ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat, Himachal Pradesh election Results 2022: ಕನ್ನಡ ಪತ್ರಿಕೆಗಳ ಆರ್ಕರ್ಷಕ ಶೀರ್ಷಿಕೆಗಳಿವು

|
Google Oneindia Kannada News

ಶಿಮ್ಲ, ಡಿಸೆಂಬರ್‌, 09: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ 2022ರ ಮತ ಎಣಿಕೆ ಗುರುವಾರ (ಡಿಸೆಂಬರ್‌, 08) ನಡೆದಿದೆ. ಗುಜರಾತ್‌ನಲ್ಲಿ ಕಮಲ ಪಾಳಯ (ಬಿಜೆಪಿ) ಭಾರಿ ಬಹುಮತಗಳಿಂದ ವಿಜಯ ಸಾಧಿಸಿದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಭಾರಿ ಬಹುಮತಗಳಿಂದ ಗೆದ್ದು ಬೀಗಿದೆ. ಗುಜರಾತ್‌ನಲ್ಲಿ ಒಟ್ಟು 182ಕ್ಷೇತ್ರಗಳ ಪೈಕಿ ಬಿಜೆಪಿಯು ಒಟ್ಟು 156ಕ್ಷೇತ್ರವನ್ನು ಬಾಚಿಕೊಂಡು ಸತತ ಏಳನೇ ಬಾರಿಗೆ ಐತಿಹಾಸಿಕ ಜಯ ಸಾಧಿಸಿದೆ. ಇನ್ನು ಗುಜರಾತ್‌ನಲ್ಲಿ ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದ್ದು, ಕೇವಲ 17 ಸ್ಥಾನ ಗಳಿಸುವ ಮೂಲಕ ಪರಾಭವಗೊಂಡಿದೆ.

ಇನ್ನು ಹಿಮಾಚಲ ಪ್ರದೇಶದ ಒಟ್ಟು 68 ವಿಧಾನಸಭೆ ಕ್ಷೇತ್ರಗಳಲ್ಲಿ 40 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. ಹಾಗೂ ಇತ್ತ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಮಾಡಲಾಗದೇ ಬಿಜೆಪಿ ಕಡಿಮೆ ಅಂತರ, 25ಕ್ಷೇತ್ರಗಳಲ್ಲಿ ಜಯ ಸಾಧಿಸಿ ಪರಾಭವಗೊಂಡಿದೆ ಎನ್ನುವ ಮಾಹಿತಿ ಭಾರತೀಯ ಚುನಾವಣೆ ಆಯೋಗದಿಂದ ಲಭ್ಯವಾಗಿದೆ.

Himachal Pradesh Results 2022: ಸಿಎಂ ಆಯ್ಕೆ ಬಗ್ಗೆ ಚಂಡೀಗಢದಲ್ಲಿ ಸಭೆ ಮಾಡಲು ಕಾಂಗ್ರೆಸ್‌ ಪ್ಲಾನ್‌Himachal Pradesh Results 2022: ಸಿಎಂ ಆಯ್ಕೆ ಬಗ್ಗೆ ಚಂಡೀಗಢದಲ್ಲಿ ಸಭೆ ಮಾಡಲು ಕಾಂಗ್ರೆಸ್‌ ಪ್ಲಾನ್‌

ಹಿಮಾಚಲ ಪದೇಶದಲ್ಲಿ ಮತ ಎಣಿಕೆ ಆರಂಭದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಾ ಬಂದಿತ್ತು. ಆದರೆ ಸಮಯ ಕಳೆದಂತೆ ಕಾಂಗ್ರೆಸ್‌ ಮೇಲುಗೈ ಸಾಧಸುವ ಮೂಲಕ ಬಿಜಿಪಿಯನ್ನು ಕೊನೆಯವರೆಗೂ ಮಕಾಡೆ ಮಲಗಿಸುತ್ತಾ ಬಂದಿದೆ. ಈ ಮೂಲಕ ಬಿಜೆಪಿಯ ವಿರುದ್ಧ ಕಾಂಗ್ರೆಸ್‌ ಪಕ್ಷ ಭರ್ಜರಿ ಜಯವನ್ನು ಸಾಧಿಸಿದೆ. ಹಾಗೆಯೇ ಹಿಮಾಚಲ ಪ್ರದೇಶದ ಸಿಎಂ ಸ್ಥಾನಕ್ಕೆ ಬಿಜೆಪಿಯ ಜೈರಾಮ್‌ ಠಾಕೂರ್‌ ರಾಜೀನಾಮೆ ಘೋಷಿಸಿದ್ದು, ಇದೀಗ ಕಾಂಗ್ರೆಸ್‌ ಸಿಎಂ ಆಯ್ಕೆ ಬಗ್ಗೆ ಸಭೆ ಮಾಡಲು ತೀರ್ಮಾನಿಸಿದೆ. ಹಿಮಾಚಲ ಪ್ರದೇಶಕ್ಕೆ ಕಾಂಗ್ರೆಸ್‌ ನೂತನ ಸಿಎಂ ಯಾವಾಗ? ಯಾರನ್ನು ಘೋಷಣೆ ಮಾಡುತ್ತದೆ ಅನ್ನುವುದೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಪತ್ರಿಕೆಗಳನ್ನೂ ಕಣ್ಣಾಡಿಸುವ ಜನರು

ಪತ್ರಿಕೆಗಳನ್ನೂ ಕಣ್ಣಾಡಿಸುವ ಜನರು

ಗುರುವಾರ ಟಿವಿ ಮಾಧ್ಯಮಗಳಲ್ಲಿ ಫಲಿತಾಂಶವನ್ನು ದೇಶದೆಲ್ಲೆಡೆ ಜನರು ನೋಡಿದ್ದಾರೆ. ಆದರೂ ಸಂಪೂರ್ಣವಾಗಿ ವಿಷಯವನ್ನು ತಿಳಿದುಕೊಳ್ಳುವ ಹಂಬಲದಿಂದ ಶುಕ್ರವಾರ (ಡಿಸೆಂಬರ್‌, 09) ಬೆಳಗ್ಗೆ ಜನರು ಪತ್ರಿಕೆಗಳನ್ನು ಕಣ್ಣಾಡಿಸಲೂ ಕಾತುರದಿಂದ ಕಾಯುತ್ತಿದ್ದಾರೆ. ಎರಡು ರಾಜ್ಯಗಳಲ್ಲಿ ಪಕ್ಷಗಳ ಸೋಲು-ಗೆಲುವಿನ ಲೆಕ್ಕಚಾರದ ಬಗ್ಗೆ ಪತ್ರಿಕೆಗಳಲ್ಲಿ ವಿಭಿನ್ನವಾಗಿ ಶೀರ್ಷಿಕೆಗಳನ್ನು ನೀಡಿರುತ್ತಾರೆ. ಇದನ್ನು ಕುತೂಹಲದಿಂದ ನೋಡಲೆಂದೇ ಜನರು ಬೆಳಗ್ಗೆ ಪತ್ರಿಕೆಗಳ ಬರುವಿಕೆಗೆ ಕಾಯುತ್ತಿರುತ್ತಾರೆ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ನೋಡಿದರೂ ಕೂಡ ಜನರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಾ, ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆಗಳನ್ನು ಮಾಡುತ್ತಾರೆ.

ದಿನಪತ್ರಿಕೆಗಳಲ್ಲಿ ವಿಭಿನ್ನ ಶೀರ್ಷಿಕೆ

ದಿನಪತ್ರಿಕೆಗಳಲ್ಲಿ ವಿಭಿನ್ನ ಶೀರ್ಷಿಕೆ

ಹಾಗೆಯೇ ಗುಜರಾತ್‌, ಹಿಮಾಚಲ ಪ್ರದೇಶ ಈ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ವಿವರವನ್ನು ಪ್ರಕಟಿಸಿರುವ ಕನ್ನಡದ ದಿನ ಪತ್ರಿಕೆಗಳು ವಿವಿಧ ಶೈಲಿಯಲ್ಲಿ ವಿಶ್ಲೇಷಣೆಗಳನ್ನು ನೀಡಿರುವುದು ಗಮನಾರ್ಹವಾಗಿದೆ. ಬಗೆ ಬಗೆಯ ಪಟ್ಟಿ, ಸೋಲು-ಗೆಲುವಿನ ಲೆಕ್ಕಾಚಾರ, ಪ್ರಮುಖ ನಾಯಕರ ವಿವರ, ಮುಂದಿನ ಬೆಳವಣಿಗೆಗಳ ಬಗ್ಗೆಯೂ ಹಲವಾರು ಮಾಹಿತಿಗಳನ್ನು ನೀಡಿವೆ. ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಯಾವ ಪತ್ರಿಕೆ ಏನು ಶೀರ್ಷಿಕೆ ಕೊಟ್ಟಿದೆ? ಯಾವ ರೀತಿಯಾಗಿ ವಿವರ ನೀಡಿದೆ? ಎಂಬ ವಿವರ ಇಲ್ಲಿನ ಚಿತ್ರಗಳಲ್ಲಿ ನೋಡಬಹುದಾಗಿದೆ.

ಗುಜರಾತಲ್ಲಿ ಅರಳಿ ಹಿಮದಲ್ಲಿ ಮುಳುಗಿದ ಕಮಲ

ಗುಜರಾತಲ್ಲಿ ಅರಳಿ ಹಿಮದಲ್ಲಿ ಮುಳುಗಿದ ಕಮಲ

ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ "ಗುಜರಾತಲ್ಲಿ ಅರಳಿ ಹಿಮದಲ್ಲಿ ಮುಳುಗಿದ ಕಮಲ", "ಕೈಹಿಡಿದ ಮತದಾರ" ಎಂಬ ಶೀರ್ಷಿಕೆ ನೀಡಿದ್ದು, ಗುಜರಾತ್‌ನಲ್ಲಿ ಬಿಜೆಪಿ ಗೆಲುವು, ಹಿಮಾಚಲದಲ್ಲಿ ಕಾಂಗ್ರೆಸ್‌ ಗೆಲುವನ್ನುಈ ರೀತಿಯಾಗಿ ತಿಳಿಸಿದೆ.

ನಮೋ ನಮಃ

ನಮೋ ನಮಃ", ಕಾಂಗ್ರೆಸ್‌ ತೆಕ್ಕೆಗೆ ಹಿಮಾಚಲ

ಉದಯಕಾಲ ದಿನಪತ್ರಿಕೆಯಲ್ಲಿ ಗುಜರಾತ್‌ಲ್ಲಿ "ನಮೋ ನಮಃ" ಎಂಬ ಶೀರ್ಷಿಕೆ, "ಕಾಂಗ್ರೆಸ್‌ ತೆಕ್ಕೆಗೆ ಹಿಮಾಚಲ" ಎನ್ನುವ ಉಪಶೀರ್ಷಿಕೆಯನ್ನು ನೀಡಿದೆ. ಅಲ್ಲದೇ ಸಸತ 7ನೇ ಬಾರಿಗೆ ಗುಜರಾತಿ ಮನಗೆದ್ದ ಬಿಜೆಪಿ: ಫಲ ನೀಡಿದ ಮೋದಿ, ಅಮಿತ್‌ ಶಾ ಚಾಣಕ್ಯ ಜೋಡಿ ತಂತ್ರ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ: ಆಡಲಿತರೂಢ ಬಿಜೆಪಿಗೆ ತೀವ್ರ ಮುಖಭಂಗ ಎನ್ನುವ ಮತ್ತೆ ಎರಡು ಉಪಶೀರ್ಷಿಕೆಗಳನ್ನೂ ನೀಡಿದೆ.

ಮೋದಿ ನಾಮವೇ BJP ಬಲ,

ಮೋದಿ ನಾಮವೇ BJP ಬಲ, "ಕೈ"ಗೆ ತಂಪೆರೆದ ಹಿಮ

ಉದಯವಾಣಿ ದಿನಪತ್ರಿಕೆ "ಮೋದಿ ನಾಮವೇ ಬಿಜೆಪಿ ಬಲ" ಶೀರ್ಷಿಕೆ, "ಕಾಂಗ್ರೆಸ್‌ಗೆ ತಂಪೆರೆದ ಹಿಮ" ಆಕರ್ಷಕ ಶೀರ್ಷಿಕೆಯನ್ನು ನೀಡಿದೆ. ಕನ್ನಡಪ್ರಭ ದಿನಪತ್ರಿಕೆ "ಗುಜರಾತ್‌ ನಮೋಸುತ್ತಿ", "ಹಿಮಾಚಲ ಪ್ರದೇಶ ಕಾಂಗ್ರೆಸ್‌ಗೆ ಬೂಸ್ಟರ್‌" ಎನ್ನುವ ಶೀರ್ಷಿಕೆಗಳನ್ನು ನೀಡಿದೆ.

ಗುಜರಾತ್‌: ಬಿಜೆಪಿ ದಾಖಲೆ, ಹಿಮಾಚಲ ಕೈ ವಶ

ಗುಜರಾತ್‌: ಬಿಜೆಪಿ ದಾಖಲೆ, ಹಿಮಾಚಲ ಕೈ ವಶ

ವಾರ್ತಾ ಭಾರತಿ ದಿನಪತ್ರಿಕೆ "ಗುಜರಾತ್‌: ಬಿಜೆಪಿ ದಾಖಲೆ", "ಹಿಮಾಚಲ ಕೈ ವಶ" ಎನ್ನುವ ಶೀರ್ಷಿಕೆಯನ್ನು ನೀಡಿದೆ. ಹಾಗೆಯೇ ಗುಜರಾತ್‌ನಲ್ಲಿ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ, ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಎನ್ನುವ ಉಪಶೀರ್ಷಿಕೆಗಳನ್ನು ನೀಡಿದೆ.

ಗುಜರಾತ್‌ ಕಮಲ ಕೈಗೊಲಿದ ಹಿಮಾಚಲ

ಗುಜರಾತ್‌ ಕಮಲ ಕೈಗೊಲಿದ ಹಿಮಾಚಲ

ಇನ್ನು ವಿಜಯವಾಣಿ ದಿನಪತ್ರಿಕೆಯಲ್ಲಿ "ಗುಜರಾತ್‌ ಕಮಲ ಕೈಗೊಲಿದ ಹಿಮಾಚಲ" ಎನ್ನುವ ಆತ್ಯಾಕರ್ಷಕ ಶೀರ್ಷಿಕೆಯನ್ನು ನೀಡಿದ್ದಾರೆ. ಏನಾದ್ರೂ ಆಗ್ಬೇಕಂದ್ರೆ ಅದೃಷ್ಟ ಮಾಡಿರಬೇಕಂತೆ ಅನ್ನುವ ರೀತಿಯಲ್ಲಿ "ಕೈಗೊಲಿದ ಹಿಮಾಚಲ" ಎನ್ನುವ ಶೀರ್ಷಿಕೆ ಇದೆ.

ಗುಜರಾತ್‌ನಲ್ಲಿ ಕಮಲ, 'ಕೈ'ಗೆ ಹಿಮಾಚಲ

ಗುಜರಾತ್‌ನಲ್ಲಿ ಕಮಲ, 'ಕೈ'ಗೆ ಹಿಮಾಚಲ

ಪ್ರಜಾವಾಣಿ ದಿನಪತ್ರಿಕೆ "ಗುಜರಾತ್‌ನಲ್ಲಿ ಕಮಲ", "'ಕೈ'ಗೆ ಹಿಮಾಚಲ" ಎನ್ನುವ ಶೀರ್ಷಿಕೆ ನೀಡಿದೆ. "ಕೈ", ಕಮಲದ ಜಯವನ್ನು ಹೀಗೆ ಬಿಂಬಿಸಲಾಗಿದೆ.

ಗುಜರಾತ್‌ನಲ್ಲಿ ಅಚಲ ಕಾಂಗ್ರೆಸ್‌ಗೆ ಹಿಮಾಚಲ

ಗುಜರಾತ್‌ನಲ್ಲಿ ಅಚಲ ಕಾಂಗ್ರೆಸ್‌ಗೆ ಹಿಮಾಚಲ

ವಿಜಯ ಕರ್ನಾಟಕ ದಿನಪತ್ರಿಕೆ "ಗುಜರಾತ್‌ನಲ್ಲಿ ಅಚಲ ಕಾಂಗ್ರೆಸ್‌ಗೆ ಹಿಮಾಚಲ" ಎನ್ನುವ ಶೀರ್ಷಿಕೆಯನ್ನು ನೀಡಿದೆ. ಹಾಗೆಯೇ ಗುಜಾರಾತ್‌ನಲ್ಲಿ ಬಿಜೆಪಿ ಗೆಲುವು, ಹಿಮಾಚಲದಲ್ಲಿ ಕಾಂಗ್ರೆಸ್‌ ಗೆಲುವಿನ ಕಾರಣಗಳನ್ನು ವಿವರವಾಗಿ ನೀಡಿದೆ. ಹೀಗೆ ಕನ್ನಡ ದಿನಪತ್ರಿಕೆಗಳು ಆಕರ್ಷಕ ಶೀರ್ಷಿಕೆಗಳನ್ನು ನೀಡಿವೆ.

English summary
Gujarat, Himachal Pradesh election results 2022: BJP win in gujarat, Congress win in Himachal pradesh, Here see Kannada news papers interesting headlines for BJP victory in gujarat, and Congress victory in Himachal pradesh. ಗುಜರಾತ್, ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ 2022:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X