ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಮಧ್ಯಮ ತೀವ್ರತೆಯ ಭೂಕಂಪ, ಜೀವ ಹಾನಿ ಇಲ್ಲ

By Manjunatha
|
Google Oneindia Kannada News

ಜಮ್ಮು ಕಾಶ್ಮೀರ, ಡಿಸೆಂಬರ್ 07 : ಗುರುವಾರ (ಡಿಸೆಂಬರ್ 07) ಮುಂಜಾನೆ ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿದೆ. ಮಧ್ಯಮ ತೀವ್ರತೆ ಭೂಕಂಪದ ಇದಾಗಿದ್ದು, ರಿಕ್ಟರ್ ಮಾಪನದಲ್ಲಿ 5.4 ತೀರ್ವತೆ ದಾಖಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಭೂಕಂಪರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಭೂಕಂಪ

ಬೆಳಿಗ್ಗೆ 4.53 ಗಂಟೆಗೆ ಸರಿಯಾಗಿ ಭೂಕಂಪ ಸಂಭವಿಸಿದ್ದು, ಜಮ್ಮು ಕಾಶ್ಮೀರ್ ಕ್ಸಿಂಗ್‌ಜಿಂಗ್ ಗಡಿ ಭಾಗ ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ.

Karavara After Uttarkhand, Delhi, 5.4 magnitude earthquake jolts Jammu and Kashmir

ಕಾಶ್ಮೀರ ಕಣಿವೆಯು ಭೂಕಂಪನ ತಡೆದುಕೊಳ್ಳುವ ಪ್ರತಿರೋಧತೆಯನ್ನು ಕಡಿಮೆ ಹೊಂದಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ. ಇನ್ನೂ ಹೆಚ್ಚಿನ ಪ್ರಮಾಣದ ಭೂಕಂಪನವಾಗಿದ್ದರೆ ಕಾಶ್ಮೀರಕ್ಕೆ ಹೆಚ್ಚಿನ ಹಾನಿ ಆಗುವ ಸಾಧ್ಯತೆ ಇತ್ತು ಎಂದು ಅವರು ಅಂದಾಜಿಸಿದ್ದಾರೆ. ಆದರೆ ಮಧ್ಯಮ ತೀವ್ರತೆಯ ಭೂಕಂಪನವಾದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ.

ನಿನ್ನೆಯಷ್ಟೆ (ಡಿಸೆಂಬರ್ 06) ರಾತ್ರಿ ಉತ್ತರಪ್ರದೇಶದ ರುದ್ರಪ್ರಯಾಗ, ಉತ್ತರಾಂಚಲ, ಹರಿಯಾಣ, ದೆಹಲಿ ಎನ್.ಸಿ.ಆರ್ ಭಾಗದಲ್ಲಿ ಲಘು ಭೂಕಂಪ ಆಗಿತ್ತು. ಅಲ್ಲಿ ಕೂಡ ಯಾವುದೇ ಜೀವ ಹಾನಿ ಆಸ್ತಿ ಹಾನಿ ಸಂಭವಿಸಿಲ್ಲ.

ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಉತ್ತರ ಭಾರತದ ಕೆಲವೆಡೆ ಇನ್ನಷ್ಟು ದಿನ ಭೂಕಂಪಗಳು ಆಗುವ ಸಂಭವನೀಯತೆ ಇದೆ ಎನ್ನಲಾಗುತ್ತಿದೆ.

English summary
moderate intensity earthquake occurred in Kashmir in the wee hours of Thursday. No report of casualty or damage has come from anywhere so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X