ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯ್ ದಿವಸ್: ಕಾರ್ಗಿಲ್ ಯುದ್ಧದ ಆ ರೋಚಕ ಕ್ಷಣಕ್ಕೆ 19 ವರ್ಷ

|
Google Oneindia Kannada News

'ಆಪರೇಷನ್ ವಿಜಯ' ಎಂಬ ಹೆಸರು ಕೇಳಿದರೆ ಭಾರತೀಯರ ಮೈ ರೋಮಾಂಚನಗೊಳ್ಳುತ್ತದೆ. ಶತ್ರು ರಾಷ್ಟ್ರದ ಸೈನಿಕರನ್ನು ವೀರಾವೇಶದಿಂದ ಹಿಮ್ಮೆಟ್ಟಿಸಿದ ಕಾರ್ಗಿಲ್ ಯುದ್ಧದ ಸವಿನೆನಪಿಗಾಗಿ ಪ್ರತಿವರ್ಷ ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸವನ್ನಾಗಿ ಆಚರಿಸಲಾಗುತ್ತದೆ.

1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ 'ಆಪರೇಷನ್ ವಿಜಯ' ಎಂಬ ಕಾರ್ಯಾಚರಣೆಯ ಅಡಿಯಲ್ಲಿ ಭಾರತೀಯ ಯೋಧರು ಪಾಕಿಸ್ತಾನವನ್ನು ಬಗ್ಗುಬಡಿದಿದ್ದರು.

ಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆ

ಈ ಯುದ್ಧ ಮೇ ತಿಂಗಳಿನಿಂದ ಜುಲೈವರೆಗೆ ಸುಮಾರು 60 ದಿನಗಳ ಕಾಲ ನಡೆದಿತ್ತು. ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಯೋಧರು ಹುತಾತ್ಮತರಾಗಿದ್ದರೆ, ಪಾಕಿಸ್ತಾನದ 1000 ಕ್ಕೂ ಹೆಚ್ಚು ಯೋಧರನ್ನು ಸದೆಬಡಿಯುವಲ್ಲಿ ಭಾರತ ಯಶಸ್ವಿಯಾಗಿತ್ತು.

ಕಾರ್ಗಿಲ್ ವಿಜಯ ದಿವಸ: ಟ್ವಿಟ್ಟರ್ ನಲ್ಲಿ ರೋಚಕ ದಿನದ ಮೆಲುಕುಕಾರ್ಗಿಲ್ ವಿಜಯ ದಿವಸ: ಟ್ವಿಟ್ಟರ್ ನಲ್ಲಿ ರೋಚಕ ದಿನದ ಮೆಲುಕು

ಕಾರ್ಗಿಲ್ ಯುದ್ಧ ಗೆದ್ದು ಈಗಾಗಲೇ 19 ವರ್ಷ ಕಳೆದಿದೆ. ಆದರೂ ಪ್ರತಿ ವರ್ಷ ಜುಲೈ 26 ರಂದು ಹುತಾತ್ಮ ಯೋಧರ ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಅವರ ತ್ಯಾಗಕ್ಕೆ, ಬಲಿದಾನಕ್ಕೆ ಕೃತಜ್ಞತೆ ಅರ್ಪಿಸುವ ಕೆಲಸ ನಡೆಯುತ್ತಿದೆ. ಕಾರ್ಗಿಲ್ ವಿಜಯ ದಿವಸದ ನಿಮಿತ್ತ ಹಲವು ದೇಶಭಕ್ತರು ಹುತಾತ್ಮ ಯೋಧರಿಗೆ ಟ್ವಿಟ್ಟರ್ ಮೂಲಕ ಶ್ರದ್ಧಾಂಜಲಿ, ಕೃತಜ್ಞತೆ ಅರ್ಪಿಸಿದ್ದಾರೆ.

ನಿಮಗಿದೋ ನನ್ನ ನಮನ

ಆಪರೇಶನ್ ವಿಜಯಕ್ಕಾಗಿ ದೇಶ ಸೇವೆ ಮಾಡಿದ ಎಲ್ಲಾ ಯೋಧರಿಗೂ ಈ ದೇಶ ಕೃತಜ್ಞವಾಗಿದೆ. ಭಾರತ ಸುಭದ್ರವಾಗಿದೆ ಮತ್ತು ಅದರ ಮೇಲೆ ದಾಳಿ ನಡೆಸಲು ಬರುವವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂಬುದನ್ನು ಸಾಬೀತುಪಡಿಸಿದ ನಮ್ಮ ವೀರ ಯೋಧರು ನಮ್ಮ ಹೆಮ್ಮೆ. ಅವರಿಗೆ ನಮ್ಮ ನಮನ ಎಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಸ್ಮರಿಸಿದ್ದಾರೆ ಪ್ರಧಾನಿ ಮೋದಿ.

ವೀರಯೋಧರಿಗೆ ಶ್ರದ್ಧಾಂಜಲಿ

ದೆಹಲಿಯ ಮಳೆಯಲ್ಲಿ ಇಂಡಿಯಾ ಗೇಟಿಗೆ ತೆರಳಿ, 1999 ರ ಕಾರ್ಗಿಲ್ ಯುದ್ಧದಲ್ಲಿ ಬಲಿದಾನ ಗೈದ ವೀರಯೋಧರಿಗೆ ನಮನ ಸಲ್ಲಿಸಿದ ಸೌಭಾಗ್ಯ ನನ್ನದು ಎಂದು ಟ್ವೀಟ್ ಮಾಡಿದ್ದಾರೆ ಸಂಸದ ರಾಜೀವ್ ಚಂದ್ರಶೇಖರ್

ಅವರ ನೆನಪು ಅಮರ

ಅವರು ನಮ್ಮ ಶತ್ರುಗಳನ್ನು ಅಳಿಸಿಹಾಕಿದರು. ಹಾಗೆಯೇ ನಮ್ಮ ದುಃಖವನ್ನೂ! ಅವರು ತಮ್ಮ ಈ ದಿನವನ್ನು ನಮ್ಮ ನಾಳೆಗಳಿಗಾಗಿ ತ್ಯಾಗ ಮಾಡಿದರು! ಅವರು ನಗುವನ್ನು ಧರಿಸಿಯೇ ತಮ್ಮ ಪ್ರಾಣ ನೀಡಿದರು. ಈ ವೀರಯೋಧರಿಗೆ ನಮ್ಮ ದೊಡ್ಡ ನಮನ. ಅವರು ಮಡಿದಿರಬಹುದು, ಆದರೆ ಮರೆತುಹೋಗಿಲ್ಲ. ಅವರ ನೆನಪು ಅಮರ ಎಂದಿದ್ದಾರೆ ಆಕಾಶ್ ಬಿಸ್ವಾಲ್.

ಪಾಕ್ ವಿರುದ್ಧ ಭಾರತದ ಗೆಲುವಿನ ದ್ಯೋತಕ

ಕಾರ್ಗಿಲ್ ವಿಜಯ ದಿವಸದ 19ನೇ ವರ್ಷಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ದ್ಯೋತಕವಾಗಿ ಈ ದಿನ ಆಚರಿಸಲಾಗುತ್ತದೆ. ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಈ ದಿನ ಸ್ಮರಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ ಅರ್ಚನಾ ರೆಡ್ಡಿ.

ನಿಮಗಿದೋ ನಮ್ಮ ನಮನ

ಕಾರ್ಗಿಲ್ ವಿಜಯ ದಿವಸದಂದು ನಮ್ಮ ಯೋಧರ ದೈರ್ಯ ಮತ್ತು ತ್ಯಾಗವನ್ನು ಸ್ಮರಿಸೋಣ. ನಮ್ಮ ದೇಶದ ಪರಮಾಧಿಕಾರವನ್ನು ಉಳಿಸಲು ನೀವು ಮಾಡಿದ ತ್ಯಾಗ ಮತ್ತು ನಿಮ್ಮ ಧೈರ್ಯಕ್ಕೆ ಇಡೀ ದೇಶವೂ ನಮನ ಸಲ್ಲಿಸುತ್ತದೆ ಎಂದಿದ್ದಾರೆ ಹಿಮಾಂಶು ಕಪಾಡಿಯಾ.

ನಿಮ್ಮ ನಿಜವಾದ ಹೀರೋಗಳಿಗೆ ಸಲಾಂ!

1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಅಮೋಘ ಜಯ ತಂದುಕೊಟ್ಟ ಭಾರತೀಯ ಸೈನಿಕರ ಧೈರ್ಯ, ಶೌರ್ಯ ತ್ಯಾಗಕ್ಕೆ ನಮನ. ಅವರೇ ನಮ್ಮ ನಿಜವಾದ ಹೀರೋಗಳು ಎಂದಿದ್ದಾರೆ ರಾಹುಲ್ ಜಾಮ್ವಾಲ್.

ಅವರು ನಮ್ಮ ಹೃದಯದಲ್ಲಿದ್ದಾರೆ!

ಕಾರ್ಗಿಲ್ ಹೀರೋಗಳನ್ನು ಭಾರತ ಮರೆಯುವುದಕ್ಕೆ ಸಾಧಯವೇ ಇಲ್ಲ. ಕಾರ್ಗಿಲ್ ವಿಜಯ ದಿವಸದ ನಿಜವಾದ ಹೀರೋಗಳಿಗೆ ನಮ್ಮ ನಮನ. ಅವರು ನಮ್ಮೆಲ್ಲ ಭಾರತೀಯ ಹೃದಯದಲ್ಲಿ ನೆಲೆಸಿದ್ದಾರೆ, ಅವರು ಭಾರತೀಯ ಸೈನಿಕರು ಎಂದಿದ್ದಾರೆ ಅಶುತೋಷ್ ಮಟೆ.

English summary
Kargil Vijaya Diwas named after the success of Operation Vijay. On this day, 26 July 1999, India successfully took command of the high outposts which had been lost to Pakistani intruders. Today is the 19th anniversary of Kargil Vijay Diwas. Here are twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X