ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ವರ್ ಯಾತ್ರೆ: ಮೂಲಭೂತವಾದಿಗಳು ದಾಳಿಯ ಶಂಕೆ- ರಾಜ್ಯಗಳಿಗೆ MHA ಸಲಹೆ

|
Google Oneindia Kannada News

ನವದೆಹಲಿ ಜುಲೈ 15: ಗುರುವಾರದಿಂದ ಕನ್ವರ್ ಯಾತ್ರೆ ಆರಂಭವಾಗಿದೆ. ದೇಶದ ಹಲವಾರು ರಾಜ್ಯಗಳಿಂದ ಭಕ್ತರು ಕನ್ವರ್ ಯಾತ್ರೆಗೆ ಹೊರಟಿದ್ದಾರೆ. ಆದರೆ ಕನ್ವರ್ ಯಾತ್ರೆಗೂ ಮುನ್ನ ರಾಜ್ಯ ಸರ್ಕಾರಗಳಿಗೆ ಗೃಹ ಸಚಿವಾಲಯದಿಂದ ಸಲಹೆ ಸೂಚನೆ ನೀಡಲಾಗಿದ್ದು, ಕನ್ವರ್ ಯಾತ್ರೆ ಮೇಲೆ ಕೆಲವು ಮೂಲಭೂತವಾದಿಗಳು ದಾಳಿ ನಡೆಸಬಹುದು ಎಂಬ ಕಾರಣಕ್ಕೆ ಕನ್ವರ್ ಯಾತ್ರೆಯ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಹೇಳಲಾಗಿದೆ. ಗುಪ್ತಚರ ಇಲಾಖೆಯ ಒಳಹರಿವಿನ ವರದಿಯನ್ನು ಆಧರಿಸಿ, ಗೃಹ ಸಚಿವಾಲಯ ಹಲವು ರಾಜ್ಯಗಳಿಗೆ ಈ ಸಲಹೆಯನ್ನು ನೀಡಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶಕ್ಕೆ ಈ ಸಲಹೆ ನೀಡಲಾಗಿದ್ದು, ಕನ್ವರ್ ಯಾತ್ರೆಗೆ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು ಎಂದು ಹೇಳಲಾಗಿದೆ. ಇದರೊಂದಿಗೆ ರೈಲುಗಳ ಭದ್ರತೆಯನ್ನು ಹೆಚ್ಚಿಸುವಂತೆಯೂ ರೈಲ್ವೆ ಮಂಡಳಿ ಸೂಚನೆ ನೀಡಿದೆ. ಸಲಹೆಯ ಪ್ರಕಾರ, ಕನ್ವರ್ ಯಾತ್ರೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಬೇಕು ಎಂದಿದೆ.

ಎಲ್ಲೆಲ್ಲಿಂದ ಜನ ಭೇಟಿ

ಎಲ್ಲೆಲ್ಲಿಂದ ಜನ ಭೇಟಿ

ಕೊರೊನಾ ಮಹಾಮಾರಿಯಿಂದಾಗಿ ಈ ಕನ್ವರ್ ಯಾತ್ರೆಯನ್ನು ಕೈಬಿಡಲಾಗಿತ್ತು. ಪ್ರಸ್ತುತ ಎರಡು ವರ್ಷಗಳ ನಂತರ ಕನ್ವರ್ ಯಾತ್ರೆಯನ್ನು ಜುಲೈ 14 ರಿಂದ ಆಗಸ್ಟ್‌ 12 ರವರೆಗೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಯಾತ್ರೆಯಲ್ಲಿ ಭಾಗವಹಿಸುವವರು ಮಧ್ಯ ಮತ್ತು ಉತ್ತರ ಭಾಗಗಳಿಂದ ಭೇಟಿ ನೀಡುತ್ತಾರೆ. ವಿಶೇಷವಾಗಿ ಈ ಕನ್ವರ್ ಜಾತ್ರೆಯನ್ನು ‘ಮಾನ್ಸುನ್‌ ಜಾತ್ರೆ' ಎಂದು ಕೂಡ ಕರೆಯುತ್ತಾರೆ.

12 ಜ್ಯೋತಿರ್ಲಿಂಗಗಳ ಪೂಜೆ

12 ಜ್ಯೋತಿರ್ಲಿಂಗಗಳ ಪೂಜೆ

ಯಾತ್ರೆಯಲ್ಲಿ ಭಾಗವಹಿಸುವವರನ್ನು ಕನ್ವಾರಿಗಳು ಎಂದು ಕರೆಯಲಾಗುತ್ತದೆ. ಇವರು ಉತ್ತರಾಖಂಡದ ಪವಿತ್ರ ತೀರ್ಥಯಾತ್ರೆಯನ್ನು ತಲುಪಲು ಶ್ಯಾಮ್ ಪುರ, ಕಾಳಿ ನಾಡಿ, ಭಗವಾನ್ ಪುರ, ರೂರ್ಕಿ ಸೇರಿದಂತೆ ಇನ್ನು ಹಲವಾರು ಮಾರ್ಗಗಳನ್ನು ದಾಟಬೇಕಾಗುತ್ತದೆ. ಕನ್ವರ್‌ ಯಾತ್ರೆಯು ಅತ್ಯಂತ ಪವಿತ್ರವಾದ ಯಾತ್ರೆ ಎಂದು ಹೇಳಲಾಗುತ್ತದೆ. ಇದನ್ನು ವಿಶೇಷವಾಗಿ ಮಳೆಗಾಲದಲ್ಲಿ ಆಯೋಜಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಕೇಸರಿ ಉಡುಪುಗಳನ್ನು ಧರಿಸಿ ಬರಿಗಾಲಿನಲ್ಲಿ ನಡೆಯುತ್ತಾರೆ.

ಈ ಯಾತ್ರೆಯನ್ನು ಕೈಗೊಳ್ಳಲು ಉತ್ತರಾಖಂಡದ ಹರಿದ್ವಾರ, ಗೌಮುಖ, ಗಂಗೋತ್ರಿ, ಉತ್ತರ ಪ್ರದೇಶದ ಅಯೋಧ್ಯೆ ಸೇರಿದಂತೆ ಇನ್ನು ಹಲವಾರು ಭಾಗಗಳಿಂದ ಯಾತ್ರಾರ್ಥಿಗಳು ತೆರಳುತ್ತಾರೆ. ಯಾತ್ರಾರ್ಥಿಗಳು 12 ಜ್ಯೋತಿರ್ಲಿಂಗಗಳನ್ನು ಪೂಜಿಸಲು ಗಂಗಾ ನದಿಯ ನೀರನ್ನು ಕೊಂಡದಲ್ಲಿ ಒಯ್ಯುತ್ತಾರೆ.

ಹರಿದ್ವಾರ-ಋಷಿಕೇಶ ತಲುಪಲಿದ ಕಣ್ವಾರಿಯಾಗಳು

ಹರಿದ್ವಾರ-ಋಷಿಕೇಶ ತಲುಪಲಿದ ಕಣ್ವಾರಿಯಾಗಳು

ಸದ್ಯ ಸುಮಾರು ನಾಲ್ಕು ಕೋಟಿ ಕಣ್ವಾರಿಯಾದವರು ಹರಿದ್ವಾರ ತಲುಪಲಿದ್ದಾರೆ ಎಂದು ಆಡಳಿತ ಅಂದಾಜಿಸಿದೆ. ಉತ್ತರ ಪ್ರದೇಶದ ಅನೇಕ ರಾಜ್ಯಗಳಿಂದ ಕನ್ವಾರಿಯಾದವರು ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಿಂದ ಹರಿದ್ವಾರ ಮತ್ತು ಋಷಿಕೇಶವನ್ನು ತಲುಪುತ್ತಾರೆ, ಅವರು ಇಲ್ಲಿ ಗಂಗಾಜಲವನ್ನು ಸಂಗ್ರಹಿಸಿ ಶಿವನಿಗೆ ಅರ್ಪಿಸುತ್ತಾರೆ.

10 ಸಾವಿರ ಸೈನಿಕರ ನಿಯೋಜನೆ

10 ಸಾವಿರ ಸೈನಿಕರ ನಿಯೋಜನೆ

ಹೆಚ್ಚಿನ ಸಂಖ್ಯೆಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಹರಿದ್ವಾರ ಮತ್ತು ಋಷಿಕೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಾಗಿದೆ. ಮೇಳ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ, ಭಯೋತ್ಪಾದನಾ ನಿಗ್ರಹ ದಳವನ್ನು ನಿಯೋಜಿಸಲಾಗಿದೆ. ಹರಿದ್ವಾರ ಮತ್ತು ಅಕ್ಕಪಕ್ಕದ ಪ್ರದೇಶಗಳನ್ನು 12 ಸೂಪರ್ ಜೋನ್‌ಗಳು, 31 ವಲಯಗಳು, 133 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದ್ದು, 10 ಸಾವಿರ ಸೈನಿಕರನ್ನು ಇಲ್ಲಿ ನಿಯೋಜಿಸಲಾಗಿದೆ.

Recommended Video

West Indies ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ | *Cricket | OneIndia Kannada

English summary
Security has been beefed up after the intelligence department tipped off the home ministry about the possibility of a fundamentalist attack on the Kanwar Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X