ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿ‌ಲ್‌ ವಿಶೇಷ: 'ಯುದ್ಧ ಮ್ಯೂಸಿಯಂ' ಚಿತ್ರಗಳಲ್ಲಿ

By ರೀಚಾ ಬಾಜಪೈ , ಕಾರ್ಗಿ‌ಲ್‌ನಿಂದ
|
Google Oneindia Kannada News

ದ್ರಾಸ್ (ಜಮ್ಮು ಮತ್ತು ಕಾಶ್ಮೀರ), ಜು. 24: ಪಾಕಿಸ್ತಾನದ ಮೇಲೆ 1999ರಲ್ಲಿ ಭಾರತ ದಿಗ್ವಿಜಯ ಸಾಧಿಸಿದ ಸವಿನೆನಪಿಗಾಗಿ ಜುಲೈ 26ರಂದು ಪ್ರತಿವರ್ಷ 'ಕಾರ್ಗಿಲ್ ವಿಜಯ ದಿವಸ'ವನ್ನು ಆಚರಿಸಲಾಗುತ್ತಿದೆ. 'ಆಪರೇಷನ್ ವಿಜಯ್'ನ 15ನೇ ವಾರ್ಷಿಕೋತ್ಸವದ ವಿಶೇಷ ಲೇಖನಗಳನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್ ವೀರರ ಕಥೆಗಳನ್ನು ಕಾರ್ಗಿಲ್‌ನಿಂದಲೇ ಒನ್ಇಂಡಿಯಾ ನಿಮಗೆ ನೀಡಲಿದೆ.

ಕಾರ್ಗಿಲ್ ಯುದ್ಧ ನಡೆದ ನೆಲ ಈಗಿನವರೆಗೆ ಕೇವಲ ದಿನಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿತ್ತು. ಗ್ರೌಂಡ್ ಜೀರೋ ನೆಲವನ್ನು ಮೆಟ್ಟಿದ ಮೊದಲ ಆನ್ ಲೈನ್ ಪೋರ್ಟಲ್ ಒನ್ಇಂಡಿಯಾ. ಈ ವಿಶೇಷ ಸಂದರ್ಭದಲ್ಲಿ ವಿಶೇಷ ಲೇಖನಗಳನ್ನು ಒನ್‌ಇಂಡಿಯಾದ ಪ್ರತಿನಿಧಿ ರೀಚಾ ಬಾಜಪೈ ಬರೆಯುತ್ತಿದ್ದು ಈ ಸರಣಿಯ ಲೇಖನ ಇಲ್ಲಿದೆ.

ಕಾರ್ಗಿಲ್‌ ಯಶೋಗಾಥೆಯನ್ನು ತಿಳಿಸುವುದಕ್ಕಾಗಿ ಭಾರತೀಯ ಸೇನೆ ಮ್ಯೂಸಿಯಂ ಒಂದನ್ನು ತೆರೆದಿದೆ. ಹಾಲ್ ಆಫ್ ಫೇಮ್ ಹೆಸರಿನ ಮ್ಯೂಸಿಯಂ ಲೇಹ್‌ನಿಂದ ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುವ ಎನ್‌ಎಚ್-1ರಲ್ಲಿ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಈ ಮ್ಯೂಸಿಯಂಗೆ ಸಂಬಂಧಿಸಿದ ವಿಶೇಷ ಮಾಹಿತಿ ಮುಂದಿನ ಸ್ಲೈಡ್‌ನಲ್ಲಿ ನೀಡಲಾಗಿದೆ.

ಕಾರ್ಗಿಲ್ ವಿಜಯ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ: ಕಾರ್ಗಿಲ್ ವಿಜಯ ದಿವಸ

 ಕಾರ್ಗಿ‌ಲ್‌‌ ಹೀರೋಗಳು:

ಕಾರ್ಗಿ‌ಲ್‌‌ ಹೀರೋಗಳು:

ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆ ಕಾರ್ಗಿ‌ಲ್‌‌ ಯುದ್ದದಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ 14 ವೀರ ಸೈನಿಕರ ಭಾವಚಿತ್ರ ಕಾಣಸಿಗುತ್ತದೆ. ಈ ಮೂಲಕ ಭಾರತೀಯ ಸೇನೆ, ಅವರು ನಮ್ಮಿಂದ ದೂರವಾಗಿದ್ದರೂ, ಸೈನಿಕರ ಭಾವಚಿತ್ರಗಳನ್ನು ಹಾಕಿ ಅವರ ತ್ಯಾಗವನ್ನು ಯಾವಾಗಲೂ ಸ್ಮರಿಸುತ್ತಿದೆ.

ವಾಯು ಸೇನೆಯ ಗ್ರಾನೈಟ್‌ ಬಾಂಬ್‌ ಕವರ್‌:

ವಾಯು ಸೇನೆಯ ಗ್ರಾನೈಟ್‌ ಬಾಂಬ್‌ ಕವರ್‌:

ಪಾಕಿಸ್ತಾನ ವಿರುದ್ಧ ಭಾರತೀಯ ವಾಯುಸೇನೆ ಬಳಸಿದ ಗ್ರಾನೈಟ್‌ ಬಾಂಬ್‌ ಕವರ್‌. ಪಾಕ್‌ ವಿರುದ್ಧ 'ಆಪರೇಷನ್ ವಿಜಯ್' ಹೆಸರಿನ ಭಾರತೀಯ ಸೇನೆಯ ಕಾರ್ಯಾಚರಣೆ ನಡೆಸಿದ್ದರೆ, ಭಾರತೀಯ ವಾಯುಸೇನೆ 'ಆಪರೇಶನ್ ಸಫೇದ್ ಸಾಗರ್' ಹೆಸರಲ್ಲಿ ನಮ್ಮ ಭೂಸೇನೆಯ ಜೊತೆ ಕೈಜೋಡಿಸಿತು.

 ಮಿಗ್‌ 21 ಎಂಜಿನ್‌ ಕವರ್‌:

ಮಿಗ್‌ 21 ಎಂಜಿನ್‌ ಕವರ್‌:

ಪಾಕ್‌ ವಿರುದ್ಧ ಭಾರತೀಯ ವಾಯು ಸೇನೆ ದಾಳಿ ಆರಂಭಿಸಿದ ಮೊದಲ ದಿನವೇ ಅಪಘಾತಗೊಂಡ ವಿಮಾನ. ಮಿಗ್‌ 21 ವಿಮಾನದಲ್ಲಿ ತಾಂತ್ರಿಕ ದೋಷವಿರುವುದು ತಿಳಿಯುತ್ತಿದ್ದಂತೆ ಪೈಲಟ್‌ ನಚಿಕೇತ ಕೂಡಲೇ ಪ್ಯಾರಾಚೂಟಿನಿಂದ ಜಿಗಿದರೂ ಇಳಿದದ್ದು ಪಾಕ್‌ ಸೈನಿಕರು ಇರುವ ಜಾಗದಲ್ಲಿ. ನಚಿಕೇತ ಜೀವಂತವಾಗಿ ಸೆರೆ ಸಿಕ್ಕಿದರೂ ಒಂದು ವಾರದ ಸೆರೆವಾಸ ಬಳಿಕ ಪಾಕ್‌ ಸೇನೆ ಜು.3 ರಂದು ಬಿಡುಗಡೆ ಮಾಡಿತು.

 ಮೊದಲ ಯಶಸ್ವಿ: ಪಾಯಿಂಟ್‌ 5203 ಮರುವಶ

ಮೊದಲ ಯಶಸ್ವಿ: ಪಾಯಿಂಟ್‌ 5203 ಮರುವಶ

ಕಾರ್ಗಿಲ್‌‌ ಯುದ್ಧದಲ್ಲಿ ಪಾಕ್‌ ಸೇನೆ ಬಟಾಲಿಕ್‌ ಪ್ರಾಂತ್ಯದಲ್ಲಿರುವ ಪಾಯಿಂಟ್‌ 5203 ವಶಪಡಿಸಿಕೊಂಡಿತ್ತು. ಇದನ್ನು ಮರುವಶ ಪಡಿಸಲು ಭಾರತೀಯ ಸೇನೆ ಸಾಕಷ್ಟು ಪರಿಶ್ರಮ ಪಟ್ಟಿತ್ತು. ಕೊನೆಗೆ ಯುದ್ದ ಆರಂಭವಾದ 41ನೇ ದಿನಭಾರತೀಯ ಸೇನೆ ಪಾಯಿಂಟ್‌ 5203 ಮರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

 ಎರಡನೇ ಯಶಸ್ವಿ: ಜುಬರ್ ಹಿಲ್ಸ್‌ ಮರುವಶ

ಎರಡನೇ ಯಶಸ್ವಿ: ಜುಬರ್ ಹಿಲ್ಸ್‌ ಮರುವಶ

ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿಯಿರುವ ಜುಬರ್ ಹಿಲ್ಸ್‌ನ್ನು ಪಾಕ್‌ ಸೇನೆಯಿಂದ ಮರುವಶ ಪಡೆದ್ದು ಭಾರತೀಯ ಸೇನೆಯ ಎರಡನೇ ಯಶಸ್ವಿ ಕಾರ್ಯಾಚರಣೆ.

14 ಸಾವಿರ ಅಡಿ ಎತ್ತರದಲ್ಲಿರುವ ಈ ಪ್ರದೇಶವನ್ನು ಬಿಹಾರ ರೆಜಿಮೆಂಟ್‌ನ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, Garhwal ರೈಫಲ್ಸ್‌ನ ಕ್ಯಾ.ಗೂಗಿ ನೇತೃತ್ವದ ಸೇನೆ ಮರು ವಶಪಡೆಯುವಲ್ಲಿ ಯಶಸ್ವಿಯಾದರೂ, ಇವರೊಂದಿಗೆ 22 ಜನ ಸೈನಿಕರು ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದರು. ದಾಳಿ ವೇಳೆ ಪಾಕ್‌ನ 25 ಸೈನಿಕರನ್ನು ಭಾರತೀಯ ಸೇನೆ ಕೊಂದು ಹಾಕಿತು.

ಮಿಗ್‌ 21 ಎಂಜಿನ್‌ ಕವರ್‌:

ಮಿಗ್‌ 21 ಎಂಜಿನ್‌ ಕವರ್‌:

ಫ್ಲೈಟ್‌ ಲೆಫ್ಟಿನೆಂಟ್‌ ನಚಿಕೇತ ಹಾರಿಸಿದ್ದ ಮಿಗ್‌ 21 ಯುದ್ದ ವಿಮಾನದ ಎಂಜಿನ್‌ ಕವರ್‌. ಈ ವಿಮಾನ ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕಿಡಾಗಿತ್ತು.

 ಪಾಕಿಸ್ತಾನದ ನಾಲ್ಕು ಕ್ಷಿಪಣಿಗಳು:

ಪಾಕಿಸ್ತಾನದ ನಾಲ್ಕು ಕ್ಷಿಪಣಿಗಳು:

ಕಾರ್ಗಿ‌ಲ್‌ ಯುದ್ದದ ಸಂದರ್ಭದಲ್ಲಿ ಪಾಕ್‌ ಸೇನೆ 4 ಕ್ಷಿಪಣಿ ಉಡಾಯಿಸಿ ಭಾರತೀಯ ಸೇನೆ ಮೇಲೆ ದಾಳಿ ಮಾಡಿತ್ತು. ಈ ನಾಲ್ಕು ಕ್ಷಿಪಣಿಗಳನ್ನು ಈ ಮ್ಯೂಸಿಯಂನಲ್ಲಿ ಇಡಲಾಗಿದೆ.

English summary
Kargil Special: War Museum Photo Gallery Batalik is a region in Ladakh where the 'Operation Safed Sagar' was launched during the 1999 Kargil War. Around 30 kilometres away from the Batalik Sector, there is a Kargil War Museum, that has preserved all the important facts related to the 1999 Kargil War.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X