ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೈ ಬಸ್‌ಗಾಗಿ ಕಣ್ಣೂರು ಏರ್‌ಪೋರ್ಟ್‌ನಿಂದ ಕೆಎಸ್ಆರ್‌ಟಿಸಿಗೆ ಪತ್ರ

|
Google Oneindia Kannada News

ಬೆಂಗಳೂರು, ಜೂನ್ 04 : 2018ರ ಡಿಸೆಂಬರ್‌ನಲ್ಲಿ ಆರಂಭವಾಗ ಕೇರಳದ ಕಣ್ಣೂರು ವಿಮಾನ ನಿಲ್ದಾಣ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಮಾನ ನಿಲ್ದಾಣಕ್ಕೆ ಫ್ಲೈ ಬಸ್ ಆರಂಭಿಸಬೇಕು ಎಂದು ವಿಮಾನ ನಿಲ್ದಾಣ ಕೆಎಸ್ಆರ್‌ಟಿಸಿಗೆ ಪತ್ರ ಬರೆದಿದೆ.

ಕರ್ನಾಟಕದ ಮೈಸೂರು, ಕೊಡಗು ಜಿಲ್ಲೆಗಳಿಂದ ಕಣ್ಣೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಫ್ಲೈ ಬಸ್ ಸೇವೆ ಆರಂಭಿಸಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಗೆ ಕೇರಳದ ಕಣ್ಣೂರು ವಿಮಾನ ನಿಲ್ದಾಣ ಮನವಿ ಮಾಡಿದೆ.

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

2018ರಲ್ಲಿ ಕಣ್ಣೂರು ವಿಮಾನ ನಿಲ್ದಾಣ ಆರಂಭವಾಗಿದ್ದು ಕೇರಳ ಮತ್ತು ಕರ್ನಾಟಕ-ಕೇರಳ ಗಡಿ ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಿದೆ. ಕಣ್ಣೂರು, ಕಾಸರಗೋಡು, ವಯನಾಡು, ಕೋಯಿಕ್ಕೋಡ್, ಕೊಡಗು, ಮೈಸೂರು ಭಾಗದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಅನುಕೂಲವಾಗಿದೆ.

ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಸಹಾಯಕ್ಕಾಗಿ Ask Vaniಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಸಹಾಯಕ್ಕಾಗಿ Ask Vani

ಕೆಎಸ್ಆರ್‌ಟಿಸಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಲು ಫ್ಲೈ ಬಸ್ ಸೇವೆಯನ್ನು ಆರಂಭಿಸಿದೆ. ಮೈಸೂರು, ಮಣಿಪಾಲ್, ಮಂಗಳೂರು ಸೇರಿದಂತೆ ವಿವಿಧ ನಗರಗಳಿಂದ ನೇರವಾಗಿ ಜನರ ವಿಮಾನ ನಿಲ್ದಾಣ ತಲುಪಬಹುದಾಗಿದೆ.

4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

ಪತ್ರದಲ್ಲಿ ಏನಿದೆ?

ಪತ್ರದಲ್ಲಿ ಏನಿದೆ?

ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೈಸೂರು, ಕೊಡಗು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಫ್ಲೈ ಬಸ್ ಸೇವೆಯನ್ನು ಆರಂಭಿಸಬೇಕು ಎಂದು ಕಣ್ಣೂರು ವಿಮಾನ ನಿಲ್ದಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಗೆ ಪತ್ರ ಬರೆದಿದೆ.

ಕರ್ನಾಟಕ-ಕೇರಳ ಗಡಿಯಲ್ಲಿದೆ

ಕರ್ನಾಟಕ-ಕೇರಳ ಗಡಿಯಲ್ಲಿದೆ

ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕರ್ನಾಟಕದ ವಿವಿಧ ನಗರಗಳಿಗೂ ಹತ್ತಿರದಲ್ಲಿದೆ. ವಿರಾಜಪೇಟೆಯಿಂದ 58 ಕಿ.ಮೀ., ಮಡಿಕೇರಿಯಿಂದ 90 ಕಿ.ಮೀ. ಮತ್ತು ಮೈಸೂರಿನಿಂದ 158 ಕಿ.ಮೀ.ದೂರದಲ್ಲಿದೆ.

ಬೆಂಗಳೂರು ನಿಲ್ದಾಣ ಬಳಸುತ್ತಿದ್ದರು

ಬೆಂಗಳೂರು ನಿಲ್ದಾಣ ಬಳಸುತ್ತಿದ್ದರು

ಕಣ್ಣೂರು ವಿಮಾನ ನಿಲ್ದಾಣ ಆರಂಭವಾಗುವ ಮೊದಲು ಮೈಸೂರು, ಮಡಿಕೇರಿ ಭಾಗದ ಪ್ರಯಾಣಿಕರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದರು. ಈಗ ಅವರು ಕಣ್ಣೂರು ವಿಮಾನ ನಿಲ್ದಾಣ ಬಳಸುತ್ತಿದ್ದಾರೆ.

2018ರಲ್ಲಿ ಏರ್‌ ಪೋರ್ಟ್‌ ಆರಂಭ

2018ರಲ್ಲಿ ಏರ್‌ ಪೋರ್ಟ್‌ ಆರಂಭ

1,900 ಎಕರೆ ಪ್ರದೇಶದಲ್ಲಿ ಕಣ್ಣೂರು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. 2018ರ ಡಿಸೆಂಬರ್‌ನಲ್ಲಿ ನಿಲ್ದಾಣ ಕಾರ್ಯಾರಂಭ ಮಾಡಿದ್ದು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

English summary
Kerala Kannur International Airport authorities has written to Karnataka's KSRTC to provide Flybus services to the airport from Mysuru, Kodagu districts of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X