ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕರಿಯಲ್ಲಿ 'ಕರಾಚಿ' ತೆಗೆಸಿದವರು ರಾಜದೀಪ್ ಸರ್ದೇಸಾಯಿ ಪಾಲಿಗೆ ಗೂಂಡಾಗಳು

|
Google Oneindia Kannada News

Recommended Video

ಬೇಕರಿಯಲ್ಲಿ 'ಕರಾಚಿ' ತೆಗೆಸಿದವರು ರಾಜದೀಪ್ ಸರ್ದೇಸಾಯಿ ಪಾಲಿಗೆ ಗೂಂಡಾಗಳು..! | Oneindia kannada

ಪುಲ್ವಾಮಾ ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧ ತೀರಾ ಹದೆಗೆಟ್ಟಿದ್ದು, ದೇಶದೊಳಗೆ ಕಾಶ್ಮೀರಿಗಳ ಮೇಲಿನ ಆಕ್ರೋಶ ಹೆಚ್ಚಾಗುತ್ತಿರುವ ಘಟನೆಯೂ ವರದಿಯಾಗುತ್ತಿದೆ. ಸೈನಿಕರ ಮೇಲೆ, ಕಾಶ್ಮೀರದ ದೇಶದ್ರೋಹಿ ಯುವಕರು ದಾಳಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವುದು ಇದಕ್ಕೆ ಕಾರಣ ಇದ್ದಿರಬಹುದು.

ಈ ನಡುವೆ, ಪಾಕಿಸ್ತಾನದ ನಗರದ ಹೆಸರು ಇರುವ ಬೇಕರಿಯೊಂದರ (ಕರಾಚಿ) ನಾಮಫಲಕದಲ್ಲಿ ಆ ಹೆಸರನ್ನು ಬಲವಂತವಾಗಿ ಮುಚ್ಚಿಸಿದ ಘಟನೆ ಬೆಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ (ಫೆ 22) ನಡೆದಿದೆ. ಶತ್ರು ದೇಶದ ಹೆಸರು, ನಮ್ಮ ನಗರದಲ್ಲಿ ಯಾಕೆ ಎನ್ನುವುದು ಪ್ರತಿಭಟನಾಕಾರರ ಕೂಗಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿಯವರನ್ನು ಟೀಕಿಸುವಲ್ಲಿ ಮಂಚೂಣಿಯಲ್ಲಿರುವ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದು, ನಾಮಫಲಕ ಮುಚ್ಚಿಸಿದವರನ್ನು ಗೂಂಡಾಗಳು ಎಂದು ಕರೆದು ಟ್ವೀಟ್ ಮಾಡಿದ್ದಾರೆ.

ಪಾಕ್ ಜೊತೆ ವಿಶ್ವಕಪ್ ಕ್ರಿಕೆಟ್ ಬಹಿಷ್ಕರಿಸೋಣ: ಆದರೆ, ಸೆಮಿ, ಫೈನಲ್ ನಲ್ಲಿ ಎದುರಾದರೆ?ಪಾಕ್ ಜೊತೆ ವಿಶ್ವಕಪ್ ಕ್ರಿಕೆಟ್ ಬಹಿಷ್ಕರಿಸೋಣ: ಆದರೆ, ಸೆಮಿ, ಫೈನಲ್ ನಲ್ಲಿ ಎದುರಾದರೆ?

ರಾಜದೀಪ್ ಮಾಡಿರುವ ಟ್ವೀಟಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸದಾ ಭಾರತ ವಿರೋಧಿ ಹೇಳಿಕೆಯನ್ನೇ ಸಮರ್ಥಿಸಿಕೊಂಡು ಬರುತ್ತಿರುವ ನಿಮಗೆ ಅಭದ್ರತೆ ಕಾಡುತ್ತಿದೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ರಾಜದೀಪ್ ಮಾಡಿದ ಟ್ವೀಟ್ ನಲ್ಲಿ ಏನಿದೆ?

ಬೆಂಗಳೂರಿನಲ್ಲಿ ಕೆಲಸವಿಲ್ಲದ ಗೂಂಡಾಗಳು

'ಬೆಂಗಳೂರಿನಲ್ಲಿ ಕೆಲಸವಿಲ್ಲದ ಗೂಂಡಾಗಳು ಕರಾಚಿ ಬೇಕರಿಯ ಹೆಸರನ್ನು ಬದಲಾಯಿಸಲು ಸೂಚಿಸುತ್ತಿದ್ದಾರೆ. ಅವರಿಗೆಲ್ಲಾ ಇದರ ಹಿನ್ನಲೆ ಏನು ಎನ್ನುವುದು ಗೊತ್ತಿದೆಯಾ? ಇಂತವರಿಗೆ ಸರಿಯಾದ ಉತ್ತರವನ್ನು ನೀಡಬೇಕಿದೆ. ಇಂತಹ ಕೀಳು ಮಟ್ಟದ ಗಿಮಿಕ್ ಮಾಡುತ್ತಿರುವ ರಾಷ್ಟ್ರೀಯತೆವಾದಿಗಳನ್ನು ಹೊರಹಾಕಬೇಕಿದೆ' ರಾಜದೀಪ್ ಸರ್ದೇಸಾಯಿ ಮಾಡಿರುವ ಟ್ವೀಟ್.

ನಮ್ಮ ಹೋರಾಟ ಕಾಶ್ಮೀರಕ್ಕಾಗಿ, ಕಾಶ್ಮೀರಿಗಳ ವಿರುದ್ಧವಲ್ಲ : ಮೋದಿ ನಮ್ಮ ಹೋರಾಟ ಕಾಶ್ಮೀರಕ್ಕಾಗಿ, ಕಾಶ್ಮೀರಿಗಳ ವಿರುದ್ಧವಲ್ಲ : ಮೋದಿ

 ಬೆಂಗಳೂರಿನ ಇಂದಿರಾ ನಗರದಲ್ಲಿ ಹೈದರಾಬಾದ್ ಮೂಲದ ಕರಾಚಿ ಬೇಕರಿ

ಬೆಂಗಳೂರಿನ ಇಂದಿರಾ ನಗರದಲ್ಲಿ ಹೈದರಾಬಾದ್ ಮೂಲದ ಕರಾಚಿ ಬೇಕರಿ

ಬೆಂಗಳೂರಿನ ಇಂದಿರಾ ನಗರದಲ್ಲಿ ಹೈದರಾಬಾದ್ ಮೂಲದ ಕರಾಚಿ ಬೇಕರಿಯಿದೆ. ಶುಕ್ರವಾರ ರಾತ್ರಿ ಪ್ರತಿಭಟನಾಕಾರರು ಬೇಕರಿಯಲ್ಲಿನ ನಾಮಫಲಕದಲ್ಲಿ ಕರಾಚಿ ಎನ್ನುವ ಹೆಸರನ್ನು ಮಾತ್ರ ಮುಚ್ಚುವಂತೆ ಆಗ್ರಹಿಸಿದ್ದರು. ಅದಕ್ಕೆ ಬೇಕರಿಯವರೂ ಸ್ಪಂದಿಸಿದ್ದರು. ಕರಾಚಿ ಎನ್ನುವ ಹೆಸರನ್ನು ಮುಚ್ಚಿ, ಬೇಕರಿ ಎಂದಿನಂತೆ ವಹಿವಾಟು ನಡೆಸುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ರಾಜದೀಪ್ ಟ್ವೀಟ್ ಮಾಡಿದ್ದರು.

 ಆತ್ಮಸಾಕ್ಷಿಯಾಗಿ ಭಾರತೀಯರು, ಮುಂದೆಯೂ ಭಾರತೀಯರಾಗಿ ಇರುತ್ತೇವೆ

ಆತ್ಮಸಾಕ್ಷಿಯಾಗಿ ಭಾರತೀಯರು, ಮುಂದೆಯೂ ಭಾರತೀಯರಾಗಿ ಇರುತ್ತೇವೆ

ಖಾನಚಾಂದ್ ರಮಣಾನಿ ಜೀ ಎನ್ನುವವರು ಕರಾಚಿ ಬೇಕರಿಯ ಸಂಸ್ಥಾಪಕರು. ಸಿಂಧಿ ವಲಸಿಗರಾಗಿದ್ದ ಇವರು 1947ರಲ್ಲಿ ದೇಶ ವಿಭಜನೆಗೊಂಡಾಗ ಕರಾಚಿಯಿಂದ ಹೈದರಾಬಾದಿಗೆ ಆಗಮಿಸಿ, 1953ರಲ್ಲಿ ಈ ಬೇಕರಿಯನ್ನು ತೆರೆದಿದ್ದರು. ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ಮುಂಬೈ, ದುಬೈ, ಗುರುಗ್ರಾಮ್, ವಿಜಯವಾಡ ಮುಂತಾದ ಕಡೆ ಕರಾಚಿ ಬೇಕರಿಯ ಶಾಖೆಗಳಿವೆ. ಶುಕ್ರವಾರದ ಘಟನೆಯ ನಂತರ ಸ್ಪಷ್ಟೀಕರಣ ನೀಡಿರುವ ಬೇಕರಿಯ ಮಾಲೀಕರು, ನಾವು ಆತ್ಮಸಾಕ್ಷಿಯಾಗಿ ಭಾರತೀಯರು, ಮುಂದೆಯೂ ಭಾರತೀಯರಾಗಿ ಇರುತ್ತೇವೆ ಎಂದು ಹೇಳಿದ್ದಾರೆ.

 ಬೆಂಗಳೂರು ಐಯಂಗಾರ್ ಬೇಕರಿಯನ್ನು ನೋಡಿದ್ದೀರಾ?

ಬೆಂಗಳೂರು ಐಯಂಗಾರ್ ಬೇಕರಿಯನ್ನು ನೋಡಿದ್ದೀರಾ?

ಪಾಕಿಸ್ತಾನಕ್ಕೆ ನೀವು ಭೇಟಿಯಾಗಿದ್ದಾಗ ಅಲ್ಲೆಲ್ಲಾದರೂ ಬೆಂಗಳೂರು ಐಯಂಗಾರ್ ಬೇಕರಿಯನ್ನು ನೋಡಿದ್ದೀರಾ? ರಾಜದೀಪ್ ಹೊರತು ಪಡಿಸಿ ಎಲ್ಲರೂ ಕೆಲಸ ಇಲ್ಲದವರು. ನಿಮಗೆ ಕೆಲಸ ಹೇಗೆ ಸಿಕ್ಕಿತು ಮಿಸ್ಟರ್ ಪರ್ಫೆಕ್ಟ್ ಎನ್ನುವ ಟ್ವೀಟುಗಳು.

 ನೆಹರೂ, ಗಾಂಧಿ ಹೊರತಾಗಿ ಬೇರೆ ಪುಸ್ತಕವನ್ನೂ ಓದಿ

ನೆಹರೂ, ಗಾಂಧಿ ಹೊರತಾಗಿ ಬೇರೆ ಪುಸ್ತಕವನ್ನೂ ಓದಿ

ನಿಮಗೆ ಅಭದ್ರತೆ ಕಾಡುತ್ತಿದೆ ಎನ್ನುವುದು ನಿಮ್ಮ ಟ್ವೀಟ್ ನಲ್ಲಿ ಗೊತ್ತಾಗುತ್ತಿದೆ. ನೆಹರೂ, ಗಾಂಧಿ ಹೊರತಾಗಿ ಬೇರೆ ಪುಸ್ತಕವನ್ನೂ ಓದಿ.. ಕೆಲವೊಂದು ಘಟನೆಯು ಈಗ ನಡೆಯುತ್ತಿರುವುದು ಒಳ್ಳೆಯದಕ್ಕೇ ಎನ್ನುವ ರಾಜದೀಪ್ ಸರ್ದೇಸಾಯಿ ಅವರನ್ನು ಟೀಕಿಸುವ ಟ್ವೀಟುಗಳು.

English summary
Karachi Bakery name change incident in Bengaluru on Feb 22. Journalist Rajdeep Sardesai tweet and Twitterite strong reply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X