನ್ನು ಬಿಟ್ಟರೆ ತೆಲಂಗಾಣದಲ್ಲಿ 9553 ಕೇಸ್ ವರದಿಯಾಗಿದೆ. ಬಿಹಾರದಲ್ಲಿ 8141 ಜನರಿಗೆ ಸೋಂಕು ಪತ್ತೆಯಾಗಿದೆ. ಜಮ್ಮು ಕಾಶ್ಮಿರದಲ್ಲಿ 6236 ಜನರಿಗೆ ಕೊರೊನಾ ಅಂಟಿಕೊಂಡಿದೆ. ಅಸ್ಸಾಂನಲ್ಲಿ 6056 ಕೇಸ್ ದಾಖಲಾಗಿದೆ. ಒಡಿಶಾದಲ್ಲಿ 5752 ಜನರಿಗೆ ಮಹಾಮಾರಿ ವಕ್ಕರಿಸಿದೆ. ಪಂಜಾಬ್‌ನಲ್ಲಿ 4397 ಕೊರೊನಾ ವೈರಸ್ ದಾಖಲಾಗಿದೆ.

English summary
Karnataka and Andhra pradesh states are very close to reach ten thousand coronavirus cases. already 9 states cross the 10 thousand mark in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X