ಆಧಾರ್ ಇಲ್ಲದೆ ಅಸುನೀಗಿದ ಕಾರ್ಗಿಲ್ ಹುತಾತ್ಮನ ಪತ್ನಿ

Posted By:
Subscribe to Oneindia Kannada

ರೋಹ್ಟಕ್, ಡಿಸೆಂಬರ್ 30 : ಆಧಾರ್ ಕಾರ್ಡ್ ನೀಡಲಿಲ್ಲ ಎಂಬ ಕಾರಣಕ್ಕೆ, ಆಸ್ಪತ್ರೆಗೆ ದಾಖಲಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಕಾರ್ಗಿಲ್ ಯೋಧನ ಪತ್ನಿಯೊಬ್ಬರು ಅಸುನೀಗಿದ ಹೃದಯವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.

ಆಸ್ತಿ ಜತೆ ಆಧಾರ್ ಲಿಂಕ್, ಸಂಸತ್ತಿನಲ್ಲಿ ಸತ್ಯ ಬಿಚ್ಚಿಟ್ಟ ಸರ್ಕಾರ

ಈ ಘಟನೆ, ಎಲ್ಲ ಸೇವೆಗಳಿಗೂ ಆಧಾರ್ ಅಗತ್ಯವೆ ಎಂಬ ಚರ್ಚೆಗೆ ಮತ್ತೆ ನಾಂದಿ ಹಾಡಿದೆ. ತುರ್ತಾಗಿ ಆಸ್ಪತ್ರೆಗೆ ದಾಖಲಿಸಬೇಕಾದಂಥ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕೇಳುವ ಅಗತ್ಯವಿತ್ತೆ ಎಂಬ ಜಿಜ್ಞಾಸೆಗೂ ಈ ಘಟನೆ ಕಾರಣವಾಗಿದೆ.

Kargil martyrs wife dies due to unavoilability of Aadhaar

ಹರ್ಯಾಣ ರಾಜ್ಯದ ಸೋನಿಪತ್ ನ ಖಾಸಗಿ ಟ್ಯುಲಿಪ್ ಆಸ್ಪತ್ರೆ 55 ವರ್ಷದ ಶಕುಂತಲಾ ದೇವಿಯವರು ಅಸುನೀಗಿರುವ ದುರ್ದೈವಿ. ಅವರು ಗಂಟಲು ಕ್ಯಾನ್ಸರ್ ಮತ್ತು ಹೃದಯಬೇನೆಯಿಂದ ಬಳಲುತ್ತಿದ್ದರು.

ಆಧಾರ್ ಜೋಡಣೆ ಕುರಿತು ಸುಪ್ರೀಂ ಮಧ್ಯಂತರ ಆದೇಶ: ಮಾರ್ಚ್ 31 ಕೊನೇ ದಿನ

ಪಾಕಿಸ್ತಾನದ ವಿರುದ್ಧ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿ, 8ನೇ ಜಾಟ್ ರೆಜಿಮೆಂಟ್ ನಲ್ಲಿದ್ದ ಹವಾಲ್ದಾರ್ ಲಕ್ಷ್ಮಣ್ ದಾಸ್ ಅವರು ಗುಂಡು ತಗುಲಿ 1999ರ ಜೂನ್ 9ರಂದು ಹುತಾತ್ಮರಾಗಿದ್ದರು. ಅವರ ಪತ್ನಿಯೇ ಶಕುಂತಲಾ ದೇವಿಯವರು.

ಅವರ ಆರೋಗ್ಯ ವಿಷಮಿಸಿದ್ದರಿಂದ ಮೊದಲಿಗೆ ಅವರನ್ನು ಮಾಜಿ ಯೋಧರಿಗಾಗಿ ಇರುವ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ಅವರನ್ನು ಟ್ಯುಲಿಪ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಶಿಫಾರಸು ಮಾಡಲಾಗಿದೆ. ಟ್ಯುಲಿಪ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವ ಮೊದಲು ಆಧಾರ್ ಮೂಲಪ್ರತಿ ಕೇಳಿದ್ದಾರೆ.

ಕುಷ್ಠರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್!

ಶಕುಂತಲಾ ದೇವಿ ಅವರ ಬಳಿ ಆಧಾರ್ ನ ಪ್ರತಿ ಇದ್ದರೂ ಅದನ್ನು ಆಸ್ಪತ್ರೆಯವರು ಸ್ವೀಕರಿಸಿಲ್ಲ ಎಂದು ಶಕುಂತಲಾ ದೇವಿಯವರ ಮಗ ಪವನ್ ಕುಮಾರ್ ಬಾಲ್ಯಾನ್ ಅವರು ದೂರಿದ್ದಾರೆ. ಮೂಲ ಆಧಾರ್ ಕಾರ್ಡ್ ತನ್ನಿ ಅಥವಾ ಇಲ್ಲಿಂದ ತೊಗಲಿ ಎಂದು ಆಸ್ಪತ್ರೆಯ ಅಧಿಕಾರಿ ಹೇಳಿದ್ದಾರೆ ಎಂದು ದೂರಲಾಗಿದೆ.

90 ನಿಮಿಷಗಳ ವಾಗ್ವಾದದ ನಂತರ ತೀವ್ರ ಹೃದಯಬೇನೆಯಿಂದ ನರಳುತ್ತಿದ್ದ, ಅಳುತ್ತಿದ್ದ ಶಕುಂತಲಾ ಅವರನ್ನು ಮತ್ತೆ ಮಾಜಿ ಯೋಧರಿಗಾಗಿ ಇರುವ ಸೇನಾ ಆಸ್ಪತ್ರೆಗೆ ಕರೆತರಲಾಗಿದೆ. ಅಷ್ಟರಲ್ಲಿ ಶಕುಂತಲಾ ದೇವಿಯವರ ಪ್ರಾಣಪಕ್ಷಿ ಹಾರಿಹೋಗಿದೆ.

ಆಸ್ಪತ್ರೆಯವರು ಈ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಶಕುಂತಲಾ ದೇವಿಯವರನ್ನು ಅಡ್ಮಿಟ್ ಮಾಡಿಕೊಳ್ಳಲು ಎಲ್ಲ ಸಿದ್ಧತೆ ನಡೆದಿತ್ತು. ಆಧಾರ್ ಮೂಲ ಪ್ರತಿಯನ್ನು ತರಲು ಅವರಿಗೆ ಹೇಳಿತ್ತಾದರೂ, ಅನಗತ್ಯವಾಗಿ ಜಗಳವಾಡಿ ಅವರು ರೋಗಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ನಮ್ಮ ಬಳಿ ಸಿಸಿಟಿವಿ ಫುಟೇಜ್ ಕೂಡ ಇದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅಭಿಮನ್ಯು ಕುಮಾರ್ ಸಮಜಾಯಿಷಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kargil martyrs wife dies as she was not admitted to private hospital in Sonipat in Haryana as they did not have original Aadhaar card. The Tulip private hospital has denied the allegations. The patient was suffering from heart problem and cancer.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ