ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17ವರ್ಷದ ಹಿಂದಿನ ಯುದ್ದದ ಮೆಲುಕು: ಪಾಕಿಗೆ ಬುದ್ದಿ ಕಲಿಸಿದ ಯೋಧರು

ಹದಿನೇಳು ವರ್ಷದ ಹಿಂದೆ ನಡೆದ ಕಾರ್ಗಿಲ್ ಯುದ್ದದ ಕುರಿತಾದ ಲೇಖನ - 2. ಯೋಧರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನೆಗೆ ಹಿಂದಿರುಗಿಸುವಂತಹ ಅಮಾನವೀಯ ಕಾರ್ಯ ನಡೆಸಿದ್ದ ಪಾಕ್.

By ಶಿಶಿರ್ ಅಂಗಡಿ
|
Google Oneindia Kannada News

ನಮ್ಮವರದೇ ಆದ ಎಷ್ಟೊ ಬಂಕರುಗಳು ಅವರ ಸಹಾಯಕ್ಕೆ ಬಂದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕಿಸ್ತಾನ, ಭಾರತೀಯರ ಮೇಲೆ ದಾಳಿ ಮಾಡಲು ಸನ್ನದ್ಧವಾಗಿತ್ತು. ಅಲ್ಲಿಯವರೆಗೂ ಇದರ ಅರಿವೇ ಇಲ್ಲದ ಭಾರತೀಯ ಸೇನೆಗೆ ತಶಿ ನಂಗ್ಯಾಲ್ ಎಂಬ ಕುರಿ ಕಾಯುವವನ ಮೂಲಕ ಪಾಕ್ ಸೇನೆ ಬೆಟ್ಟದ ಮೇಲೆ ಸ್ಥಾಪಿತವಾಗಿರುವ ಮಾಹಿತಿ ತಿಳಿಯಿತು.

ತಕ್ಷಣವೇ ಅಂದರೆ ಮೇ ಎರಡನೇ ವಾರದಲ್ಲಿ ಕ್ಯಾ.ಸೌರಭ್ ಕಾಲಿಯಾ ನೇತೃತ್ವದಲ್ಲಿ ಐದು ಯೋಧರ ತಂಡ ಅಲ್ಲಿನ ಪರಿಸ್ಥಿತಿ ಅವಲೋಕನ ಮತ್ತು ವರದಿ‌ ನೀಡುವುದಕ್ಕಾಗಿ ಆ ಪ್ರದೇಶಕ್ಕೆ ತೆರಳಲು ಸೇನೆಯಿಂದ ನಿಯೋಜಿಸಲ್ಪಟ್ಟರು. ಅವರಿಗೂ ಶತ್ರು ಪಡೆಯ ಗಾತ್ರ ಮತ್ತು ಶಕ್ತಿಯ ಕುರಿತು ಸ್ವಲ್ಪವೂ ಅಂದಾಜಿರಲಿಲ್ಲ. ಮುಂದಾಲೋಚನೆಯಿಲ್ಲದೆ ಗುಡ್ಡ ಹತ್ತಿದ ನಮ್ಮ ವೀರ ಯೋಧರು ವೈರಿಗಳ ಬಳಿ ಸಿಲುಕಿ ಕ್ರೌರ್ಯಕ್ಕೆ ಒಳಗಾದರು.

ಕಾರ್ಗಿಲ್ ಯೋಧರಿಗೆ ಪ್ರಧಾನಿ ಮೋದಿ ಗೌರವ ನಮನಕಾರ್ಗಿಲ್ ಯೋಧರಿಗೆ ಪ್ರಧಾನಿ ಮೋದಿ ಗೌರವ ನಮನ

ಅಷ್ಟೇ ಅಲ್ಲ ಅವರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಭಾರತೀಯ ಸೇನೆಗೆ ಹಿಂದಿರುಗಿಸುವಂತಹ ಅಮಾನವೀಯ ಕಾರ್ಯವನ್ನು ಪಾಕಿಗಳು ಎಸಗಿದರು. ಆಗಲೇ ನಮ್ಮವರಿಗೆ ಪಾಕ್ ಅತಿಕ್ರಮಣದ ತೀವ್ರತೆ ಅರಿವಿಗೆ ಬಂದಿದ್ದು. ಪಾಕಿಗಳು ಸುಮಾರು 160 ಕಿಲೋಮೀಟರುಗಳಷ್ಟು ಪ್ರದೇಶವನ್ನು ಆಕ್ರಮಿಸಿದ್ದರು.

Kargil Vijay Diwas: All you need to know, article - Part 2

ತಕ್ಷಣವೇ ಕಾರ್ಯಪ್ರವೃತ್ತರಾದ ಅಂದಿನ NDA ಸರ್ಕಾರದ ನೇತೃತ್ವ ವಹಿಸಿದ್ದ ಪ್ರಧಾನಿ ವಾಜಪೇಯಿ ಅವರು 'ಆಪರೇಷನ್ ವಿಜಯ್' ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸುವಂತೆ ಸೈನ್ಯಕ್ಕೆ ಸೂಚಿಸಿದರು. ಸೇನಾ ಚಟುವಟಿಕೆಗಳು ವೇಗ ಪಡೆದುಕೊಂಡವು. ಆದರೆ ಅಂತಹ ಪ್ರತಿಕೂಲ ವಾತಾವರಣದಲ್ಲಿ ಹೋರಾಟ ಮಾಡಲು ನನ್ನ ದೇಶದ ಸೈನಿಕರ ಬಳಿ ಶಸ್ತ್ರಾಸ್ತ್ರಗಳೇ ಸರಿಯಾಗಿ ಇರಲಿಲ್ಲ.

ಅಷ್ಟೇ ಏಕೆ, ಮಂಜಿನಿಂದ ರಕ್ಷಣೆ ಕೊಡುವ ದಿರಿಸುಗಳಾಗಲಿ, ಬೂಟು,ಕನ್ನಡಕಗಳಾಗಲಿ ಇಲ್ಲವೇ ಇಲ್ಲ. ಕೆಲವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಬಿಡಿ ಸುಮ್ಮನೆ ಏಕೆ ರಗಳೆ ಎಂದು ರಗಳೆ ಮಾಡಿದರು. ತಮ್ಮದೇ ದೇಶದ ಕೊರಳನ್ನು ಪಕ್ಕದವರು ಹಿಸುಕಲು ಪ್ರಯತ್ನಿಸುತ್ತಿದ್ದಾರೆಂಬುದನ್ನು ತಿಳಿದುಕೊಳ್ಳದೇ ವಿರೋಧ ಪಕ್ಷದವರು ಸಹಜವಾಗಿ ಆಡಳಿತ ಪಕ್ಷಗಳ ಮೇಲೆ ಗೂಬೆ ಕೂರಿಸಿದವು.

ಹಲವು ಮದ್ದುಗುಂಡುಗಳು ನಿಷ್ಕ್ರಿಯವಾಗಿದ್ದವು. ಆದರೂ ನಮ್ಮ ಸೈನಿಕರು ಎದೆ ಗುಂದಲಿಲ್ಲ. ತಾಯಿ ಭಾರತಿಯ ರಕ್ಷಣೆಯೊಂದೇ ಅವರ ಮನದಲ್ಲಿದ್ದುದು. ಪರಿಸ್ಥಿತಿ ಹೇಗಿತ್ತೆಂದರೆ ಇರುವಷ್ಟು ಮದ್ದುಗುಂಡುಗಳನ್ನೇ ಎಲ್ಲ ಪ್ರದೇಶಗಳಿಗೆ ಹೊಂದಿಸಿ ಹಂಚಿಕೊಳ್ಳಬೇಕಿತ್ತು. ಅಂತೂ ಕಾರ್ಯಾಚರಣೆ ಪ್ರಾರಂಭವಾಯಿತು.

Kargil Vijay Diwas: All you need to know, article - Part 2

ಮೊದಲಿಗೆ ತೊಲೊಲಿಂಗ್ ಬೆಟ್ಟವನ್ನು ವಶಪಡಿಸಿಕೊಳ್ಳಬೇಕಿತ್ತು. ನಮ್ಮ ಸೈನಿಕರು ಇದ್ದಿದ್ದು ಬೆಟ್ಟದ ಬುಡದಲ್ಲಿ. ಬೋಫೋರ್ಸುಗಳನ್ನು ನಿಲ್ಲಿಸಿಕೊಂಡು ಸಜ್ಜಾದರು. ಮೇಲೆ ಕುಳಿತ ಶತ್ರು ಪಾಳಯದವರಿಗೆ ಇದೆಲ್ಲವೂ ಕಾಣುತ್ತಿತ್ತು. ಅತ್ತ ಕಡೆಯಿಂದ ಶೆಲ್ ಗಳ ಮೂಲಕ ಮಾರಣಾಂತಿಕ ದಾಳಿ ನಡೆಯುತ್ತಲೇ ಇದೆ. ಉಹುಂ ನಮ್ಮ ಸೈನಿಕ ಧೃತಿಗೆಡಲಿಲ್ಲ.

ಟೋಲೋಲಿಂಗ್ ಯಾಕಿಷ್ಟು ಮಹತ್ವದ್ದು ಎಂದರೆ, ಇದು ರಾ.ಹೆ. 1ರ ಶಿಖರದ ಮೇಲೆ ಇದೆ. ಇಲ್ಲಿ ಕುಳಿತರೆ ಸುಮಾರು 200 ಕಿಮೀ ವ್ಯಾಪ್ತಿಯನ್ನು ಕಂಟ್ರೋಲ್ ಮಾಡವಂತಹ ಸ್ಥಳ. ಆ ಪ್ರದೇಶದಲ್ಲಿ ಅದೊಂದೇ ರಸ್ತೆ ಇದ್ದ ಕಾರಣ, ಆ ದಾರಿಯಲ್ಲಿ ಹೋದ ಸೈನಿಕರೆಲ್ಲರೂ ಶವವಾಗಿ ಮರಳಿದ್ದರು.

ಹಾಗಾಗಿ ಸೈನ್ಯ ಅಲ್ಲಿಂದ ಮುಂದುವರೆಯಬೇಕಿದ್ದರೆ, ತೋಲೊಲಿಂಗ್ ಅನ್ನು ವಶಪಡಿಸಿಕೊಳ್ಳುವುದು ಅನಿವಾರ್ಯತೆಯಾಯಿತು. ನಮ್ಮ ಸೇನೆಯ ಕಾರ್ಯಾಚರಣೆಗೆ ವಾಯುಸೇನೆಯೂ ಅದ್ಭುತವಾಗಿ ಬೆಂಬಲಿಸಿತು. ಆಪರೇಷನ್ ಸಫೇದ್ ಸಾಗರ್ ಹೆಸರಿನಲ್ಲಿ ವಾಯುಪಡೆ ಹಾರುತ್ತಾ ಗುಂಡುಗಳ ಮಳೆಸುರಿಸಿತು. 2 ರಜಪೂತಾನಾ ರೈಫಲ್ಸ್ ಕೊನೆಗೂ ಜೂನ್ 12ರಂದು ತೊಲೋಲಿಂಗನ್ನು ಮರು ವಶಪಡಿಸಿಕೊಂಡಿತು.

ನಂತರದ್ದು ಟೈಗರ್ ಹಿಲ್ - ಪಾಯಿಂಟ್ 4150. ಇಲ್ಲಿ ಎರಡೂ ಪಡೆ ಸಾಕಷ್ಟು ಸಾವು ನೋವು ಅನುಭವಿಸಿತು. ಅಂತಿಮವಾಗಿ ಟೈಗರ್ ಹಿಲ್ ಭಾರತದ ಕೈವಶವಾಗುವ ವೇಳೆ ಭಾರತೀಯ ಸೈನ್ಯ ಹತ್ತು ಪಾಕಿ ಸೈನಿಕರ ಬಲಿ ಪಡೆದಿತ್ತು.
"ನಮ್ಮ ಸೇನಾಪಡೆಗಳ ಮೇಲೆ ನನಗೆ ಪೂರ್ತಿ ವಿಶ್ವಾಸವಿದೆ. ಮುಂದಿನ ಪುಟ ಕ್ಲಿಕ್ಕಿಸಿ..

English summary
It was on this day 17 years ago that the Indian Army recaptured all the Indian posts in Kargil that had been occupied by Pakistan's army. Since then, July 26 has been observed annually to commemorate the sacrifices made by soldiers in this war. Article by Shishir Angadi - Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X