ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಲೆ. ಜ. ಬಗ್ಗವಳ್ಳಿ ಸೋಮಶೇಖರರಾಜು ಭಾರತೀಯ ಸೇನೆ ಉಪಮುಖ್ಯಸ್ಥರಾಗಿ ನೇಮಕ

|
Google Oneindia Kannada News

ಬೆಂಗಳೂರು, ಏ. 30: ಭಾರತೀಯ ಸೇನೆಯಲ್ಲಿ ಮಿಲಿಟರಿ ಕಾರ್ಯಾಚರಣೆ ವಿಭಾಗದ ಮಹಾನಿರ್ದೇಶಕರಾಗಿದ್ದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರನ್ನ ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯದವಾದ ಲೆ. ಜ. ಬಿ ಎಸ್ ರಾಜು ಅವರು ಮೇ 1, ನಾಳೆ ಹೊಸ ಹುದ್ದೆಯ ಅಧಿಕಾರ ಸ್ವೀಕರಿಸಲಿದ್ದಾರೆ. ಥ್ರೀ ಸ್ಟಾರ್ ಮಟ್ಟದ ಅಧಿಕಾರಿಯೊಬ್ಬರು ಸೇನಾ ಸಿಬ್ಬಂದಿಯ ಉಪಮುಖ್ಯಸ್ಥ ಸ್ಥಾನಕ್ಕೆ ಬಡ್ಡಿ ಪಡೆಯುವುದು ಅಪರೂಪ. ಕನ್ನಡಿಗರೊಬ್ಬರಿಗೆ ಈ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ.

ಸದ್ಯ ಸೇನಾ ಸಿಬ್ಬಂದಿಯಲ್ಲಿ ಉಪಮುಖ್ಯಸ್ಥರಾಗಿರುವ ಲೆ| ಜ| ಮನೋಜ್ ಪಾಂಡೆ ಅವರು ಇಂದು ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ನರವಣೆ ಅವರ ಸ್ಥಾನವನ್ನು ತುಂಬಲಿದ್ದಾರೆ. ಈಗ ಮನೋಜ್ ಪಾಂಡೆ ಸ್ಥಾನಕ್ಕೆ ಬಗ್ಗವಳ್ಳಿ ಸೋಮಶೇಕರ್ ರಾಜು ಅವರು ಆಯ್ಕೆಯಾಗಿದ್ದಾರೆ.

ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆ

ಲೆ. ಜ. ಸೊಮಶೇಖರ್ ರಾಜು ಅವರು ವಿಜಯಪುರದ ಸೈನಿಕ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ತೇರ್ಗಡೆಯಾಗಿ ಹೋದವರು. 1984ರಲ್ಲಿ ಜ್ಯಾಟ್ ರೆಜಿಮೆಂಟ್‌ಗೆ ನಿಯೋಜಿತರಾದರು. ಜಮ್ಮು ಕಾಶ್ಮೀರದಲ್ಲಿ ನಡೆಸಲಾದ ಆಪರೇಶನ್ ಪರಾಕ್ರಮ್ ಕಾರ್ಯಾಚರಣೆಯಲ್ಲಿ ಅವರು ಒಂದು ಬಟಾಲಿಯನ್ ಅನ್ನು ಮುನ್ನಡೆಸಿದ್ದರು. ಕಾಶ್ಮೀರ ಕಣಿವೆಯಲ್ಲಿ ಅನೇಕ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅವರು ಭಾಗವಹಿಸಿದ್ದಾರೆ. ಗಡಿಭಾಗದಲ್ಲಿ ಕಾರ್ಯನಿರ್ವಹಿಸುವ ಉರಿ ಬ್ರಿಗೇಡ್, ಕಣಿವೆಯಲ್ಲಿ ಕಾರ್ಯಾಚರಿಸುವ ೧೫ ಕಾರ್ಪ್ಸ್ ಪಡೆ, ಹಾಗು ಉಗ್ರ ನಿಗ್ರಹ ಪಡೆಗಳನ್ನ ಅವರು ಮುನ್ನಡೆಸಿ ಸೈ ಎನಿಸಿಕೊಂಡಿದ್ದಾರೆ.

Lt. Gen. BS Raju of Karnataka appointed Vice Chief of Army Staff

ಬ್ರಿಟನ್‌ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ ಸಂಸ್ಥೆಯ ನ್ಯಾಷನಲ್ ಡಿಫೆನ್ಸ್ ಕಾಲೇಜು ಪದವಿಯನ್ನ ಅರು ಪಡೆದಿದ್ದಾರೆ. ಅಮೆರಿಕದ ನೇವಲ್ ಪೋಸ್ಟ್ ಗ್ರ್ಯಾಜುಯೇಟ್ ಸ್ಕೂಲ್‌ನಲ್ಲಿ ಉಗ್ರ ನಿಗ್ರಹದ ಮಾಸ್ಟರ್ಸ್ ಕೋರ್ಸ್ ಮಾಡಿರುವ ಹೆಗ್ಗಳಿಕೆ ಅವರದ್ದು. ಹೀಗಾಗಿ, ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹೆಚ್ಚು ನಿಯೋಜಿತಗೊಂಡಿದ್ದಾರೆ.

ಲೆ| ಜ| ಬಿ ಎಸ್ ರಾಜು ಅವರು ಜ್ಯಾಟ್ ರೆಜಿಮೆಂಟ್‌ನ ಕರ್ನಲ್ ಕೂಡ ಆಗಿದ್ದರು. ಹೆಲಿಕಾಪ್ಟರ್ ಪೈಲಟ್ ತಜ್ಞರಾದ ಅವರು ಸೊಮಾಲಿಯಾದಲ್ಲಿ UNOSOM-II ಭಾಗವಾಗಿ ಹೆಲಿಕಾಪ್ರ್ ಕಾರ್ಯಾಚರಿಸಿದ್ದರು (Operational Flying). ಹೀಗೆ ಅನೇಕ ಸಾಧನೆ, ಶ್ರಮ ಮತ್ತು ಅವರ ದಕ್ಷತೆಗೆ ಇಂದು ಫಲ ಸಿಕ್ಕು ಅವರು ಭಾರತೀಯ ಸೇನೆಯ ಉಪಮುಖ್ಯಸ್ಥ ಸ್ಥಾನ ಅಲಂಕರಿಸುವಂತಾಗಿದೆ.

ಎನ್‌ಡಿಎ 61ನೇ ಬ್ಯಾಚ್‌; ಭೂ, ವಾಯು, ನೌಕಾಪಡೆ ಮುಖ್ಯಸ್ಥರ ಜೊತೆ ಏನಿದು ಮ್ಯಾಚ್ಎನ್‌ಡಿಎ 61ನೇ ಬ್ಯಾಚ್‌; ಭೂ, ವಾಯು, ನೌಕಾಪಡೆ ಮುಖ್ಯಸ್ಥರ ಜೊತೆ ಏನಿದು ಮ್ಯಾಚ್

ಆರ್ಮಿ ಕಮಾಂಡರ್ ಆಗದೆಯೇ ನೇರವಾಗಿ ಸೇನಾ ಉಪಮುಖ್ಯಸ್ಥ ಸ್ಥಾನ ಪಡೆಯುವ ಅವಕಾಶ ಭಾರತೀಯ ಸೇನೆಯಲ್ಲಿ ಅಪರೂಪವೇ. ಆರ್ಮಿ ಕಮಾಂಡರ್ ಆಗಿ ಕೆಲಸ ಮಾಡಿ ಸಾಕಷ್ಟು ಅನುಭವ ಹೊಂದಿದ ಅಧಿಕಾರಿಗಳನ್ನ ಸೇನಾ ಉಪಮುಖ್ಯಸ್ಥ ಸ್ಥಾನಕ್ಕೆ ನೇಮಕ ಮಾಡುವುದು ವಾಡಿಕೆ. ಆದರೆ ಕರ್ನಾಟಕದ ಬಗ್ಗವಳ್ಳಿ ಸೋಮಶೇಖರ್ ರಾಜು ಅವರಿಗೆ ಅದೃಷ್ಟ ಒಲಿದಿದೆ. ಲೆ| ಜ| ಬಿ ಎಸ್ ರಾಜು ಅವರು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದು, ಈ ವರ್ಷದ ಕೊನೆಯಲ್ಲಿ ಆರ್ಮಿ ಕಮಾಂಡರ್ ಆಗಿಯೂ ಕೆಲಸ ನಿಭಾಯಿಸಲಿದ್ದಾರೆ.

ಈ ರೀತಿ ಮೊದಲು ಸೇನಾ ಉಪಮುಖಸ್ಥರಾಗಿ ಬಳಿಕ ಆರ್ಮಿ ಕಮಾಂಡರ್ ಆದ ಕೆಲವೇ ಮಂದಿಯಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಸ್ ಎಫ್ ರೋಡ್ರಿಗ್ಸ್ ಕೂಡ ಒಬ್ಬರು. ರೋಡ್ರಿಗ್ಸ್ ಅವರು ಸೇನಾ ಉಪಮುಖ್ಯಸ್ಥರಾದ ಬಳಿಕ ಸೇನಾ ಕಮಾಂಡರ್ ಆಗಿ ಕೆಲಸ ಮಾಡಿದರು. ಅಂತಿಮವಾಗಿ ಅವರು ಸೇನಾ ಮುಖ್ಯಸ್ಥ ಸ್ಥಾನಕ್ಕೆ ಏರಿ ನಿವೃತ್ತರಾಗಿದ್ದರು.

(ಒನ್ಇಂಡಿಯಾ ಸುದ್ದಿ)

English summary
The Army’s Director General of Military Operations, Lt. Gen. B.S. Raju, has been appointed the next Vice Chief of the Army Staff. He will take over on May 1, 2022, the Army said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X