ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಾರ್ಯಕರ್ತನ ಕೊಲೆ; ಇಂದು ಕಣ್ಣೂರು ಬಂದ್

By ವಿಕಾಸ್ ನಂಜಪ್ಪ
|
Google Oneindia Kannada News

ಕಣ್ಣೂರು, ಜನವರಿ 19: ಬಿಜೆಪಿ ಕಾರ್ಯಕರ್ತರೊಬ್ಬರ ಕೊಲೆ ಹಿನ್ನಲೆಯಲ್ಲಿ ಇಂದು ಕಣ್ಣೂರು ಬಂದ್ಗೆ ಕರೆ ನೀಡಲಾಗಿದೆ. ಕೊಲೆಯ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದೆ.

ಬುಧವಾರ ಎಂ.ಸಿ ಸಂತೋಷ್ ಎಂಬ ಬಿಜೆಪಿ ಕಾರ್ಯಕರ್ತರನ್ನು ಧರ್ಮಾಡಂ ಪ್ರದೇಶದಲ್ಲಿ ಕೊಲೆ ಮಾಡಲಾಗಿದೆ. ರಾತ್ರಿ ಸುಮಾರು 11 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ದಾಳಿಕೋರರು 11 ಗಂಟೆ ಸುಮಾರಿಗೆ ಸಂತೋಷ್ ಮನೆ ಬಳಿ ಬಂದು ದಾಳಿ ನಡೆಸಿದ್ದಾರೆ ಎಂದು ಅನುಮಾನಿಸಲಾಗಿದೆ. ದಾಳಿ ವೇಳೆ ಹಂಡತಿ ಮತ್ತು ಮಕ್ಕಳು ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಹಲ್ಲೆಯಾದ ಸಂತೋಷ್ರನ್ನು ಅವರ ಗೆಳೆಯರು ತಕ್ಷಣ ಆಸ್ಪತ್ರೆಗೆ ಸೇರಿಸಿದರಾದರೂ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ.

Kannur bandh as BJP leader is hacked to death
ಕೊಲೆತಗೆ ಸಿಪಿಎಂ ಕಾರಣ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಆರ್.ಎಸ್.ಎಸ್. ಮಾಧ್ಯಮ ಕೇಂದ್ರದ ಸಂಚಾಲಕ ಮತ್ತು ಸಂವಾದ ಡಾಟ್ ಆರ್ಗ್ ಸಂಪಾದಕ ರಾಜೇಶ್ ಪದ್ಮಾರ್, "ಕೇರಳ ಮುಖ್ಯಮಂತ್ರಿಯ ತವರು ಕ್ಷೇತ್ರದ ಧರ್ಮಾಡಂನಲ್ಲೇ ಎಡಪಂಥೀಯ ಗೂಂಡಾಗಳು 52 ವರ್ಷದ ಬಿಜೆಪಿ ಕಾರ್ಯಕರ್ತ, ಸ್ವಯಂ ಸೇವಕ ಸಂತೋಷರನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ," ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ ತಲಶೆರಿಯ ಬ್ರೆನ್ನನ್ ಕಾಲೇಜಿನಲ್ಲಿ ಎಬಿವಿಪಿ ಮತ್ತು ಎಸ್ಎಫ್ಐ ನಡುವೆ ಕೆಲ ದಿನಗಳ ಹಿಂದೆ ನಡೆದ ಘರ್ಷಣೆಯೇ ಕೊಲೆಗೆ ಕಾರಣ ಎನ್ನಲಾಗಿದೆ. ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿವೇಕಾನಂದ ಜಯಂತಿಯ ವೇಳೆ ಇತ್ತಂಡಗಳ ಮಧ್ಯೆ ಸಂಘರ್ಷ ನಡೆದಿತ್ತು.

ಕೊಲೆಯ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಗುರುವಾರ ಕಣ್ಣೂರು ಬಂದಿಗೆ ಕರೆ ನೀಡಿದೆ. ಅಗತ್ಯ ವಸ್ತುಗಳು ಮತ್ತು ರಾಜ್ಯ ಶಾಲಾ ಮಕ್ಕಳ ಯುವಜನೋತ್ಸವಕ್ಕೆ ಮಾತ್ರ ಬಂದಿನಿಂದ ವಿನಾಯಿತಿ ನೀಡುವುದಾಗಿ ಬಿಜೆಪಿ ಹೇಳಿದೆ. (ಒನ್ ಇಂಡಿಯಾ ಸುದ್ದಿ)

English summary
The Bharatiya Janata Party has called for a strike at Kannur in Kerala after one of its workers was hacked to death. The BJP alleges that the CPM was behind the murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X