• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಸಿಕೆ ಬಗ್ಗೆ ಜಾಗೃತಿ ಅಭಿಯಾನಕ್ಕೆ ನಟಿ ಕರೀನಾ ಕಪೂರ್ ರಾಯಭಾರಿ

|

ನವದೆಹಲಿ, ಫೆಬ್ರವರಿ 22: ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಮತ್ತು ಪ್ರತಿರಕ್ಷಣಾ ಅಭಿಯಾನ 'ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾ' ದ ಪ್ರಚಾರ ರಾಯಭಾರಿಯಾಗಿ ಖ್ಯಾತ ನಟಿ ಕರೀನಾ ಕಪೂರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ.

ನೆಟ್ವರ್ಕ್18 ಸಹಯೋಗದೊಂದಿಗೆ ಪ್ರಪಂಚದ ಅತಿದೊಡ್ಡ ಲಸಿಕೆ ತಯಾರಕರ ಪೈಕಿ ಒಂದಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಾರಂಭಿಸಿರುವ ಈ ಅಭಿಯಾನವು ಆರೋಗ್ಯಕರ ಭಾರತ ನಿರ್ಮಾಣಕ್ಕೆ ಬಾಲ್ಯದಲ್ಲೆ ರೋಗನಿರೋಧತೆಯ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ಒಂದು ದೃಢವಾದ ಜಾಲವನ್ನು ನಿರ್ಮಿಸುವತ್ತ ಗಮನಹರಿಸುತ್ತದೆ.

ಸಚಿತ್ರ ವರದಿ : 10 ಕೋಟಿ ಬಡವರಿಗೆ ಆಶಾಕಿರಣವಾದ 'ಮೋದಿ ಕೇರ್'

ಅಭಿಯಾನದ ಬಗ್ಗೆ ಮಾತನಾಡಿದ ಕರೀನಾ ಕಪೂರ್ ಖಾನ್, "ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾವು ಕುಟುಂಬಕ್ಕೆ ಲಸಿಕೆಯ ಮಹತ್ವವನ್ನು ತಿಳಿಸುತ್ತದೆ. ಇದು ಮಕ್ಕಳಿಗೆ ಆರೋಗ್ಯಕರ ಜೀವನವನ್ನು ಒದಗಿಸುವ ಅತ್ಯುತ್ತಮ ಪ್ರಯತ್ನವಾಗಿದೆ. ಓರ್ವ ತಾಯಿಯಾಗಿ ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನನ್ನ ಮಗುವನ್ನು ಅಪಾಯಕಾರಿ ರೋಗಗಳಿಂದ ರಕ್ಷಿಸುವುದನ್ನು ನಾನು ಗೌರವಿಸುತ್ತೇನೆ. ಲಭ್ಯತೆಯ ಕೊರತೆಯಿಂದ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಶಿಶು ಸಾವು ಸಂಭವಿಸುತ್ತವೆ.

ನಾವೆಲ್ಲರೂ ಬದಲಾವಣೆಗಾಗಿ ಒಂದಾಗಬೇಕು

ನಾವೆಲ್ಲರೂ ಬದಲಾವಣೆಗಾಗಿ ಒಂದಾಗಬೇಕು

ನಾವೆಲ್ಲರೂ ಬದಲಾವಣೆಗಾಗಿ ಒಂದಾಗಬೇಕು. ಈ ಕೆಲಸದಲ್ಲಿ ಕೈ ಜೋಡಿಸಲು ನಾನು ಉತ್ಸುಕಳಾಗಿದ್ದೇನೆ. ಅಧಾರ್ ಮತ್ತು ನತಾಶಾ ಪೂನವಾಲ್ಲರ ಸೆರಮ್ ಇನ್ಸ್ಟಿಟ್ಯೂಟ್ ಮತ್ತು ನೆಟ್ವರ್ಕ್ 18 ರೊಂದಿಗೆ ಈ ಪ್ರಯಾಣದ ಒಂದು ಭಾಗವಾಗಲು ಹೆಮ್ಮೆ ಪಡುತ್ತೇನೆ. ಈ ಆಂದೋಲನದ ಮೂಲಕ ನಾವು ಆರೋಗ್ಯಪೂರ್ಣ ಭಾರತ ನಿರ್ಮಾಣದ ಪ್ರತಿಯೊಬ್ಬ ಪೋಷಕರ ಮೇಲೂ ಪ್ರಭಾವ ಬೀರಲಿದೆ" ಎಂದು ಅಭಿಪ್ರಾಯಪಟ್ಟರು.

32% ಮಂದಿ ಲಸಿಕೆಯನ್ನೇ ಹಾಕಿಸಿಲ್ಲ

32% ಮಂದಿ ಲಸಿಕೆಯನ್ನೇ ಹಾಕಿಸಿಲ್ಲ

ಸಮಾಜದ ಬಡ ವರ್ಗದ ಜನರಿಗೆ ಚುಚ್ಚುಮದ್ದಿನ ಅಗತ್ಯವನ್ನು ಕರೀನಾ ತಿಳಿಸಿ ಕೊಡಲಿದ್ದಾರೆ. ಮಾರಣಾಂತಿಕ ರೋಗಗಳನ್ನು ನಿಭಾಯಿಸಲು ವ್ಯಾಕ್ಸಿನೇಷನ್ ಹೆಚ್ಚು ಸೂಕ್ತ ವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತವು ಪೋಲಿಯೊ ಮತ್ತು ಸ್ಮಾಲ್ ಪೋಕ್ಸ್ ಗಳನ್ನು ರಾಷ್ಟ್ರವ್ಯಾಪಿಯಾಗಿ ನಿರ್ಮೂಲನೆ ಮಾಡಿದೆ.

ಭವಿಷ್ಯದಲ್ಲಿ ಇತರ ರೋಗಗಳಿಗೂ ಇದು ಸಾಧ್ಯವಾಗಬೇಕು. ಭಾರತದಲ್ಲಿ ಇಂದಿಗೂ ಮಕ್ಕಳು ಮತ್ತು ತಾಯಂದಿರು ಮಾಸ್ಲೆಸ್, ಡಿಫ್ಥೇರಿಯಾ ಮುಂತಾದ ರೋಗಗಳನ್ನು ಲಸಿಕೆ ಮೂಲಕ ತಡೆಗಟ್ಟಲು ಸಹಕರಿಸುತ್ತಿಲ್ಲ. ಹೆಚ್ಚಿನ ಪ್ರಚಾರ ನೀಡಿದ್ದರೂ ಭಾರತದಲ್ಲಿ ಶೇ. 56 ರಷ್ಟು ಜನ ಲಸಿಕೆಯನ್ನು ಅಪೂರ್ಣವಾಗಿ ಹಾಕಿದ್ದರೆ 32% ಮಂದಿ ಲಸಿಕೆಯನ್ನೇ ಹಾಕಿಸಿಲ್ಲ.

ಮಲೆನಾಡಿಗರ ನಿದ್ದೆಕೆಡಿಸಿದ ಮಂಗನ ಕಾಯಿಲೆ: ಲಕ್ಷಣ ಮತ್ತು ಪರಿಹಾರಗಳು

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನವಲ್ಲಾ

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನವಲ್ಲಾ

ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನವಲ್ಲಾ ಅವರು, "ಸ್ವಾಸ್ತ್ ಇಮ್ಯೂನೈಸ್ಡ್ ಇಂಡಿಯಾವು ಸಂಪೂರ್ಣವಾಗಿ ರೋಗನಿರೋಧಕ ಭಾರತದ ಗುರಿಯೆಡೆಗೆ ಇಡುತ್ತಿರುವ ಪ್ರಮುಖ ಹೆಜ್ಜೆಯಾಗಿದೆ. ಅಭಿಯಾನದ ಮುಖ್ಯ ಗುರಿ ನಮ್ಮ ದೇಶದಲ್ಲಿ ವ್ಯಾಕ್ಸಿನೇಷನ್ ಮತ್ತು ಪ್ರತಿರಕ್ಷಣೆಯ ಬಗ್ಗೆ ಸಂವಹನದಲ್ಲಿರುವ ಸಮಸ್ಯೆಯನ್ನು ಬಗೆಹರಿಸುವುದು. ಶಿಶುಗಳು, ಮಕ್ಕಳು ಮತ್ತು ನಿರೀಕ್ಷಿತ ತಾಯಂದಿರಿಗೆ ಅಗತ್ಯವಿರುವ ಲಸಿಕೆಗಳನ್ನು ಹಾಕಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.

ಮಗುವಿನ ಬೆಳವಣಿಗೆಯ ಪ್ರಮುಖ ಅಂಶ

ಮಗುವಿನ ಬೆಳವಣಿಗೆಯ ಪ್ರಮುಖ ಅಂಶ

ಬಲವಾದ ವ್ಯಕ್ತಿತ್ವ ಮತ್ತು ಪರಿಪೂರ್ಣ ಮನಸ್ಸಿನೊಂದಿಗೆ ಪೋಷಕರಾಗಿರುವ ಕರೀನಾ ಕಪೂರ್ ಖಾನ್ ಅವರ ಬೆಂಬಲವು ನಮ್ಮೊಂದಿಗೆ ಇದೆ. ಬದಲಾವಣೆಯ ಭಾಗವಾಗಿ ಲಸಿಕೆಯನ್ನು ಮಗುವಿನ ಬೆಳವಣಿಗೆಯ ಪ್ರಮುಖ ಅಂಶವೆಂದು ಅರ್ಥಮಾಡಿಕೊಳ್ಳಲು ಮತ್ತು ಜನರನ್ನು ಪ್ರಭಾವಿಸಲು ಅವರು ಸಹಾಯ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ " ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nation wide vaccination and immunization campaign -Swasth Immunised India launched. Acclaimed actress Kareena Kapoor Khan has been announced as the campaign ambassador, the campaign will focus on building a robust network to spread awareness regarding the need of childhood immunisation leading to a healthier India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more